
ವಿಜಯಪುರ: ರೋಲ್ಕಾಲ್ ಹೋರಾಟಗಾರರಿಗೆ ಸಿಎಂ ಭಯಪಡಬೇಕಿಲ್ಲ. ವಿಜಯಪುರದಲ್ಲಿ ಹೇಗೆ ಬಂದ್ ಮಾಡ್ತಾರೋ ನೋಡೋಣ ಎಂದು ಡಿ.5ರ ಕರ್ನಾಟಕ ಬಂದ್ ಕರೆಗೆ ಶಾಸಕ ಯತ್ನಾಳ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಮರಾಠಿ ಭಾಷೆ, ಬೆಳಗಾವಿ ವಿಚಾರದಲ್ಲಿ ಶರದ್ ಪವಾರ್ ಹಾಗೂ ಅಯೋಗ್ಯ ಅಜಿತ್ ಪವಾರ್ ಹೇಳಿಕೆ ವಿರೋಧಿಸುತ್ತೇನೆ. ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಚಿಂತಿಸಬಾರದು. ನಾವು ಮೊದಲು ಹಿಂದೂಗಳು ಎಂದು ಶಾಸಕ ಯತ್ನಾಳ್ ಹೇಳಿದರು.
ಮರಾಠ ನಿಗಮಕ್ಕೆ ಯತ್ನಾಳ್ ಬೆಂಬಲ:
ನಮ್ಮ ರಕ್ಷಣೆ ಮಾಡಿದ ಶಿವಾಜಿ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ನೀಡ್ಬೇಕು. ಮರಾಠ ಸಮುದಾಯಕ್ಕೆ ನೀಡಿದ ನಿಗಮಕ್ಕೆ ಬೆಂಬಲವಿದೆ. ಸಿಎಂ ನಿಗಮ ಹಿಂಪಡೆದ್ರೆ ದೊಡ್ಡ ಅನಾಹುತ ಸಂಭವಿಸುತ್ತೆ ಎಂದು ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಹೇಳಿದರು.
Published On - 3:51 pm, Fri, 20 November 20