ಸಿಲಿಕಾನ್ ಸಿಟಿಯಲ್ಲೊಬ್ಬ ಎಡವಟ್ಟಿನ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್.. ಕಂತೆ ಕಂತೆ ಹಣ ಎಣಿಸುತಿದ್ದವ ಕಂಬಿ ಹಿಂದೆ

|

Updated on: Jan 25, 2021 | 9:49 AM

ಅರುಣ್ ವೀರ ಮಲ್ಲ ಎಂಬ ಬ್ರಾಂಚ್ ಮ್ಯಾನೇಜರ್ ಮನಿ ಡಬ್ಲಿಂಗ್ ಆಸೆಗೆ ಬಿದ್ದು ಕೋಟಿ ಹಣ ಹೂಡಿ ಪೊಲೀಸರ ಅತಿಥಿಯಾಗಿದ್ದಾನೆ. ಅರುಣ್ ವೀರ ಮಲ್ಲ, ಪ್ರತಿಷ್ಠಿತ ಬ್ಯಾಂಕ್​ನ ರಾಜರಾಜೇಶ್ವರಿ ನಗರದ ಬ್ರಾಂಚ್ ಮ್ಯಾನೇಜರ್.

ಸಿಲಿಕಾನ್ ಸಿಟಿಯಲ್ಲೊಬ್ಬ ಎಡವಟ್ಟಿನ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್.. ಕಂತೆ ಕಂತೆ ಹಣ ಎಣಿಸುತಿದ್ದವ ಕಂಬಿ ಹಿಂದೆ
ಅರುಣ್ ವೀರ ಮಲ್ಲ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಕಳ್ಳದಾರಿಯ ಮೊದಲ ಪ್ರಯತ್ನದಲ್ಲೇ ಎಡವಟ್ಟು ಮಾಡಿಕೊಂಡು ಕಂಬಿ ಹಿಂದೆ ಲಾಕ್ ಆಗಿದ್ದಾನೆ. ಕಂತೆ ಕಂತೆ ಹಣ ಎಣಿಸುತಿದ್ದವನು ಕಂಬಿ ಎಣಿಸುತ್ತಿದ್ದಾನೆ.

ಅರುಣ್ ವೀರ ಮಲ್ಲ ಎಂಬ ಬ್ರಾಂಚ್ ಮ್ಯಾನೇಜರ್ ಮನಿ ಡಬ್ಲಿಂಗ್ ಆಸೆಗೆ ಬಿದ್ದು ಕೋಟಿ ಹಣ ಹೂಡಿ ಪೊಲೀಸರ ಅತಿಥಿಯಾಗಿದ್ದಾನೆ. ಅರುಣ್ ವೀರ ಮಲ್ಲ, ಪ್ರತಿಷ್ಠಿತ ಬ್ಯಾಂಕ್​ನ ರಾಜರಾಜೇಶ್ವರಿ ನಗರದ ಬ್ರಾಂಚ್ ಮ್ಯಾನೇಜರ್. ಮನಿ ಡಬ್ಲಿಂಗ್ ಆಸೆಗೆ ಇದೇ ತಿಂಗಳ 12ರಂದು ಬ್ಯಾಂಕ್​ನ ನಿಧಿಯಿಂದ ಶಾಖೆಯ ಕಾರ್ಯ ಚಟುವಟಿಕೆಗೆಂದು ಒಂದು ಕೋಟಿ ರೂಪಾಯಿ ಡ್ರಾ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಹಣ ಪಡೆದು ಶಾಖೆಯಲ್ಲಿ ಜಮೆ ಮಾಡದೆ ನಾಪತ್ತೆಯಾಗಿದ್ದಾನೆ. ಬಳಿಕ ಸಂಜೆ ಶಾಖೆಯ ವ್ಯವಸ್ಥಾಪಕಿ ರಮ್ಯಾ ಶೆಟ್ಟಿರವರಿಗೆ ಕರೆ ಮಾಡಿ ಹಣ ಡಿಪಾಸಿಟ್ ಮಾಡಿದ್ದಾಗಿ ನಗದು ನಮೂದು ಪಾಸ್ ಮಾಡುವಂತೆ ಹೇಳಿದ್ದಾನೆ. ಅರುಣ್ ಮಾತಿನಿಂದ ಅನುಮಾನಗೊಂಡ ಶಾಖಾ ವ್ಯವಸ್ಥಾಪಕಿ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಈ ವೇಳೆ ಅಸಲಿ ಸತ್ಯ ಬಯಲಾಗಿದೆ.

ವೈಯಕ್ತಿಕ ಲಾಭಕ್ಕೆ ಬ್ಯಾಂಕ್​ಗೆ ವಂಚಿಸಿದ ಬ್ರಾಂಚ್ ಮ್ಯಾನೇಜರ್
ಇನ್ನು ಇತ್ತ ಹಣ ತೆಗೆದುಕೊಂಡು ಹೊಗಿದ್ದ ಬ್ರಾಂಚ್ ಮ್ಯಾನೇಜರ್ ಅರುಣ್, ಸಂಜೆ ಬ್ಯಾಂಕ್​ಗೆ ಕರೆ ಮಾಡಿ ತನನ್ನು ಯಾರೋ ದರೋಡೆ ಮಾಡಿದ್ದಾಗಿ, ಹಣ ಕಳೆದುಕೊಂಡಿದ್ದಾಗಿ ಹೇಳಿದ್ದಾನೆ. ಸದ್ಯ ನಾನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿದ್ದೇನೆಂದು ತಿಳಿಸಿದ್ದಾನೆ. ಬಳಿಕ ಅರುಣ್ ಮೇಲೆ ಅನುಮಾನಗೊಂಡು ಬೆಂಗಳೂರು ನಗರದ ಸೌಥ್ ರಿಜಿನಲ್ ಮ್ಯಾನೇಜರ್ ಈ ಬಗ್ಗೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತಲಾಶ್ ನಡೆಸಿ ಆರೋಪಿ ಅರುಣ್​ನನ್ನು ಬಂಧಿಸಿ ತನಿಖೆ ಕೈಗೊಂಡ ಬಳಿಕ ಅಸಲಿ ಸತ್ಯ ಬಯಲಾಗಿದೆ. ಮಧ್ಯವರ್ತಿಯಿಂದ ಪರಿಚಯವಾದ ಇಬ್ಬರಿಂದ ಅರುಣ್​ಗೆ ಮಹಾನ್ ದೋಖಾ ಆಗಿದೆ. ಕೆಲ ದಿನಗಳ ಹಿಂದೆ ಮಧ್ಯವರ್ತಿ ಬಸವರಾಜ್ ಮುಖಾಂತರ ಪರಿಚಯವಾಗಿದ್ದ ಇಮ್ತಿಯಾಜ್ ಹಾಗೂ ಮತ್ತೋರ್ವ ವ್ಯಕ್ತಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಒಂದು ಕೋಟಿಯನ್ನು ಕೆಲವೇ ಗಂಟೆಯಲ್ಲಿ ಎರಡು ಕೋಟಿ ಕೊಡೋದಾಗಿ ನಂಬಿಸಿ ಮೋಸ ಮಾಡಿದ್ದಾರೆ.

ಅಲ್ಲದೇ, ಏಜೆಂಟ್​ಗೂ ಪರ್ಸೆಂಟ್ ಹಣ ಕೊಡೋದಾಗಿ ಹೇಳಿದ್ದರಂತೆ. ಹೀಗಾಗಿ ಎರಡು ಕೋಟಿ ಹಣದ ಕನಸು ಕಂಡು ಬ್ಯಾಂಕ್​ನ ಹಣ ಕೊಟ್ಟು ಅರುಣ್ ಕಂಬಿ ಹಿಂದೆ ಬಿದ್ದಿದ್ದಾನೆ. ಅರುಣ್ ಹೇಳಿಕೆ ಆಧರಿಸಿ ಯಲಹಂಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಣ ಪಡೆದು ವಂಚಿಸಿದ್ದ ಇಮ್ತಿಯಾಜ್, ಏಜೆಂಟ್ ಬಸವರಾಜ್ ಅರೆಸ್ಟ್ ಆಗಿದ್ದು ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಮತ್ತೋರ್ವ ವ್ಯಕ್ತಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಹಣ ಡಬಲ್ ಆಗುತ್ತೆ ಅಂತ ಹಣ ಕೊಟ್ಟಿ ಕೆಟ್ಟ ಅರುಣ್ ಕೂಡ ಕಂಬಿ ಎಣಿಸುತ್ತಿದ್ದಾನೆ.

ತೂಕದಲ್ಲಿ ಏರುಪೇರು ಮಾಡಿ ರೈತರಿಗೆ ಮೋಸ: ದಲ್ಲಾಳಿ‌ಯ ಧೋಖಾಗೆ ತೀವ್ರ ಆಕ್ರೋಶ