ಲಾಕ್‌ಡೌನ್‌ನಲ್ಲೂ ದೇವರಿಗೆ ಮೋಸ ಮಾಡಿದ ಭಕ್ತರು, ಎಲ್ಲಿ?

ಮೈಸೂರು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ನಿಷೇಧಿತ ನೋಟುಗಳು ಪತ್ತೆಯಾಗಿವೆ! ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಹುಂಡಿಯಲ್ಲಿನ ಹಣ ಹೊರ ತೆಗೆಯಲಾಗಿದ್ದು, ಹುಂಡಿಯಲ್ಲಿರುವ ಹಣದಲ್ಲಿ ನಿಷೇಧಿತ 500, 1000 ರೂಪಾಯಿ ನೋಟುಗಳು ಪತ್ತೆಯಾಗಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದೇವಸ್ಥಾನಕ್ಕೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿರುವ ಹಣ ತೀರ ಕಡಿಮೆಯಾಗಿದೆ. ಇದೇ ಜನವರಿಯಲ್ಲಿ 1,10,82,900 ರೂಪಾಯಿ ಹಣ ಸಂಗ್ರಹವಾಗಿತ್ತು. ಆದರೆ ಈ ಬಾರಿ […]

ಲಾಕ್‌ಡೌನ್‌ನಲ್ಲೂ ದೇವರಿಗೆ ಮೋಸ ಮಾಡಿದ ಭಕ್ತರು, ಎಲ್ಲಿ?

Updated on: Aug 31, 2020 | 12:13 PM

ಮೈಸೂರು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ನಿಷೇಧಿತ ನೋಟುಗಳು ಪತ್ತೆಯಾಗಿವೆ!

ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಹುಂಡಿಯಲ್ಲಿನ ಹಣ ಹೊರ ತೆಗೆಯಲಾಗಿದ್ದು, ಹುಂಡಿಯಲ್ಲಿರುವ ಹಣದಲ್ಲಿ ನಿಷೇಧಿತ 500, 1000 ರೂಪಾಯಿ ನೋಟುಗಳು ಪತ್ತೆಯಾಗಿವೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದೇವಸ್ಥಾನಕ್ಕೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿರುವ ಹಣ ತೀರ ಕಡಿಮೆಯಾಗಿದೆ. ಇದೇ ಜನವರಿಯಲ್ಲಿ 1,10,82,900 ರೂಪಾಯಿ ಹಣ ಸಂಗ್ರಹವಾಗಿತ್ತು. ಆದರೆ ಈ ಬಾರಿ 69,24,900 ರೂಪಾಯಿ ಹಣ ಸಂಗ್ರಹವಾಗಿದೆ. ಜೊತೆಗೆ ಅಚ್ಚರಿಯೆಂಬಂತೆ ಲಾಕ್‌ಡೌನ್ ನಡುವೆಯೂ ಹುಂಡಿಗೆ 7 ವಿದೇಶಿ ಕರೆನ್ಸಿ ಕಾಣಿಕೆ ರೂಪದಲ್ಲಿ ಬಂದಿವೆ.