ಬೆಂವಿವಿ ಕರ್ಮಕಾಂಡ: ವ್ಯಾಸಂಗ ಮುಗಿದರೂ ಹಾಸ್ಟೆಲ್ನಲ್ಲೇ ಉಳಿದವರಿಂದ ಬರ್ತ್ಡೇ ದಾಂಧಲೆ
ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಅದರ ವಿದ್ಯಾರ್ಥಿ ನಿಲಯಗಳಲ್ಲಿನ ಗೋಳು ಇಂದು, ನಿನ್ನೆಯದಲ್ಲ. ಸದಾ ಬೂದಿ ಮುಚ್ಚಿದ ಕೆಂಡದಂತಿರುವ ಬೆಂವಿವಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಶಿಕ್ಷಣ ಮುಗಿದರೂ ಹಾಸ್ಟೆಲ್ಗಳಲ್ಲೇ ವಾಸ್ತವ್ಯ ಮುಂದುವರಿಸುವ ವಿದ್ಯಾರ್ಥಿಗಳ ಹಿಡಿತದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ನರಳುತ್ತಿದ್ದಾರೆ ಎಂಬ ಆರೋಪ ವಿದ್ಯಾರ್ಥಿಗಳಿಂದಲೇ ಕೇಳಿ ಬಂದಿದೆ. ಹುಟ್ಟುಹಬ್ಬದ ವಿಚಾರಕ್ಕೆ ಗಲಾಟೆ: ತಾಜಾ ಪ್ರಕರಣದಲ್ಲಿ ಹುಟ್ಟುಹಬ್ಬದ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ತಡರಾತ್ರಿ ಗಲಾಟೆಯಾಗಿದೆ. ಬೆಂಗಳೂರು ವಿವಿಯ ಪಿಜಿ2 ಹಾಸ್ಟೆಲ್ನಲ್ಲಿ ಬರ್ತ್ಡೇ ಕೇಕ್ ಕಟ್ […]
ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಅದರ ವಿದ್ಯಾರ್ಥಿ ನಿಲಯಗಳಲ್ಲಿನ ಗೋಳು ಇಂದು, ನಿನ್ನೆಯದಲ್ಲ. ಸದಾ ಬೂದಿ ಮುಚ್ಚಿದ ಕೆಂಡದಂತಿರುವ ಬೆಂವಿವಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಶಿಕ್ಷಣ ಮುಗಿದರೂ ಹಾಸ್ಟೆಲ್ಗಳಲ್ಲೇ ವಾಸ್ತವ್ಯ ಮುಂದುವರಿಸುವ ವಿದ್ಯಾರ್ಥಿಗಳ ಹಿಡಿತದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ನರಳುತ್ತಿದ್ದಾರೆ ಎಂಬ ಆರೋಪ ವಿದ್ಯಾರ್ಥಿಗಳಿಂದಲೇ ಕೇಳಿ ಬಂದಿದೆ.
ಹುಟ್ಟುಹಬ್ಬದ ವಿಚಾರಕ್ಕೆ ಗಲಾಟೆ: ತಾಜಾ ಪ್ರಕರಣದಲ್ಲಿ ಹುಟ್ಟುಹಬ್ಬದ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ತಡರಾತ್ರಿ ಗಲಾಟೆಯಾಗಿದೆ. ಬೆಂಗಳೂರು ವಿವಿಯ ಪಿಜಿ2 ಹಾಸ್ಟೆಲ್ನಲ್ಲಿ ಬರ್ತ್ಡೇ ಕೇಕ್ ಕಟ್ ಮಾಡುವ ವಿಚಾರದಲ್ಲಿ ದಾಂಧಲೆ ನಡೆಸಿದ್ದಾರೆ.
8 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ: ಪಿಹೆಚ್‌ಡಿ ಮುಗಿಸಿದ ಬಳಿಕವೂ ಹಾಸ್ಟೆಲ್ನಲ್ಲಿ ಬೀಡುಬಿಟ್ಟಿರುವವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆ ಮಾಡಲು ಯತ್ನಿಸಿದವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಎರಡೂ ಬಣದ 8 ವಿದ್ಯಾರ್ಥಿಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
Published On - 12:37 pm, Sat, 11 January 20