ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ಮುಸ್ಲಿಂ ವಿದ್ಯಾರ್ಥಿನಿ, ಕಾಲೇಜಿನಿಂದ ಹೊರಕ್ಕೆ
ರಸ್ತೆಯಲ್ಲಿ ಅಂಟಿಸಿದ್ದ ಪಾಕಿಸ್ತಾನ ಬಾವುಟವನ್ನು ತೆಗೆದುಹಾಕಲು ಪ್ರಯತ್ನಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಹಾಕಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ವಿದ್ಯಾರ್ಥಿನಿ ಬಾವುಟವನ್ನು ತೆಗೆಯಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಲಾ ಆಡಳಿತ ಮಂಡಳಿ ಆಕೆಯ ವಿರುದ್ಧ ಕ್ರಮ ಕೈಗೊಂಡಿದೆ.
ಸಹರಾನ್‌ಪುರ, ಮೇ 02: ರಸ್ತೆಯಲ್ಲಿ ಅಂಟಿಸಿದ್ದ ಪಾಕಿಸ್ತಾನ ಬಾವುಟವನ್ನು ತೆಗೆದುಹಾಕಲು ಪ್ರಯತ್ನಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಹಾಕಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ವಿದ್ಯಾರ್ಥಿನಿ ಬಾವುಟವನ್ನು ತೆಗೆಯಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಲಾ ಆಡಳಿತ ಮಂಡಳಿ ಆಕೆಯ ವಿರುದ್ಧ ಕ್ರಮ ಕೈಗೊಂಡಿದೆ.
ಇಸ್ಲಾಮಿಕ್ ಭಯೋತ್ಪಾದಕರು 26 ಹಿಂದೂ ಪ್ರವಾಸಿಗರನ್ನು ಕ್ರೂರವಾಗಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಿ ಮಂಗಳವಾರ (ಏಪ್ರಿಲ್ 29) ಕೆಲವು ಹಿಂದೂ ಸಂಘಟನೆಗಳು ಬಾವುಟವನ್ನು ಅಂಟಿಸಿವೆ. 11 ನೇ ತರಗತಿಯ ವಿದ್ಯಾರ್ಥಿನಿ ಗಂಗೋ ನಗರದ ಸಹರಾನ್‌ಪುರ ಬಸ್ ನಿಲ್ದಾಣದ ಅಡ್ಡರಸ್ತೆಯ ಮೂಲಕ ತನ್ನ ಸ್ಕೂಟರ್‌ನಲ್ಲಿ ಹಾದುಹೋಗುತ್ತಿದ್ದಾಗ ಬಾವುಟ ಗಮನಿಸಿ ಅದನ್ನು ತೆಗೆಯಲು ಪ್ರಯತ್ನಿಸಿದ್ದಾಳೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

