AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಂ ಪ್ರಕಾಶ್​ ಹತ್ಯೆಯ ಮತ್ತಷ್ಟು ಸಂಗತಿ ಬಯಲು: 25 ನಿಮಿಷ ಪತ್ನಿ ಮುಂದೆ ಒದ್ದಾಡಿ ಪ್ರಾಣ ಬಿಟ್ಟ ಡಿಜಿಪಿ

ನಿವೃತ್ತ ಡಿಜಿಪಿ ಓಂಪ್ರಕಾಶ್​ ಹತ್ಯೆ ಪ್ರಕರಣಕ್ಕೆ ಇಡೀ ರಾಜವೇ ಬೆಚ್ಚಿ ಬಿದಿತ್ತು. ಈ ಕೊಲೆ ಕೇಸ್​ನಲ್ಲಿ ಅವರ ಪತ್ನಿ ಪಲ್ಲವಿಯ ಬಂಧನವಾಗಿದೆ. ಸದ್ಯ ಹತ್ಯೆಯ ಒಂದೊಂದು ಸಂಗತಿಯನ್ನು ಪಲ್ಲವಿ ಸಿಸಿಬಿ ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ. 25 ನಿಮಿಷ ಪತ್ನಿ ಮುಂದೆ ಒದ್ದಾಡಿ ಓಂ ಪ್ರಕಾಶ್ ಪ್ರಾಣ ಬಿಟ್ಟಿದ್ದಾರೆ.

ಓಂ ಪ್ರಕಾಶ್​ ಹತ್ಯೆಯ ಮತ್ತಷ್ಟು ಸಂಗತಿ ಬಯಲು: 25 ನಿಮಿಷ ಪತ್ನಿ ಮುಂದೆ ಒದ್ದಾಡಿ ಪ್ರಾಣ ಬಿಟ್ಟ ಡಿಜಿಪಿ
ನಿವೃತ್ತ ಡಿಜಿಪಿ ಓಂಪ್ರಕಾಶ್​ ಹತ್ಯೆ ಪ್ರಕರಣ
Jagadisha B
| Edited By: |

Updated on: May 02, 2025 | 11:01 AM

Share

ಬೆಂಗಳೂರು, ಮೇ 02: ನಿವೃತ್ತ ಡಿಜಿಪಿ ಓಂಪ್ರಕಾಶ್ (Om Prakash),​​ ರಾಜ್ಯ ಪೊಲೀಸ್ ಇಲಾಖೆಯಲ್ಲೇ ಅತ್ಯುನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸಿ ನಿವೃತ್ತಿರಾದವರು. ಅದೆಷ್ಟೋ ಅಪರಾಧ ಕೃತ್ಯಗಳನ್ನು ಕಂಡ ಆತ ಕೊನೆಗೆ ತನ್ನ ಪತಿಯಿಂದಲೇ (wife) ಹತ್ಯೆಯಾಗಿದ್ದರು. ಆದ್ರೀಗ ಅವರ ಸಾವಿನ ಗುಟ್ಟು ಒಂದೊಂದಾಗೆ ತೆರೆದುಕೊಳ್ಳುತಿದ್ದು, ಕೊನೆಯುಸಿರೆಳೆಯುವ ಮುನ್ನ 25 ನಿಮಿಷಗಳ ಅವರ ನರಳಾಟ ಬಯಲಾಗಿದೆ.

ಆ ಸಾವು ಊಹೆಗೂ ಮೀರಿದ್ದು. ತನ್ನ ಪತ್ನಿಯಿಂದಲೇ ಕೊಲೆಯಾದ ಡಿಜಿಪಿ ಓಂಪ್ರಕಾಶ್ ಸಾವಿನ ಇನ್ಸೈಡ್ ಸಂಗತಿಗಳು ರೋಚಕ ತಿರುವು ನೀಡಿದೆ. ಪತಿಯ 20 ವರ್ಷಗಳ ಕಿರುಕುಳದಿಂದ ಬೇಸತ್ತು ಪ್ರತಿಕಾರ ತೀರಿಸಿಕೊಂಡಿದ್ದಾಗಿ ಹೇಳಿರುವ ಪಲ್ಲವಿ, ಹತ್ಯೆಯ ಒಂದೊಂದು ಸಂಗತಿಯನ್ನು ಸಿಸಿಬಿ ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ. ಆ ವಿಷಯಗಳು ನಿಜಕ್ಕೂ ಪೊಲೀಸರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಓಂ ಪ್ರಕಾಶ್ ಕೊಲೆ ಪ್ರಕರಣದ ದಾಖಲೆ ಸಿಸಿಬಿಗೆ ಹಸ್ತಾಂತರ: ಕೃತಿ ವಿಚಾರಣೆಗೆ ಒಳಪಡಿಸಲು ಫಿಟ್ ಎಂದ ನಿಮ್ಹಾನ್ಸ್ ವೈದ್ಯರು

ಇದನ್ನೂ ಓದಿ
Image
ತಾಯಿ ಕೊಲೆ ಬೆದರಿಕೆ ಹಾಕಿದ್ರು, ಅವರಿಂದಲೇ ಹತ್ಯೆ ಶಂಕೆ: ಓಂ ಪ್ರಕಾಶ್ ಪುತ್ರ
Image
ಓಂ ಪ್ರಕಾಶ್​ ಕೊಲೆ ಪ್ರಕರಣ: ನಿವೃತ್ತ ಪೊಲೀಸ್‌ ಮಹಾನಿರ್ದೇಶಕರ ಪತ್ನಿ ಬಂಧನ
Image
ಓಂ ಪ್ರಕಾಶ್​ ಕೊಲೆ: ತನಿಖಾಧಿಕಾರಿಗಳ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಪಲ್ಲವಿ
Image
ಉತ್ತರ ಕನ್ನಡದ ಜೋಯಿಡಾದಲ್ಲಿ ಶ್ರೀಗಂಧ ತೋಟ ಹೊಂದಿದ್ದ ಓಂ ಪ್ರಕಾಶ್

ಹೌದು, ಪತಿ ಓಂ ಪ್ರಕಾಶ್ ಕೊಲೆ ಮಾಡಿದ್ದ ಪಲ್ಲವಿ ಸಿಸಿಬಿ ಪೊಲೀಸರ ಮುಂದೆ ಹಲವು ಸಂಗತಿಗಳ ಹೇಳಿಕೆ ನೀಡಿದ್ದಾರೆ. ಇದರ ಜೊತೆಗೆ ಕೊಲೆ ಮಾಡಿದ ಆ ಕ್ಷಣದ ಇಂಚಿಂಚು ಮಾಹಿತಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ. ಊಟಕ್ಕೆ ಕುಳಿತಿದ್ದ ಓಂ ಪ್ರಕಾಶ್​ 25 ನಿಮಿಷಗಳ ಕಾಲ ನರಳಾಡುವಂತೆ ಮಾಡಿದ್ದು, ಅದರ ಪ್ರತಿ ಹಂತವನ್ನು ಸಿಸಿಬಿ ಮುಂದೆ ಹೇಳಿಕೊಂಡಿದ್ದಾರೆ.

ಮೊದಲಿಗೆ ಬಾಟಲ್ ಗಾಜು ಹೊಡೆದು ಹಿಂಬದಿಯಿಂದ ಚುಚ್ಚಿದ್ದ ಪಲ್ಲವಿ, ನಂತರ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ಆ ಬಳಿಕ ತೀವ್ರ ರಕ್ತ ಸ್ರಾವವಾಗಿ ನರಳಾಡುರಿದ್ದ ಓಂ ಪ್ರಕಾಶ್ ಮೇಲೆ ಹಾರ್ಪಿಕ್ ತಂದು ಚೆಲ್ಲಿದ್ದಾರೆ. ರಕ್ತ ಗಾಯದ ಮೇಲೆ ಹಾರ್ಪಿಕ್ ಬಿದ್ದ ಉರಿಗೆ ಚೀರಿದಾಗ ಬೆಡ್ ಶೀಟ್ ತಂದು ಸುತಿದ್ದಾರೆ. ಮನೆಯಲ್ಲಾ ನೆತ್ತರು ಹರಿದರು ಪಲ್ಲವಿ ಪತಿಯ ಉಸಿರು ನಿಂತಿಲ್ಲ ಅನ್ನೊ ಯೋಚನೆಯಲ್ಲಿ ಹತ್ಯೆ ಮಾಡಲೆಂದು ಓಡಾಡಿದ್ದಾರೆ. ಅದರಂತೆ ನೆಲದಲ್ಲಿದ್ದ ರಕ್ತ ಕಾಲಿಗೆ ಅಂಟಿರುವುದು ಅರಿಯದೇ ಮೂರ್ನಾಲ್ಕು ರೂಂಗಳಲ್ಲಿ ಓಡಾಡಿದ್ದಾರೆ. ಜೊತೆಗೆ ಕಾರದ ಪುಡಿ ತಂದು ಓಂಪ್ರಕಾಶ್ ಮೇಲೆ ಚೆಲ್ಲಿದ್ದಾರೆ. ಒಟ್ಟಾರೆ ಪತ್ನಿಯ ಹಲವು ರೀತಿಯ ಹಲ್ಲೆಗಳಿಂದ ಸತತ 25 ನಿಮಿಷ ನರಳಾಟ ನಡೆಸಿದ ಓಂಪ್ರಕಾಶ್ ಆ ಬಳಿಕ ನೆಲದಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಇನ್ನು ಈ ಸಂಬಂಧ ಪಲ್ಲವಿ ವಿಚಾರಣೆ ನಡೆಸಿದ್ದ ಸಿಸಿಬಿ ಸ್ಥಳದಲ್ಲಿ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಿದ್ದಾರೆ. ಆದರೆ ಕೈಗಂಟಿದ ರಕ್ತದ ಕಲೆಯಲ್ಲೇ ಹಲವು ಬಾರಿ ವಸ್ತುಗಳ ಪದೆ ಪದೆ ಮುಟ್ಟಿದ್ದು, ಫಿಂಗರ್ ಪ್ರಿಂಟ್​ಗಳು ಅಸ್ಪಷ್ಟವಾಗಿವೆ. ಸದ್ಯ ಇವುಗಳನ್ನು ಎಫ್ಎಸ್ಎಲ್​​ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

ಇನ್ನು ಇದರ ಜೊತೆಗೆ ಓರ್ವ ನಿವೃತ್ತ ಐಎಎಸ್ ಅಧಿಕಾರಿ ಪತ್ನಿ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಯೋರ್ವ ಪತ್ನಿ ಇಬ್ಬರನ್ನು ವಿಚಾರಣೆ ನಡೆಸಿರುವ ಸಿಸಿಬಿ ಪ್ರಕರಣ ಸಂಬಂಧ ಒಂದಷ್ಟು ಮಾಹಿತಿಗಳ ಸಂಗ್ರಹಿಸಿದ್ದಾರೆ. ಆದರೆ ಈ ರೀತಿಯ ಕ್ರೂರತೆಯ ಹತ್ಯೆಯಲ್ಲಿ ಮಗಳ ಪಾತ್ರ ಇತ್ತಾ ಅನ್ನೊ ಪ್ರಶ್ನೆಗೆ ಇನ್ನು ಉತ್ತರ ಇಲ್ಲದಂತಾಗಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ