Highway Heroes Campaign : ಇಂದಿನಿಂದ ಬೆಂಗಳೂರಿನಲ್ಲಿ ‘ಹೈವೇ ಹೀರೋಸ್’ ಅಭಿಯಾನ ಆರಂಭ, ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಹೆದ್ದಾರಿಯಲ್ಲಿ ಓಡಾಡುವ ಟ್ರಕ್‌ಗಳು ಚಾಲಕರ ಜೀವನದ ಜೀವನಾಡಿಗಳಾಗಿವೆ. ಹೌದು, ಒಬ್ಬ ಟ್ರಕ್ ಚಾಲಕ ತನ್ನ ಮನೆಯಿಂದ ಹೊರಟಾಗಿನಿಂದ ಸಂಜೆ ಮನೆತಲುಪುವವರೆಗೂ, ಹಾಲಿನಿಂದ ಹಿಡಿದು ಔಷಧಿಗಳವರೆಗೆ ಎಲ್ಲವನ್ನೂ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಾನೆ. ಹೀಗಾಗಿ ಟ್ರಕ್ ಚಾಲಕರಿಗೆ ಆರೋಗ್ಯಕರ ಜೀವನಶೈಲಿ ಸಲಹೆಗಳು ಮತ್ತು ಹಣವನ್ನು ಉಳಿಸಲು ಆರ್ಥಿಕ ಸಲಹೆಯನ್ನು ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಹಾಗೂ ಟಿವಿ 9 ನೆಟ್ ವರ್ಕ್ ಸಹಯೋಗದಲ್ಲಿ ಹೈವೇ ಹೀರೋಸ್ ಅಭಿಯಾನವು ಮೇ 2 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಈ ಅಭಿಯಾನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಮೇ 2: ಟ್ರಕ್ ಚಾಲಕರಿಗಾಗಿಯೇ ಶ್ರೀರಾಮ್ ಫೈನಾನ್ಸ್ ಹಾಗೂ ಟಿವಿ 9 ನೆಟ್ ವರ್ಕ್ (shriram finance and TV9 network) ಸಹಯೋಗದಲ್ಲಿ ಹೈವೇ ಹೀರೋಸ್ (highway Heroes campaign) ಅಭಿಯಾನವನ್ನು ಆಯೋಜಿಸಿದೆ. ಇಂದಿನಿಂದ (ಮೇ 2) ಬೆಂಗಳೂರಿನಲ್ಲಿ ಈ ಅಭಿಯಾನವು ಆರಂಭವಾಗಿದ್ದು, ಯಶವಂತಪುರ (yeshwanthpur) ದ ಕೈಗಾರಿಕಾ ಉಪನಗರದಲ್ಲಿರುವ ದೇವರಾಜ್ ಉರ್ಸ್ ಟ್ರಕ್ ಟರ್ಮಿನಲ್ (devaraj urs truck terminal in industrial suburb) ನಲ್ಲಿ ಮೇ 2 ಹಾಗೂ ಮೇ 3 ರಂದು ಎರಡು ದಿನಗಳ ಕಾಲ ನಡೆಯಲಿದೆ. ಈ ಅಭಿಯಾನ ಟ್ರಕ್ ಚಾಲಕರನ್ನು ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದ್ದು, ಈ ಕಾರ್ಯಕ್ರಮವು ಟ್ರಕ್ ಚಾಲಕರಿಗೆ ಬಹುಪ್ರಯೋಜನವಾಗಲಿದೆ.
ಟ್ರಕ್ ಚಾಲಕರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮತ್ತು ಆರ್ಥಿಕವಾಗಿ ಸದೃಢರನ್ನಾಗಿಸುವುದು ಬಹಳ ಮುಖ್ಯ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯುವ ಹೈವೇ ಹೀರೋಸ್ ಅಭಿಯಾನದಲ್ಲಿ ಭಾಗವಹಿಸುವ ಟ್ರಕ್ ಚಾಲಕರಿಗಾಗಿಯೇ ವಿವಿಧ ಸೆಷನ್ಸ್ ಗಳನ್ನು ಆಯೋಜಿಸಲಾಗಿದೆ. ಹೌದು, ದಿ ಯೋಗ ಇನ್ಸ್ಟಿಟ್ಯೂಟ್ ನ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಚಾಲಕರಿಗೆ ಯೋಗಾಸನ, ಒತ್ತಡ ನಿರ್ವಹಣೆ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯದ ಕಾಪಾಡಿಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಅದರೊಂದಿಗೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಜ್ಞರು ಬಜೆಟ್, ಉಳಿತಾಯ ಸೇರಿದಂತೆ ಸೈಬರ್ ವಂಚನೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ವಿಷಯದ ಬಗ್ಗೆ ಸೆಷನ್ಸ್ ಗಳು ಕೈಗೊಳ್ಳಲಿದ್ದಾರೆ. ಅದಲ್ಲದೇ, ಪಿರಮಲ್ ಸ್ವಾಸ್ಥ್ಯ’ದ ತಜ್ಞರಿಂದ ಚಾಲಕರಿಗೆ ಕ್ಷಯ ಜಾಗೃತಿ ಸೆಷನ್ಸ್ ಇರಲಿದೆ. ಅಷ್ಟೇ ಅಲ್ಲದೇ, ಈ ಅಭಿಯಾನದಲ್ಲಿ ಭಾಗವಹಿಸುವ ಟ್ರಕ್ ಚಾಲಕರಿಗೆ ಲೆವೆಲ್ 4 ಟ್ರೇನಿಂಗ್ ಸರ್ಟಿಫಿಕೇಟ್ ಸಿಗಲಿದೆ.
ಹೌದು, ಸರ್ಕಾರದಿಂದ ಮಾನ್ಯತೆ ಪಡೆದ ಈ ತರಬೇತಿಯ ಜೊತೆಗೆ, 12 ಪ್ಲಸ್ ವ್ಯಾಲ್ಯೂ ಸರ್ಟಿಫಿಕೇಟನ್ನು ಚಾಲಕರಿಗೆ ನೀಡಲಾಗುತ್ತದೆ. ಈ ಪ್ರಮಾಣಪತ್ರವು ಚಾಲನಾ ಪರವಾನಗಿ ನವೀಕರಣಕ್ಕೆ ಸುಲಭದಾಯಕವಾಗಲಿದೆ. ಇಂತಹ ಅಭಿಯಾನವು ಟ್ರಕ್ ಚಾಲಕರ ಜೀವನದಲ್ಲಿ ಸರಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








