ಆನೇಕಲ್: ವಾಹನಕ್ಕೆ ಸಿಕ್ಕಿ ಮೃತಪಟ್ಟ ಚಿರತೆ ಮರಿ ಪತ್ತೆ

ಆನೇಕಲ್: ರಸ್ತೆಬದಿಯಲ್ಲಿ ಮೃತ ಚಿರತೆ ಮರಿ ದೇಹ ಪತ್ತೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ನ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತಲಿಂಗಾಪುರ ಸಮೀಪದ ರಸ್ತೆ ಪಕ್ಕದಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆ ಮರಿ ದೇಹ ಸಿಕ್ಕಿದೆ. ವಾಹನಕ್ಕೆ ಸಿಲುಕಿ ಮರಿ ಮೃತಪಟ್ತಾ? ಇತ್ತೀಚೆಗೆ ಜಿಗಣಿ ಬಳಿಯ ಕೃಷ್ಣದೊಡ್ಡಿ ಬಳಿ ತಾಯಿ ಚಿರತೆ ಜೊತೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಸ್ಥಳೀಯರು ಚಿರತೆ ಮರಿಗಳು ತಾಯಿ ಜೊತೆ ಆಟವಾಡುತ್ತಿರುವುದನ್ನು ನೋಡಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು. ಇದೀಗ […]

ಆನೇಕಲ್: ವಾಹನಕ್ಕೆ ಸಿಕ್ಕಿ ಮೃತಪಟ್ಟ ಚಿರತೆ ಮರಿ ಪತ್ತೆ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 13, 2020 | 10:14 AM

ಆನೇಕಲ್: ರಸ್ತೆಬದಿಯಲ್ಲಿ ಮೃತ ಚಿರತೆ ಮರಿ ದೇಹ ಪತ್ತೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ನ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತಲಿಂಗಾಪುರ ಸಮೀಪದ ರಸ್ತೆ ಪಕ್ಕದಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆ ಮರಿ ದೇಹ ಸಿಕ್ಕಿದೆ.

ವಾಹನಕ್ಕೆ ಸಿಲುಕಿ ಮರಿ ಮೃತಪಟ್ತಾ?
ಇತ್ತೀಚೆಗೆ ಜಿಗಣಿ ಬಳಿಯ ಕೃಷ್ಣದೊಡ್ಡಿ ಬಳಿ ತಾಯಿ ಚಿರತೆ ಜೊತೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಸ್ಥಳೀಯರು ಚಿರತೆ ಮರಿಗಳು ತಾಯಿ ಜೊತೆ ಆಟವಾಡುತ್ತಿರುವುದನ್ನು ನೋಡಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು.

ಇದೀಗ ಅದೇ ವ್ಯಾಪ್ತಿಯ ಮಹಂತಲಿಂಗಾಪುರ ಬಳಿ ಮೃತಪಟ್ಟಿರುವ ಚಿರತೆ ಮರಿ ಸಿಕ್ಕಿದೆ. ವಾಹನಕ್ಕೆ ಸಿಕ್ಕಿ ಮರಿ ಮೃತ ಪಟ್ಟಿರಬಹುದಾ ಎಂಬ ಅನುಮಾನ ಉಂಟಾಗಿದೆ. ಐದು ತಿಂಗಳ ಚಿರತೆ ಮರಿ ಎಂದು ಗುರುತಿಸಲಾಗಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us