Bad Breath: ಬಾಯಿ ದುರ್ವಾಸನೆಯ ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು

| Updated By: ಸಾಧು ಶ್ರೀನಾಥ್​

Updated on: Mar 04, 2021 | 5:58 PM

ಬಾಯಿಯ ದುರ್ವಾಸನೆಯನ್ನು ತಡೆಯಲು ಮೌತ್​ ಫ್ರೆಶ್ನರ್ ಅಥವಾ ರಾಸಾಯನಿಕ ಭರಿತ ಟೂತ್​ಪೇಸ್ಟ್​​ಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಜತೆಗೆ ಮನೆ ಮದ್ದಿನ ಮೂಲಕವೂ ಬಾಯಿ ವಾಸನೆಯಿಂದ ಮುಕ್ತಿ ಪಡೆಯಬಹುದು.

Bad Breath: ಬಾಯಿ ದುರ್ವಾಸನೆಯ ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು
ಸಾಂದರ್ಭಿಕ ಚಿತ್ರ
Follow us on

ಬಾಯಿಯಿಂದ ಕೆಟ್ಟ ವಾಸನೆ ಬರುವುದೂ ಒಂದು ಸಮಸ್ಯೆ. ಇದರಿಂದ ಪರಿಹಾರ ಪಡೆಯಲು ಅನೇಕರು ಹೆಣಗಾಡುತ್ತಿದ್ದಾರೆ. ನಿಮಗಿರುವ ಬಾಯಿ ವಾಸನೆ ಸಮಸ್ಯೆಯಿಂದ ಅನೇಕರು ನಿಮ್ಮ ಜತೆ ಮಾತನಾಡಲು ಭಯ ಬೀಳುತ್ತಿರಬಹುದು. ಹೀಗಾಗಿ ಇದು ನೇರವಾಗಿ ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದರೂ ತಪ್ಪಾಗಲಾರದು. ಹಲ್ಲು ಉಜ್ಜದೆ ಬಾಯಿ ವಾಸನೆ ಬರುವುದು ಬೇರೆ. ಆದರೆ, ಪ್ರತಿದಿನ ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿದೆ ಎಂದರೆ ನಿಮ್ಮಲ್ಲಿ ಸಮಸ್ಯೆ ಇದೆ ಎಂದರ್ಥ. ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಹಾನಿಯಿಂದಲೂ ಬಾಯಿವಾಸನೆ ಬರುತ್ತದೆ ಎಂಬುದು ಅಧ್ಯಯನದ ಮೂಲಕ ಸಾಬೀತಾಗಿದೆ.

ಬಾಯಿಯ ದುರ್ವಾಸನೆಯನ್ನು ತಡೆಯಲು ಮೌತ್​ ಫ್ರೆಶ್ನರ್ ಅಥವಾ ರಾಸಾಯನಿಕ ಭರಿತ ಟೂತ್​ಪೇಸ್ಟ್​​ಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಜತೆಗೆ ಮನೆ ಮದ್ದಿನ ಮೂಲಕವೂ ಬಾಯಿ ವಾಸನೆಯಿಂದ ಮುಕ್ತಿ ಪಡೆಯಬಹುದು.

ಹೆಚ್ಚು ನೀರು ಕುಡಿಯಿರಿ: ಬಾಯಿಯಿಂದ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಇದು ರಾಮಬಾಣ. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ, ಆಗಾ ಬಾಯಿಯನ್ನು ನೀರಿನಿಂದ ತೊಳೆಯಿರಿ ಮತ್ತು ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ. ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ಬಾಯಿ ವಾಸನೆಗೆ ಕಾರವಾಗಬಹುದು. ಹೀಗಾಗಿ, ಆಗ್ಗಾಗ ನೀರು ಕುಡಿದರೆ ಬಾಯಿ ತಾಜಾತನದಿಂದ ಕೂಡಿರುತ್ತದೆ.

ಸಾಸಿವೆ ಎಣ್ಣೆ:
ಬಾಯಿ ವಾಸನೆ ಎಂಬುದು ಯಾವಾಗಲೂ ಕಾಡುತ್ತಿದೆಯೇ? ಹಾಗಿದ್ದರೆ ಈ ದುರ್ವಾಸನೆಯನ್ನು ತೊಡೆದುಹಾಕಲು, ಸಾಸಿವೆ ಎಣ್ಣೆಗೆ ಪ್ರತಿದಿನ ಉಪ್ಪು ಬೆರೆಸಿ ಒಸಡು ಮತ್ತು ಹಲ್ಲುಗಳಿಗೆ ಮಸಾಜ್ ಮಾಡಿ. ಇದು ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಒಣ ಕೊತ್ತಂಬರಿ: ಒಣ ಕೊತ್ತಂಬರಿ ಸೇವನೆಯಿಂದ ಬಾಯಿ ತಾಜಾತನದಿಂದ ಕೂಡಿರುತ್ತದೆ. ಇಡೀ ಕೊತ್ತಂಬರಿಯನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಹೋಗುತ್ತದೆ.

ವಿಟಮಿನ್ ಸಿ ಬಳಕೆ: ಬಾಯಿಯ ಕೆಟ್ಟ ವಾಸನೆಯನ್ನು ತೆಗೆದುಹಾಕಲು ವಿಟಮಿನ್ ಸಿ ತುಂಬಾ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ವಿಟಾಮಿನ್​ ಸಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹೀಗಾಗಿ, ನಿಂಬೆ, ಕಿತ್ತಳೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.

ಸೋಂಪು: ಬಾಯಿಯ ದುರ್ವಾಸನೆಯನ್ನು ತೆಗೆದುಹಾಕಲು ಸೋಂಪು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಅದೇ ರೀತಿ ಲವಂಗ ಅಥವಾ ಏಲಕ್ಕಿಯನ್ನು ಸಹ ಬಳಸಬಹುದು. ಇವುಗಳು ಹಲ್ಲು ಮತ್ತು ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.

ಇದನ್ನೂ ಓದಿ: ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು