ಸರ್ಕಾರದ ಹೊಸ ತಗಾದೆ, ಗುತ್ತಿಗೆ ವೈದ್ಯರ ನೇಮಕಾತಿ OK, ಆದ್ರೆ ಷರತ್ತು ಅನ್ವಯಿಸುತ್ತೆ
ಬೆಂಗಳೂರು: ಗುತ್ತಿಗೆ ವೈದ್ಯರನ್ನ ಖಾಯಂ ಮಾಡುವ ವಿಚಾರದಲ್ಲಿ ಸರ್ಕಾರ ಕೆಲ ಷರತ್ತುಗಳನ್ನ ವಿಧಿಸಿದೆ. ವೈದ್ಯರು ಸಲ್ಲಿಸಿರುವ ಸೇವಾವಧಿಯ ಪ್ರತಿ ಆರು ತಿಂಗಳ ಅವಧಿಗೆ 2.5 ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಿದೆ. ಇದರಂತೆ ಗರಿಷ್ಠ 30ರಷ್ಟು ಗ್ರೇಸ್ ಮಾರ್ಕ್ಸ್‌ಗಳನ್ನ ವೈದ್ಯರಿಗೆ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ. ಮಾಧುಸ್ವಾಮಿ ತಿಳಿಸಿದರು. ರಾಜ್ಯದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಲು ಅಮೆರಿಕಾದ ಬೋಸ್ಟನ್ ಕನ್ಸಲ್ಟಿಂಗ್ ಸಂಸ್ಥೆಯನ್ನ ನಾಲೇಜ್ ಪಾರ್ಟ್‌ನರ್ ಆಗಿ ಸರ್ಕಾರ […]
ಬೆಂಗಳೂರು: ಗುತ್ತಿಗೆ ವೈದ್ಯರನ್ನ ಖಾಯಂ ಮಾಡುವ ವಿಚಾರದಲ್ಲಿ ಸರ್ಕಾರ ಕೆಲ ಷರತ್ತುಗಳನ್ನ ವಿಧಿಸಿದೆ. ವೈದ್ಯರು ಸಲ್ಲಿಸಿರುವ ಸೇವಾವಧಿಯ ಪ್ರತಿ ಆರು ತಿಂಗಳ ಅವಧಿಗೆ 2.5 ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಿದೆ. ಇದರಂತೆ ಗರಿಷ್ಠ 30ರಷ್ಟು ಗ್ರೇಸ್ ಮಾರ್ಕ್ಸ್‌ಗಳನ್ನ ವೈದ್ಯರಿಗೆ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ. ಮಾಧುಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಲು ಅಮೆರಿಕಾದ ಬೋಸ್ಟನ್ ಕನ್ಸಲ್ಟಿಂಗ್ ಸಂಸ್ಥೆಯನ್ನ ನಾಲೇಜ್ ಪಾರ್ಟ್‌ನರ್ ಆಗಿ ಸರ್ಕಾರ ನೇಮಿಸಿದೆ ಎಂದು ಮಾಧುಸ್ವಾಮಿ ತಿಳಿಸಿದರು. ಈ ಸಂಸ್ಥೆಗೆ ರಾಜ್ಯದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಕರೆತರುವ ಜವಾಬ್ದಾರಿ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಈ ಮಧ್ಯೆ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಮಾತ್ರ ಸೊಪ್ಪು ಹಾಕದ ಸರ್ಕಾರ ಇದಲ್ಲದೇ ಐದು ವಿದ್ಯುತ್ ಕಂಪನಿಗಳಿಗೆ 2500 ಕೋಟಿ ಸಾಲವನ್ನ ಸರ್ಕಾರ ನೀಡಲಿದೆ. ಮೆಡಿಕಲ್ ಎಮರ್ಜೆನ್ಸಿ ಸಮಯದಲ್ಲಿ ಉಪಯೋಗಕ್ಕಾಗಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ, ಹೈ ಫ್ಲೋ ಆಕ್ಸಿಜನ್ ಅಳವಡಿಕೆಗಾಗಿ ಉಪರಕಣಗಳಿಗೆ ಅನುದಾನ ಮಂಜೂರು ಮತ್ತು ವಿಜಯಪುರ ಏರ್‌ಪೋರ್ಟ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆಯನ್ನ ಸಚಿವ ಸಂಪುಟ ನೀಡಿದೆಯೆಂದು ಮಾಧುಸ್ವಾಮಿ ತಿಳಿಸಿದ್ದಾರೆ. ಆದ್ರೆ ವೈದ್ಯರ ಬೇಡಿಕೆ ಈಡೇರಿಸಿದ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಮಾತ್ರ ಸೊಪ್ಪು ಹಾಕಿಲ್ಲ.
Published On - 2:56 pm, Thu, 9 July 20