ಮಂಗಳವಾರ ರಾತ್ರಿ 8 ಗಂಟೆಯಿಂದ ಸ್ತಬ್ಧವಾಗಲಿದೆ ರಾಜಧಾನಿ
ಬೆಂಗಳೂರು: ಸರ್ಕಾರದ ಅಂದಾಜಿಗೆ ಸಿಗಲಿಲ್ಲ. ತಜ್ಞರ ಮಾತು ಸುಳ್ಳಾಗಲಿಲ್ಲ. ಕೊರೊನಾ ಹೆಮ್ಮಾರಿ ರಾಜಧಾನಿಯನ್ನ ಸಂಪೂರ್ಣ ಆವರಿಸಿಕೊಂಡಿದೆ. ಕೊರೊನಾದ ಈ ಉಡದ ಪಟ್ಟಿನಿಂದ ಬಿಡಿಸಿಕೊಳ್ಳಲು ಸರ್ಕಾರ ಲಾಕ್‌ಡೌನ್ ದಾಳ ಹಾಕಿದೆ. ನಾಳೆ ರಾತ್ರಿ 8ಗಂಟೆಯಿಂದಲೇ ಒಂದು ವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸಂಪೂರ್ಣ ಶಟ್‌ಡೌನ್ ಆಗಲಿದೆ. ಆದ್ರೆ, ಈ ಲಾಕ್‌ಡೌನ್ ವೇಳೆಯಲ್ಲೇ ಹುಟ್ಟಿಕೊಂಡಿರುವ ಮತ್ತೊಂದು ಯಕ್ಷಪ್ರಶ್ನೆ ಎಂದ್ರೆ ಲಾಕ್‌ಡೌನ್ ಒಂದು ವಾರನಾ? ಒಂದು ತಿಂಗಳಾ? ಅನ್ನೋದು? 7 ದಿನದ ಲಾಕ್‌ಡೌನಾ..? 1 ತಿಂಗಳು ಬಂದ್ […]

ಬೆಂಗಳೂರು: ಸರ್ಕಾರದ ಅಂದಾಜಿಗೆ ಸಿಗಲಿಲ್ಲ. ತಜ್ಞರ ಮಾತು ಸುಳ್ಳಾಗಲಿಲ್ಲ. ಕೊರೊನಾ ಹೆಮ್ಮಾರಿ ರಾಜಧಾನಿಯನ್ನ ಸಂಪೂರ್ಣ ಆವರಿಸಿಕೊಂಡಿದೆ. ಕೊರೊನಾದ ಈ ಉಡದ ಪಟ್ಟಿನಿಂದ ಬಿಡಿಸಿಕೊಳ್ಳಲು ಸರ್ಕಾರ ಲಾಕ್‌ಡೌನ್ ದಾಳ ಹಾಕಿದೆ.
ನಾಳೆ ರಾತ್ರಿ 8ಗಂಟೆಯಿಂದಲೇ ಒಂದು ವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸಂಪೂರ್ಣ ಶಟ್‌ಡೌನ್ ಆಗಲಿದೆ. ಆದ್ರೆ, ಈ ಲಾಕ್‌ಡೌನ್ ವೇಳೆಯಲ್ಲೇ ಹುಟ್ಟಿಕೊಂಡಿರುವ ಮತ್ತೊಂದು ಯಕ್ಷಪ್ರಶ್ನೆ ಎಂದ್ರೆ ಲಾಕ್‌ಡೌನ್ ಒಂದು ವಾರನಾ? ಒಂದು ತಿಂಗಳಾ? ಅನ್ನೋದು?
7 ದಿನದ ಲಾಕ್‌ಡೌನಾ..? 1 ತಿಂಗಳು ಬಂದ್ ಆಗುತ್ತಾ..? ಇಂಥದ್ದೊಂದು ಪ್ರಶ್ನೆ ಜನಸಾಮಾನ್ಯರಲ್ಲಿ ಕೇಳಿಬರ್ತಿರೋ ಗಾಳಿಮಾತಲ್ಲ. ಯಾರೋ ತೇಲಿಬಿಟ್ಟ ವಿಷಯವಲ್ಲ. ಇಂಥಾ ಅನುಮಾನ ಹುಟ್ಟೋಕೆ ಖುದ್ದು ಸಚಿವರೇ ಹೇಳಿರೋ ಮಾತುಗಳು.
ಈಗ 7 ದಿನ ಲಾಕ್‌ಡೌನ್ ಮಾಡ್ತಿದ್ದೇವೆ. ಅದನ್ನ ವಿಸ್ತರಿಸುವ ಬಗ್ಗೆ ತಜ್ಞರ ವರದಿ ನೋಡ್ತೀವಿ ಅಂತಿದ್ದಾರೆ ಸಚಿವ ಸುಧಾಕರ್. ಸುದೀರ್ಘವಾದ ಹೋರಾಟ ಎನ್ನುತ್ತಲೇ, ಮತ್ತಷ್ಟು ದಿನ ಲಾಕ್‌ಡೌನ್ ವಿಸ್ತರಿಸಬೇಕಾಗಬಹುದು ಎಂಬ ಸಂಶಯ ಹುಟ್ಟುಹಾಕಿದ್ದಾರೆ. ಹೀಗಾಗೇ, ಈ ಲಾಕ್‌ಡೌನ್ ಕೇವಲ ಒಂದು ವಾರಕ್ಕಲ್ಲ, ಅದಕ್ಕೂ ಹೆಚ್ಚಿಗೆ ಆಗುತ್ತೆ ಅನ್ನೋ ಅನುಮಾನ ಎದ್ದಿವೆ. ಒಂದು ವೇಳೆ ಇದೇ ಅಂದಾಜು ನಿಜವಾದ್ರೆ, ಎಷ್ಟು ದಿನ ಲಾಕ್‌ಡೌನ್ ಆಗಬಹುದು. ಸರ್ಕಾರ ಏನ್ ಮಾಡ್ಬಹುದು ಅನ್ನೋ ವಿವರ ಹೇಳ್ತೀವಿ ನೋಡಿ.
ಒಂದು ತಿಂಗಳು ಲಾಕ್‌ಡೌನ್..? ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲು ಹಾಗೂ ಕೊರೊನಾ ವ್ಯಾಪಿಸೋದಕ್ಕೆ ಬ್ರೇಕ್ ಹಾಕಲು ಸದ್ಯ ಒಂದು ವಾರದ ಲಾಕ್‌ಡೌನ್ ಜಾರಿ ಮಾಡಿದೆ. ಒಂದು ವಾರದ ಲಾಕ್‌ಡೌನ್ ಫಲಿತಾಂಶ ಮುಂದಿನ ವಾರ ಗೊತ್ತಾಗುತ್ತೆ. ಅಂದ್ರೆ ಬೆಂಗಳೂರಿನಲ್ಲಿ ಕೊರೊನಾ ವ್ಯಾಪಿಸುವ ವೇಗ ತಗ್ಗಿದ್ಯಾ, ಇಲ್ವಾ ಅನ್ನೋದು ಅಂದಾಜಿಗೆ ಸಿಗಲಿದೆ.
ಸರ್ಕಾರ ಈ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಎಷ್ಟು ಪ್ರಮಾಣದಲ್ಲಿ ಕೊರೊನಾ ಕಂಟ್ರೋಲ್ಗೆ ಬಂತು ಅನ್ನೋ ಡೇಟಾ ಸಂಗ್ರಹಿಸುತ್ತೆ. ಈ ಅವಧಿಯಲ್ಲಿ ಕೊರೊನಾ ಸ್ವಲ್ಪನಿಯಂತ್ರಣಕ್ಕೆ ಬಂದ್ರೆ ಲಾಕ್‌ಡೌನ್ ಮುಂದುವರಿಸುವ ಸಾಧ್ಯತೆಯಿದೆ. ಅಂದ್ರೆ ಸೋಂಕಿನ ಗ್ರಾಫ್ ಇಳಿಸಲು ಒಂದು ವಾರದ ಲಾಕ್‌ಡೌನ್ ಅನ್ನ ಎರಡು ವಾರಕ್ಕೆ ಅಥವಾ 15 ದಿನಕ್ಕೆ ವಿಸ್ತರಿಸೋ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇಲ್ಲದಿದ್ರೆ, ಕಂಪ್ಲೀಟ್ ಒಂದು ತಿಂಗಳು ಲಾಕ್‌ಡೌನ್ ಮಾಡಬಹುದು.
ಒಟ್ನಲ್ಲಿ, ಸರ್ಕಾರ ಏನೇ ಮಾಡಿದ್ರೂ, ಏನೇ ನಿರ್ಧಾರ ತೆಗೆದುಕೊಂಡು ತಜ್ಞರ ವರದಿಯನ್ನ ಆಧರಿಸಿಯೇ ಮುಂದಿನ ಹೆಜ್ಜೆ ಇಡಬೇಕಾಗಿದೆ.. ಈ ಹಿಂದೆ ಮಾಡಿದ ತಪ್ಪನ್ನ ಈಗ ಮಾಡದಿರಲು ಸರ್ಕಾರವೂ ತೀರ್ಮಾನಿಸಿದೆ. ಹೀಗಾಗಿ, ಬೆಂಗಳೂರಿನಲ್ಲಿ ಒಂದು ವಾರವಷ್ಟೇ ಅಲ್ಲ ಒಂದು ವಾರದ ಬಳಿಕವೂ ಲಾಕ್‌ಡೌನ್ ಮುಂದುವರಿದ್ರೆ ಅಚ್ಚರಿಯಿಲ್ಲ.
Published On - 7:07 am, Mon, 13 July 20




