ಈಗಿರುವ ನಿಗಮಗಳಿಗೇ ಕಚೇರಿ ಇಲ್ಲ! ಇನ್ನು ಮುಂದಿನ ನಿಗಮಗಳ ಕಥೆಯೇನು?
ರಾಜ್ಯದಲ್ಲೀಗ ನಿಗಮಗಳದ್ದೇ ಕಾರುಬಾರು, ನಮಗೊಂದು ನಿಗಮ ಬೇಕೇ ಬೇಕು ಎನ್ನುವ ಜನರು ಒಂದು ಕಡೆಯಾದ್ರೆ ಇದನ್ನು ಜಾರಿಗೆ ತರುವಲ್ಲಿ ನಮ್ಮದು ದೊಡ್ಡ ಪಾಲಿರಲಿ ಎನ್ನುವ ರಾಜಕಾರಣಿಗಳು ಇನ್ನೊಂದು ಕಡೆ. ಹೀಗೆ ಜಾರಿಗೆ ಬರುತ್ತಿರುವ ನಿಗಮಗಳು ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎಂಬ ವಿಚಾರದ ಬಗೆಗಿನ ಸ್ಪಷ್ಟತೆ ಬಹಳ ಮುಖ್ಯ. ನಮ್ಮ ಜಾತಿಗೂ ಒಂದು ನಿಗಮ ಬೇಕು ಎನ್ನುವ ಜನರ ಕೂಗಿಗೆ ಸರ್ಕಾರ ಸೊಪ್ಪು ಹಾಕುತ್ತಲೇ ಬಂದಿದ್ದು, ಇದು ರಾಜಕಾರಣದ ಓಲೈಕೆಯ ತಂತ್ರವಾಗಿದೆ. ಸದ್ಯ ಜಾರಿಗೆ ಬಂದಿರುವ […]

ರಾಜ್ಯದಲ್ಲೀಗ ನಿಗಮಗಳದ್ದೇ ಕಾರುಬಾರು, ನಮಗೊಂದು ನಿಗಮ ಬೇಕೇ ಬೇಕು ಎನ್ನುವ ಜನರು ಒಂದು ಕಡೆಯಾದ್ರೆ ಇದನ್ನು ಜಾರಿಗೆ ತರುವಲ್ಲಿ ನಮ್ಮದು ದೊಡ್ಡ ಪಾಲಿರಲಿ ಎನ್ನುವ ರಾಜಕಾರಣಿಗಳು ಇನ್ನೊಂದು ಕಡೆ. ಹೀಗೆ ಜಾರಿಗೆ ಬರುತ್ತಿರುವ ನಿಗಮಗಳು ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎಂಬ ವಿಚಾರದ ಬಗೆಗಿನ ಸ್ಪಷ್ಟತೆ ಬಹಳ ಮುಖ್ಯ. ನಮ್ಮ ಜಾತಿಗೂ ಒಂದು ನಿಗಮ ಬೇಕು ಎನ್ನುವ ಜನರ ಕೂಗಿಗೆ ಸರ್ಕಾರ ಸೊಪ್ಪು ಹಾಕುತ್ತಲೇ ಬಂದಿದ್ದು, ಇದು ರಾಜಕಾರಣದ ಓಲೈಕೆಯ ತಂತ್ರವಾಗಿದೆ. ಸದ್ಯ ಜಾರಿಗೆ ಬಂದಿರುವ 20 ನಿಗಮಗಳಲ್ಲಿ ಐದಕ್ಕೆ ಮಾತ್ರ ಅಧ್ಯಕ್ಷರ ನೇಮಕವಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಉದಾ: ಜೆಡಿಎಸ್-ಕಾಂಗ್ರೆಸ್ ಸಮ್ಮೀಶ್ರ ಸರ್ಕಾರದಲ್ಲಿ ಘೋಷಣೆಯಾದ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ 25ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿ,15 ಕೋಟಿ ರೂ. ಬಿಡುಗಡೆಯಾಗಿದ್ದರು, ಸರಿಯಾದ ಕಚೇರಿ ಮತ್ತು ಅಧ್ಯಕ್ಷರೇ ಸಿಕ್ಕಿಲ್ಲ. ಇನ್ನು ಸರಿಯಾದ ಕಾರ್ಯಾರಂಭವಾಗುವುದು ಯಾವಾಗ ಹೇಳಿ? ಸಿದ್ಧರಾನಯ್ಯ ಅವರ ಅವಧಿಯಲ್ಲಿ (2008-213) ಬೋವಿ ಅಭಿವೃದ್ಧಿ ನಿಗಮ, ಸಫಾಯಿ ಕಾರ್ಮಚಾರಿಗಳ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ. ಎಚ್ಡಿಕೆ ಕುಮಾರಸ್ವಾಮಿ ಅವರ ಅವಧಿಯಲ್ಲಿ (ಮೈತ್ರಿ ಸರ್ಕಾರದ ಅವಧಿ) ಕ್ರೈಸ್ತ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ನಿಗಮ, ಆರ್ಯವೈಶ್ಯ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ. ಬಿಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ (ಮುಖ್ಯಮಂತ್ರಿಯಾದ ನಂತರ) ಕಾಡುಗೊಲ್ಲ ಅಭಿವೃದ್ಧಿ ನಿಗಮ, ಮರಾಠ ಸಮುದಾಯ ನಿಗಮ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಘೋಷಣೆ ಮಾಡಿದ್ದಾರೆ. ಹೊಸ ನಿಗಮಗಳಿಗೆ ಬೇಡಿಕೆ ಒಕ್ಕಲಿಗರ ಅಭಿವೃದ್ಧಿ ನಿಗಮ, ರೆಡ್ಡಿ ಸಮುದಾಯ ಅಭಿವೃದ್ಧಿ ನಿಗಮ, ಆರ್ಯ ಈಡಿಗ ಸಮುದಾಯ ಅಭಿವೃದ್ಧಿ ನಿಗಮ. ಈಗಾಗಲೇ ಇರುವ ಕಚೇರಿಗಳಿಗೆ ಸ್ಥಳಾವಕಾಶ ಇಲ್ಲ, ಕೆಲವು ನಿಗಮಗಳಂತು ಚಿಕ್ಕ ಕೋಣೆಯಲ್ಲಿದೆ ಹೀಗಾಗಿ ನಿಗಮ ಸ್ಥಾಪಿಸುವಾಗ ಇರುವ ಉತ್ಸಾಹ ನಂತರ ಇರುವುದಿಲ್ಲ ಎನ್ನುವುದು ಸ್ಪಷ್ಟ.