ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಭದ್ರಾ ಅಭಯಾರಣ್ಯದಲ್ಲಿ ಸಫಾರಿ ಹೋದವರಿಗೆ ಇಂದು ಅಪರೂಪದ ದೃಶ್ಯವೊಂದು ಕಂಡುಬಂತು. ಹೌದು, ಸಫಾರಿಗೆ ಬಂದ ಪ್ರವಾಸಿಗರಿಗೆ ಮರದ ಮೇಲೆ ಕುಳಿತ ಹುಲಿರಾಯನೊಬ್ಬನ ದರ್ಶನ ಭಾಗ್ಯ ದೊರೆತಿದೆ!
ಕಾಡಿನ ಸ್ವಚ್ಛಂದ ವಾತಾವರಣಲ್ಲಿ ಮರದ ಮೇಲೆ ಪ್ರಶಾಂತವಾಗಿ ಕೂತಿದ್ದ ವ್ಯಾಘ್ರನ ಕಂಡು ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಸಿಕ್ಕ ಹುಲಿರಾಯನ ಆ ಗತ್ತು, ಆ ಗಾಂಭೀರ್ಯ ನಿಮ್ಮ ಕಣ್ಮನ ಸೆಳೆಯುವುದಂತೂ ಗ್ಯಾರಂಟಿ. ಸುಮಾರು 30 ನಿಮಿಷಗಳ ಕಾಲ ಮರದ ಮೇಲೆ ರಿಲಾಕ್ಸ್ ಆಗಿ ಕೂತ ಹುಲಿರಾಯ ಪ್ರವಾಸಿಗರ ಕ್ಯಾಮರಾಗೆ ಸಖತ್ ಪೋಸ್ ಸಹ ಕೊಟ್ಟಿದ್ದಾನೆ.