ಸಂಡೇ ಲಾಕ್ಡೌನ್ ಮಧ್ಯೆ ಅದ್ದೂರಿ ಮದುವೆ, ಸಂಭ್ರಮದಲ್ಲಿದ್ದವರಿಗೆ ಖಾಕಿ ಕ್ಲಾಸ್
[lazy-load-videos-and-sticky-control id=”jDxIyDtBvtQ”]ಬೆಂಗಳೂರು: ಇಂದು ವಿಧಿಸಿರುವ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ ನೆರವೇರಿಸಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದೆ. ಇಂದು ಸಂಡೇ ಲಾಕ್ಡೌನ್ ಇರುವುದರಿಂದ ಇಡೀ ಬೆಂಗಳೂರು ಸ್ತಬ್ಧವಾಗಿದೆ. ರಸ್ತೆಗಳು ಖಾಲಿ ಖಾಲಿಯಾಗಿವೆ. ಅಂಗಡಿ, ದೇವಸ್ಥಾನ ಎಲ್ಲವೂ ಕ್ಲೋಸ್ ಆಗಿದೆ. ಆದರೆ ಇದರ ನಡುವೆಯೇ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮದುವೆ ಸಮಾರಂಭ ನೆರವೇರಿದೆ. ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರವಿಲ್ಲದೆ, ಕೊರೊನಾ ಬಗ್ಗೆ ಕಿಂಚಿತ್ತು ಭಯವಿಲ್ಲದೇ ನೂರಾರು ಜನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದೈಹಿಕ […]
[lazy-load-videos-and-sticky-control id=”jDxIyDtBvtQ”]ಬೆಂಗಳೂರು: ಇಂದು ವಿಧಿಸಿರುವ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ ನೆರವೇರಿಸಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದೆ.
ಇಂದು ಸಂಡೇ ಲಾಕ್ಡೌನ್ ಇರುವುದರಿಂದ ಇಡೀ ಬೆಂಗಳೂರು ಸ್ತಬ್ಧವಾಗಿದೆ. ರಸ್ತೆಗಳು ಖಾಲಿ ಖಾಲಿಯಾಗಿವೆ. ಅಂಗಡಿ, ದೇವಸ್ಥಾನ ಎಲ್ಲವೂ ಕ್ಲೋಸ್ ಆಗಿದೆ. ಆದರೆ ಇದರ ನಡುವೆಯೇ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮದುವೆ ಸಮಾರಂಭ ನೆರವೇರಿದೆ.
ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರವಿಲ್ಲದೆ, ಕೊರೊನಾ ಬಗ್ಗೆ ಕಿಂಚಿತ್ತು ಭಯವಿಲ್ಲದೇ ನೂರಾರು ಜನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದೈಹಿಕ ಅಂತರ ಪಾಲಿಸದ ಹಿನ್ನೆಲೆಯಲ್ಲಿ ಪೊಲೀಸರು ಜನರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಮದುವೆಯಲ್ಲಿದ್ದವರನ್ನು ಹೊರಗೆ ಕಳಿಸಿದ್ದಾರೆ.
Published On - 2:45 pm, Sun, 12 July 20