AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವಾ ಆತ್ಮಹತ್ಯೆ: SIT ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ ಬಯಲು, DYSPಗೆ ಸಂಕಷ್ಟ

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್ಐಟಿ) 2300 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ. ಭೋವಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ಕಿರುಕುಳದಿಂದ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಎಫ್ಎಸ್ಎಲ್ ವರದಿ, ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷ್ಯಗಳನ್ನು ಆರೋಪಪಟ್ಟಿಗೆ ಲಗತ್ತಿಸಲಾಗಿದೆ. ನಿಮ್ಹಾನ್ಸ್ ತಜ್ಞರ ವರದಿಯೂ ಸೇರಿದೆ.

ಜೀವಾ ಆತ್ಮಹತ್ಯೆ: SIT ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ ಬಯಲು,  DYSPಗೆ ಸಂಕಷ್ಟ
ವಕೀಲೆ ಜೀವಾ
ವಿವೇಕ ಬಿರಾದಾರ
|

Updated on: May 02, 2025 | 3:55 PM

Share

ಬೆಂಗಳೂರು, ಮೇ 02: ಭೋವಿ ನಿಗಮ ಹಗರಣ (Karnataka Bhovi Development Corporation Scam) ಸಂಬಂಧ ವಕೀಲೆ ಜೀವಾ (Advocate Jiva) ಆತ್ಮಹತ್ಯೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು 2,300 ಪುಟಗಳ ಚಾರ್ಜ್​​ಶೀಟ್​ ಅನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಎಸ್​ಐಟಿ ತನಿಖೆ ವೇಳೆ ಹಲವು ವಿಚಾರಗಳು ಬಹಿರಂಗಗೊಂಡಿವೆ.

ಮೃತ ಜೀವಾಗೆ ಸಿಐಡಿ ಡಿವೈಎಸ್​​ಪಿ ಕನಕಲಕ್ಷ್ಮೀಯವರು ವಕೀಲೆ ಜೀವಾ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬುವುದು ಎಸ್​ಐಟಿ ಸಲ್ಲಿಸಿರುವ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖವಾಗಿದೆ. ತನಿಖೆ ವೇಳೆ ಚಿತ್ರೀಕರಿಸಿದ ವಿಡಿಯೋ, ಎಫ್ಎಸ್ಎಲ್ ವರದಿ ಎಲ್ಲವೂ ಚಾರ್ಜ್​ಶೀಟ್​ನೊಂದಿಗೆ ಲಗ್ಗತ್ತಿಸಲಾಗಿದೆ.

ಎಸ್ಐಟಿ ರಚಿಸಿದ್ದ ಹೈಕೋರ್ಟ್

2024ರ ನವೆಂಬರ್ 22ರಂದು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಮನೆಯಲ್ಲಿ ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ 13 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದರು. ಈ ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೈಕೋರ್ಟ್​ ಸಿಬಿಐ ಎಸ್​​ಪಿ ವಿನಾಯಕ್ ವರ್ಮಾ, ಸಿಸಿಬಿ ಡಿಸಿಪಿ ಅಕ್ಷಯ್ ಮಚೀಂದ್ರ, ಐಎಸ್​​ಡಿ ಎಸ್​​ಪಿ ನಿಶಾ ಜೇಮ್ಸ್ ಒಳಗೊಂಡ ಎಸ್ಐಟಿ ತಂಡ ರಚಿಸಿತ್ತು.

ಇದನ್ನೂ ಓದಿ
Image
ವಕೀಲೆ ಜೀವಾ ಆತ್ಮಹತ್ಯೆ ಕೇಸ್​​: ಹೈಕೋರ್ಟ್​​ಗೆ ವರದಿ ಸಲ್ಲಿಸಿದ ಎಸ್ಐಟಿ
Image
ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದ ಪ್ರಮುಖ ಸಾಕ್ಷಿ ಕಳವು!
Image
ಭೋವಿ ನಿಗಮದ ಹಗರಣ: ಸಿಐಡಿ ವಿಚಾರಣೆ ಬಳಿಕ ಆತ್ಮಹತ್ಯೆಗೆ ಶರಣಾದ ಯುವತಿ
Image
ಅವ್ಯವಹಾರ ಆರೋಪ; ಭೋವಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ CID ಅಧಿಕಾರಿಗಳ ದಾಳಿ

ಪ್ರಕರಣದ ತನಿಖೆ ನಡೆಸಿ 90 ದಿನದಲ್ಲಿ ಹೈಕೋರ್ಟ್​​ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ವರದಿಯನ್ನು ಪರಿಶೀಲನೆ ನಡೆಸಿ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್ ಸಲ್ಲಿಸಲು ಅನುಮತಿ ನೀಡಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಜೀವಾ ಡೆತ್​ನೋಟ್​​ನಲ್ಲಿ ಮಾಡಿದ್ದ ಬಹುತೇಕ ಆರೋಪಗಳು ಚಾರ್ಚ್​ಶೀಟ್​ ಪ್ರಕಾರ ಸಾಬೀತಾಗಿವೆ.

ತನಿಖೆಗೆ ಸೈಕಾಲಜಿ ನೆರವು

ಎಸ್​ಐಟಿ ಅಧಿಕಾರಿಗಳ ತನಿಖೆಗೆ ನಿಮ್ಹಾನ್ಸ್ ಆಸ್ಪತ್ರೆಯ ಫಾರೆನ್ಸಿಕ್ ಸೈಕಾಲಾಜಿಕಲ್ ಆಟೋಫೇಸಿ (Forensic Psychological Autopsy) ವಿಭಾಗದ ವೈದ್ಯೆ ಡಾ.ರಾಜಕುಮಾರಿ ಮತ್ತು ಅವರ ತಂಡ ಸಾಥ್​ ನೀಡಿದೆ. ಭೋವಿ ನಿಗಮ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾಗ ರೆಕಾರ್ಡ್​ ಮಾಡಿದ್ದ 30 ವಿಡಿಯೋಗಳನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ಭೋವಿ ನಿಗಮದ ಹಗರಣ: ಸಿಐಡಿ ವಿಚಾರಣೆ ಬಳಿಕ ಆತ್ಮಹತ್ಯೆಗೆ ಶರಣಾದ ಯುವತಿ

ಈ ವಿಡಿಯೋಗಳನ್ನು ವೈದ್ಯರು ಪರಿಶೀಲನೆ ನಡೆಸಿದ್ದು, ವಕೀಲೆ ಜೀವಾ ಖಿನ್ನತೆ, ಕಿರುಕುಳ, ಮೆಂಟಲ್ ಸ್ಟೇಬಲ್ ಬಗ್ಗೆ ಅಧ್ಯಯನ ಮಾಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ಮುಖಭಾವ ಹೇಗಿತ್ತು? ಎಷ್ಟು ಖಿನ್ನತೆಗೆ ಒಳಗಾಗಿದ್ದರು? ಸಿಐಡಿ ವಿಚಾರಣಗೆ ಬಂದು ಹೋಗಿದ್ದ ಸಿಸಿಟಿವಿ ವಿಡಿಯೋ, ಜೀವಾ ಬರೆದ ಡೆತ್ ನೋಟ್, ಜೀವಾ ನೀಡಿದ್ದ ವಿಡಿಯೋ ಹೇಳಿಕೆಗಳು ಮತ್ತು ಜೀವಾರ ಸ್ನೇಹಿತರ ಹೇಳಿಕೆ ಹಾಗೂ ಅವರ ಮನೆ ಬಳಿ ಹೀಗೆ ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸಿ ವೈದ್ಯರು ವರದಿ ಸಿದ್ದಪಡಿಸಿ, ಎಸ್​ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ