12 ವರ್ಷಕ್ಕೊಮ್ಮೆ ನಡೆಯುವ ತುಂಗಾಭದ್ರ ಪುಷ್ಕರಕ್ಕೆ ಚಾಲನೆ, ಆದರೆ ಭಕ್ತರಿಗೆ..?
ರಾಯಚೂರು: ಇಂದಿನಿಂದ ಡಿಸೆಂಬರ್ 1 ರವರೆಗೂ ನಡೆಯಲಿರುವ ತುಂಗಾಭದ್ರ ಪುಷ್ಕರಕ್ಕೆ ಮಂತ್ರಾಲಯದ ಶ್ರೀಗಳು ಚಾಲನೆ ನೀಡಿದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ಪುಷ್ಕರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 12 ವರ್ಷಕ್ಕೊಮ್ಮೆ ಬರುವ ಪುಷ್ಕರದ ಹಿನ್ನೆಲೆಯಲ್ಲಿ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ನದಿ ಸ್ನಾನ ಮಾಡಿ ಮಿಂದೆದ್ದರು. ನಂತರ ಶ್ರೀಗಳು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಪುಷ್ಕರದ ಹಿನ್ನೆಲೆಯಲ್ಲಿ ನಾಡಿನ ಮೂಲೆ ಮೂಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಮಂತ್ರಾಲಯಕ್ಕೆ ಹರಿದು ಬಂದಿತ್ತು. ಆದ್ರೆ […]

ರಾಯಚೂರು: ಇಂದಿನಿಂದ ಡಿಸೆಂಬರ್ 1 ರವರೆಗೂ ನಡೆಯಲಿರುವ ತುಂಗಾಭದ್ರ ಪುಷ್ಕರಕ್ಕೆ ಮಂತ್ರಾಲಯದ ಶ್ರೀಗಳು ಚಾಲನೆ ನೀಡಿದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ಪುಷ್ಕರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
12 ವರ್ಷಕ್ಕೊಮ್ಮೆ ಬರುವ ಪುಷ್ಕರದ ಹಿನ್ನೆಲೆಯಲ್ಲಿ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ನದಿ ಸ್ನಾನ ಮಾಡಿ ಮಿಂದೆದ್ದರು. ನಂತರ ಶ್ರೀಗಳು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಪುಷ್ಕರದ ಹಿನ್ನೆಲೆಯಲ್ಲಿ ನಾಡಿನ ಮೂಲೆ ಮೂಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಮಂತ್ರಾಲಯಕ್ಕೆ ಹರಿದು ಬಂದಿತ್ತು.
ಆದ್ರೆ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ನದಿ ಸ್ನಾನ ನಿಷೇಧಿಸಲಾಗಿದ್ದರಿಂದ ಭಕ್ತರು ನಿರಾಸೆಗೊಂಡಿದ್ದರು. ಕರ್ನೂಲ್ ಜಿಲ್ಲಾಡಳಿತದಿಂದ ನದಿ ಸ್ನಾನ ನಿಷೇಧಿಸಿದ್ದು, ಕೇವಲ ಪಿಂಡ ಪ್ರಧಾನ ಮತ್ತು ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ. ಡಿಸೆಂಬರ್ ಒಂದರವರೆಗೂ ನಡೆಯುವ ಈ ಪುಷ್ಕರದಲ್ಲಿ ಭಾಗಿಯಾಗಲು ಅನೇಕ ಭಕ್ತರು ಮಂತ್ರಾಲಯಕ್ಕೆ ಹರಿದು ಬರುವ ಸಾಧ್ಯತೆ ಇದೆ.