ಊರು ಬಿಟ್ಟು, ಸ್ವಂತ ಗೂಡು ಸೇರುತ್ತಿದ್ದಾರೆ ಬೆಂಗಳೂರು ಮಂದಿ, ಬಸ್ ನಿಲ್ದಾಣಗಳು ಫುಲ್
[lazy-load-videos-and-sticky-control id=”hBE6y6JBbh0″] ಬೆಂಗಳೂರು: ಜುಲೈ 14ರಿಂದ ಒಂದು ವಾರ ಬೆಂಗಳೂರು ಲಾಕ್‌ಡೌನ್ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದಿಂದ ಅನೇಕ ಮಂದಿ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ತಮ್ಮೂರಿಗೆ ತೆರಳಲು ಗಂಟು ಮೂಟೆ ಸಮೇತ ಮೆಜೆಸ್ಟಿಕ್‌ಗೆ ಪ್ರಯಾಣಿಕರು ಬಂದಿದ್ದು, ಬಸ್ಸುಗಳಿಗಾಗಿ ಕಾದು ಕುಳಿತಿರೋ ದೃಶ್ಯ ಕಂಡು ಬಂದಿದೆ. ಕೇವಲ ಮೆಜೆಸ್ಟಿಕ್ ಅಲ್ಲದೆ ಸ್ಯಾಟಲೈಟ್ ಬಸ್ ನಿಲ್ದಾಣ ತುಂಬಿ ಹೋಗಿದೆ. ಮೈಸೂರು ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ4 8ನೇ ಮೈಲಿಯಲ್ಲಿರುವ ನವಯುಗ ಟೋಲ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. […]
[lazy-load-videos-and-sticky-control id=”hBE6y6JBbh0″]
ಬೆಂಗಳೂರು: ಜುಲೈ 14ರಿಂದ ಒಂದು ವಾರ ಬೆಂಗಳೂರು ಲಾಕ್‌ಡೌನ್ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದಿಂದ ಅನೇಕ ಮಂದಿ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ತಮ್ಮೂರಿಗೆ ತೆರಳಲು ಗಂಟು ಮೂಟೆ ಸಮೇತ ಮೆಜೆಸ್ಟಿಕ್‌ಗೆ ಪ್ರಯಾಣಿಕರು ಬಂದಿದ್ದು, ಬಸ್ಸುಗಳಿಗಾಗಿ ಕಾದು ಕುಳಿತಿರೋ ದೃಶ್ಯ ಕಂಡು ಬಂದಿದೆ.
ಕೇವಲ ಮೆಜೆಸ್ಟಿಕ್ ಅಲ್ಲದೆ ಸ್ಯಾಟಲೈಟ್ ಬಸ್ ನಿಲ್ದಾಣ ತುಂಬಿ ಹೋಗಿದೆ. ಮೈಸೂರು ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ4 8ನೇ ಮೈಲಿಯಲ್ಲಿರುವ ನವಯುಗ ಟೋಲ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕೆಲವರು ಟೆಂಪೋಗಳಲ್ಲಿ, ಕ್ರೂಸರ್ ಗಾಡಿಗಳಲ್ಲಿ ಮನೆಯ ಸಾಮಾನುಗಳನ್ನು ತುಂಬಿಕೊಂಡು ಬೆಂಗಳೂರು ಬಿಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಳೆ ಸಂಜೆಯಿಂದ ಒಂದು ವಾರದ ಲಾಕ್‌ಡೌನ್ ಆದೇಶ ಮಾಡಿದೆ. ಅಲ್ಲದೆ ಕೊರೊನಾ ಈಗ ಸಮೂದಾಯಕ್ಕೂ ಹಬ್ಬುತ್ತಿರುವುದರಿಂದ ಜನ ತಮ್ಮ ತಮ್ಮ ಸ್ವಂತ ಊರುಗಳಿಗೆ ಮರಳುತ್ತಿದ್ದಾರೆ.
Published On - 8:03 am, Mon, 13 July 20