ಬಡ ತಾಯಿಯ ಆಸೆಯಂತೆ 623/625 ಅಂಕ ಪಡೆದ ಬಾಗಲಕೋಟೆ ವಿದ್ಯಾರ್ಥಿ!

| Updated By: ಸಾಧು ಶ್ರೀನಾಥ್​

Updated on: Aug 10, 2020 | 8:32 PM

ಬಾಗಲಕೋಟೆ: SSLC ಪರೀಕ್ಷೆಯಲ್ಲಿ ಜಿಲ್ಲೆಯ ಬಡ ವಿದ್ಯಾರ್ಥಿಯೊಬ್ಬ ಮೇಲುಗೈ ಸಾಧಿಸಿದ್ದಾನೆ. ಕೃಷಿಕಾರ್ಯ ಮತ್ತು ಹೊಲಿಗೆ ಕೆಲಸ ಮಾಡುವ ಮಹಿಳೆಯ ಮಗ ಆನಂದ ಹೊಸಮನಿ 625ಕ್ಕೆ 623 ಅಂಕ ಪಡೆದಿದ್ದಾನೆ. ಆನಂದ್ ಜಿಲ್ಲೆಯ ಬೀಳಗಿ ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ. ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಆನಂದನಿಗೆ ತಾಯಿಯೇ ಆಧಾರ. ಇದೀಗ, ತಾಯಿಯ ಆಸೆಯಂತೆ ಮಗ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿಕ್ಕಗರಸಂಗಿ ಗ್ರಾಮದ ನಿವಾಸಿಯಾದ ಆನಂದನ […]

ಬಡ ತಾಯಿಯ ಆಸೆಯಂತೆ 623/625 ಅಂಕ ಪಡೆದ ಬಾಗಲಕೋಟೆ ವಿದ್ಯಾರ್ಥಿ!
Follow us on

ಬಾಗಲಕೋಟೆ: SSLC ಪರೀಕ್ಷೆಯಲ್ಲಿ ಜಿಲ್ಲೆಯ ಬಡ ವಿದ್ಯಾರ್ಥಿಯೊಬ್ಬ ಮೇಲುಗೈ ಸಾಧಿಸಿದ್ದಾನೆ. ಕೃಷಿಕಾರ್ಯ ಮತ್ತು ಹೊಲಿಗೆ ಕೆಲಸ ಮಾಡುವ ಮಹಿಳೆಯ ಮಗ ಆನಂದ ಹೊಸಮನಿ 625ಕ್ಕೆ 623 ಅಂಕ ಪಡೆದಿದ್ದಾನೆ.

ಆನಂದ್ ಜಿಲ್ಲೆಯ ಬೀಳಗಿ ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ. ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಆನಂದನಿಗೆ ತಾಯಿಯೇ ಆಧಾರ. ಇದೀಗ, ತಾಯಿಯ ಆಸೆಯಂತೆ ಮಗ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾನೆ.

ಮೂಲತಃ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿಕ್ಕಗರಸಂಗಿ ಗ್ರಾಮದ ನಿವಾಸಿಯಾದ ಆನಂದನ ಫಲಿತಾಂಶ ತಿಳಿದು ಆತನ ತಾಯಿ ಮತ್ತು ಸಹೋದರರು ಆನಂದನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ ಬಡ ನೇಕಾರ 
ಇದಲ್ಲದೆ, ಬನಹಟ್ಟಿ ಪಟ್ಟಣದ ಬಡ ನೇಕಾರನ ಮಗಳು ದಾನೇಶ್ವರಿ ಸಹ ಪರೀಕ್ಷೆಯಲ್ಲಿ 619 ಅಂಕ ಗಳಿಸಿದ್ದಾರೆ. ಪಟ್ಟಣದ SRA ಹೈಸ್ಕೂಲಿನ ವಿದ್ಯಾರ್ಥಿಯಾದ ದಾನೇಶ್ವರಿ ತಂದೆ ತಾಯಿ ನೇಕಾರಿಕೆ ಕೆಲಸ ಮಾಡಿಕೊಂಡು ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ.

Published On - 8:26 pm, Mon, 10 August 20