ಬೆಕ್ಕು ಕಣ್​ಮುಚ್ಕೊಂಡು ಹಾಲು ಕುಡಿದ್ರೆ ಗೊತ್ತಾಗಲ್ವಾ -ಯತ್ನಾಳ್

|

Updated on: Dec 01, 2019 | 11:39 AM

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟ್ಟಳ್ಳಿಯವರ ಗಂಡಸ್ತನದ ಬಗ್ಗೆ ಒಬ್ರು ಕೇಳಿದ್ದಾರೆ. ಮುಖ್ಯಮಂತ್ರಿ ಮುಂದೆ ಅವರು ಗಂಡಸ್ತನ ತೋರಿಸಬೇಕಾ? ಎಂದು ತೆಲಸಂಗ ಗ್ರಾಮದ ಪ್ರಚಾರ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹರಿಹಾಯ್ದಿದ್ದಾರೆ. 1,200 ಕೋಟಿ ರೂ. ತಂದಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹೌದವ್ವಾ ನಿನ್ನ ನೋಡಿದ ಕೂಡಲೇ ಎಲ್ಲರೂ ಕೊಡ್ತಾರೆ. ಬೆಂಗಳೂರಿನಲ್ಲಿ ಏನು ನಡೆಯುತ್ತೆ ಎಂದು ಗೊತ್ತಿಲ್ವಾ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ನಮಗೆ ಗೊತ್ತಾಗಲ್ವಾ? ಎಂದು ಯತ್ನಾಳ್ ಲೇವಡಿ […]

ಬೆಕ್ಕು ಕಣ್​ಮುಚ್ಕೊಂಡು ಹಾಲು ಕುಡಿದ್ರೆ ಗೊತ್ತಾಗಲ್ವಾ -ಯತ್ನಾಳ್
Follow us on

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟ್ಟಳ್ಳಿಯವರ ಗಂಡಸ್ತನದ ಬಗ್ಗೆ ಒಬ್ರು ಕೇಳಿದ್ದಾರೆ. ಮುಖ್ಯಮಂತ್ರಿ ಮುಂದೆ ಅವರು ಗಂಡಸ್ತನ ತೋರಿಸಬೇಕಾ? ಎಂದು ತೆಲಸಂಗ ಗ್ರಾಮದ ಪ್ರಚಾರ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹರಿಹಾಯ್ದಿದ್ದಾರೆ.

1,200 ಕೋಟಿ ರೂ. ತಂದಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹೌದವ್ವಾ ನಿನ್ನ ನೋಡಿದ ಕೂಡಲೇ ಎಲ್ಲರೂ ಕೊಡ್ತಾರೆ. ಬೆಂಗಳೂರಿನಲ್ಲಿ ಏನು ನಡೆಯುತ್ತೆ ಎಂದು ಗೊತ್ತಿಲ್ವಾ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ನಮಗೆ ಗೊತ್ತಾಗಲ್ವಾ? ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.

ನನಗೆ ಹೇಳಿದ್ರೆ ಹೊಡೆದು ಬರ್ತಿದ್ದೆ: 
ಮೊದಲು ರಮೇಶ್ ಸರ್ ಎಂದು ಲಕ್ಷ್ಮೀ ಕರೆಯುತ್ತಿದ್ದರು. ಈಗ ಡಿಕೆ ಸರ್ ಅಂತಿದ್ದಾರೆ. ಯಾವಾಗ ಯಾರನ್ನ ಕೆಡವುತ್ತಾರೋ ಗೊತ್ತಿಲ್ಲ. ಕುಮಟಳ್ಳಿಗೆ ಹೇಳಿದಂತೆ ಅವರು ನನಗೆ ಹೇಳಿದ್ರೆ ಹೊಡೆದು ಬರ್ತಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮಗ್ಗಾ ವಾಗ್ದಾಳಿ ನಡೆಸಿದ್ದಾರೆ.