
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಆಗುತ್ತಿದೆಯಾ ಕೊರೊನಾ ಸಾವಿನ ರಾಜಧಾನಿ? ಯಾಕಂದ್ರೆ ಭಯಂಕರ ಕೊರೊನಾ ಮಾರಿಗೆ ಇವತ್ತೊಂದೇ ದಿನ ಬರೋಬ್ಬರಿ 45 ಜನರು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.
ಹೌದು ಕೊರೊನಾದಿಂದ ಇಂದು ರಾಜ್ಯದಲ್ಲಿ 71 ಜನರು ಸಾವನ್ನಪ್ಪಿದ್ದಾರೆ. ಇದ್ರಲ್ಲಿ ಬೆಂಗಳೂರಿನ ಸಂಖ್ಯೆ 45. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 684 ಜನರು ಸಾವನ್ನಪ್ಪಿದ್ರೆ, ಬೆಂಗಳೂರಿನಲ್ಲಿ ಇದುವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 274ಕ್ಕೇರಿದೆ
ಹಾಗೇನೆ ಹೊಸದಾಗಿ ಇಂದು ಕೊರೊನಾ ಪಾಸಿಟಿವ್ ಆಗಿರೋರ ಸಂಖ್ಯೆ 2627 ಆದ್ರೆ, ಬೆಂಗಳೂರಿನ ಸಂಖ್ಯೆಯೇ 1525ರಷ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಪೀಡಿತರ ಸಂಖ್ಯೆ 38,843 ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.