ಶಿಡ್ಲಘಟ್ಟ ವೃತ್ತದಲ್ಲಿ ಆ್ಯಕ್ಸಿಸ್ ಬ್ಯಾಂಕ್‌ ATMನಲ್ಲಿ ಕಳ್ಳತನ

ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ನ ಎಟಿಎಂನಲ್ಲಿ ಕಳ್ಳತನ ನಡೆದಿದೆ. ದುಷ್ಕರ್ಮಿಗಳು ಗ್ಯಾಸ್ ಕಟರ್‌ನಿಂದ ಎಟಿಎಂ ಕಟ್ ಮಾಡಿ ಹಣ ಲೂಟಿ ಮಾಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಒಳಗೆ ಹಣ ದೋಚಿರುವುದಾಗಿ ತಿಳಿದುಬಂದಿದೆ. ATMಗೆ ಖನ್ನ ಹಾಕಿ, ಗ್ಯಾಸ್ ಕಟರ್ ನಿಂದ ಮಷಿನ್ ಓಪನ್ ಮಾಡಿ ಹಣ ಲೂಟಿ ಮಾಡಿರುವ ಪ್ರಕರಣದಲ್ಲಿ ಎ.ಟಿ.ಎಂ. ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಈ ಹಿಂದೆಯೂ ದುಷ್ಕರ್ಮಿಗಳು ಎರಡು ಭಾರಿ ಕಳ್ಳತನಕ್ಕೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ […]

ಶಿಡ್ಲಘಟ್ಟ ವೃತ್ತದಲ್ಲಿ ಆ್ಯಕ್ಸಿಸ್ ಬ್ಯಾಂಕ್‌ ATMನಲ್ಲಿ ಕಳ್ಳತನ

Updated on: Aug 29, 2020 | 11:23 AM

ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ನ ಎಟಿಎಂನಲ್ಲಿ ಕಳ್ಳತನ ನಡೆದಿದೆ. ದುಷ್ಕರ್ಮಿಗಳು ಗ್ಯಾಸ್ ಕಟರ್‌ನಿಂದ ಎಟಿಎಂ ಕಟ್ ಮಾಡಿ ಹಣ ಲೂಟಿ ಮಾಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಒಳಗೆ ಹಣ ದೋಚಿರುವುದಾಗಿ ತಿಳಿದುಬಂದಿದೆ.

ATMಗೆ ಖನ್ನ ಹಾಕಿ, ಗ್ಯಾಸ್ ಕಟರ್ ನಿಂದ ಮಷಿನ್ ಓಪನ್ ಮಾಡಿ ಹಣ ಲೂಟಿ ಮಾಡಿರುವ ಪ್ರಕರಣದಲ್ಲಿ ಎ.ಟಿ.ಎಂ. ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಈ ಹಿಂದೆಯೂ ದುಷ್ಕರ್ಮಿಗಳು ಎರಡು ಭಾರಿ ಕಳ್ಳತನಕ್ಕೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ. ಮಿಥುನ್ ‌ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.