
ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದಲ್ಲಿ ವೈರಸ್ ನಿಯಂತ್ರಣ ವಿಚಾರವಾಗಿ ಇಂದು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ವಿರುದ್ಧ ಸಚಿವ ಆರ್.ಅಶೋಕ್ ಗರಂ ಆಗಿದ್ದರು. ವಲಯದ ಉಸ್ತುವಾರಿ ಹೊತ್ತಿರುವ ಸಚಿವ ಅಶೋಕ್ ಇಂದು ಆಸ್ಪತ್ರೆಗಳ ಆಡಳಿತ ಮಂಡಳಿಯವರನ್ನ ತರಾಟೆಗೆ ತೆಗೆದುಕೊಂಡರು.
‘ಇಷ್ಟು ದಿನ ದುಡ್ಡು ಮಾಡಿದ್ದೀರಿ, ಈಗ ಮಾನವೀಯತೆ ಮೆರೆಯಿರಿ’
ಖಾಸಗಿ ಆಸ್ಪತ್ರೆಗಳ ವಿರುದ್ಧ ಗರಂ ಆಗಿದ್ದ ಅಶೋಕ್ ಇಷ್ಟು ದಿನ ದುಡ್ಡು ಮಾಡಿದ್ದೀರಿ. ಈಗ ಸ್ವಲ್ಪ ಮಾನವೀಯತೆ ಮೆರೆಯಿರಿ. ಕೊರೊನಾ ನಿಯಂತ್ರಣಕ್ಕೆ ನೀವು ಸಹಕಾರ ಕೊಡಲೇಬೇಕಾಗಿದೆ ಎಂದು ಹೇಳಿದರು. ಜೊತೆಗೆ, ಸಾಯೋವರೆಗೆ ದುಡ್ಡು ಮಾಡಬಹುದು. ಆದರೆ, ಈಗ ನಮಗೆ ನೆರವು ನೀಡ್ಬೇಕು ಎಂದು ಅವರಿಗೆ ತಾಕೀತು ಸಹ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಧಾರಾಳ ಮನಸ್ಸಿನಿಂದ ಈಗ ಸರ್ಕಾರದ ಜೊತೆಗೆ ನಿಲ್ಲಲೇಬೇಕು. ಮಂಗಳವಾರದ ಸಭೆಗೆ ಹಾಜರಾಗಿ. ನಿಮಗೆ ಬೇಕಾದ ಸಹಾಯ ಮಾಡ್ತೀವಿ. ಆದರೆ, ಇನ್ನು ಆರು ತಿಂಗಳು ಕೆಲಸ ಮಾಡಬೇಕು ಎಂದ ಅಶೋಕ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
Published On - 3:58 pm, Sat, 11 July 20