ಸಿಯಾಚಿನ್​ನಲ್ಲಿ ಮತ್ತೆ ಹಿಮಕುಸಿತ: ಇಬ್ಬರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿರುವ ಜಗತ್ತಿನ ಅತೀ ಎತ್ತರದ ಸೇನಾ ನೆಲೆ ಸಿಯಾಚಿನ್‌ನಲ್ಲಿ ಹಿಮಪಾತವಾಗಿದೆ. ಭಾರಿ ಹಿಮಪಾತದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಸಿಯಾಚಿನ್‌ ದಕ್ಷಿಣ ವಲಯದಲ್ಲಿ ಯೋಧರು ಗಸ್ತು ತಿರುಗುತ್ತಿದ್ರು. ಈ ವೇಳೆ ಹಿಮಪಾತ ಸಂಭವಿಸಿದ್ದು, ಇಬ್ಬರು ಯೋಧರು ಹಿಮದಡಿ ಸಿಲುಕಿ ಹುತಾತ್ಮರಾಗಿದ್ದಾರೆ. ಇತ್ತೀಚೆಗಷ್ಟೇ ಹಿಮಕುಸಿತವಾಗಿ 6 ಮಂದಿ ಹುತಾತ್ಮರಾಗಿದ್ದರು. ‘ಧೈರ್ಯವಿದ್ದರೆ ಜೀವಂತ ದಹನ ಮಾಡಲಿ’ ಕಾಂಗ್ರೆಸ್ಸಿಗರು ಬೆಂಕಿ ಹಚ್ಚುವಲ್ಲಿ ನಿಸ್ಸಿಮರು. ಹೀಗಾಗಿ, ಧೈರ್ಯವಿದ್ದರೆ ನನ್ನನ್ನ ಜೀವಂತ ದಹನ ಮಾಡಲಿ ಅಂತ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಸವಾಲು ಹಾಕಿದ್ದಾರೆ. […]

ಸಿಯಾಚಿನ್​ನಲ್ಲಿ ಮತ್ತೆ ಹಿಮಕುಸಿತ: ಇಬ್ಬರು ಯೋಧರು ಹುತಾತ್ಮ
sadhu srinath

|

Dec 01, 2019 | 7:22 AM

ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿರುವ ಜಗತ್ತಿನ ಅತೀ ಎತ್ತರದ ಸೇನಾ ನೆಲೆ ಸಿಯಾಚಿನ್‌ನಲ್ಲಿ ಹಿಮಪಾತವಾಗಿದೆ. ಭಾರಿ ಹಿಮಪಾತದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಸಿಯಾಚಿನ್‌ ದಕ್ಷಿಣ ವಲಯದಲ್ಲಿ ಯೋಧರು ಗಸ್ತು ತಿರುಗುತ್ತಿದ್ರು. ಈ ವೇಳೆ ಹಿಮಪಾತ ಸಂಭವಿಸಿದ್ದು, ಇಬ್ಬರು ಯೋಧರು ಹಿಮದಡಿ ಸಿಲುಕಿ ಹುತಾತ್ಮರಾಗಿದ್ದಾರೆ. ಇತ್ತೀಚೆಗಷ್ಟೇ ಹಿಮಕುಸಿತವಾಗಿ 6 ಮಂದಿ ಹುತಾತ್ಮರಾಗಿದ್ದರು.

‘ಧೈರ್ಯವಿದ್ದರೆ ಜೀವಂತ ದಹನ ಮಾಡಲಿ’ ಕಾಂಗ್ರೆಸ್ಸಿಗರು ಬೆಂಕಿ ಹಚ್ಚುವಲ್ಲಿ ನಿಸ್ಸಿಮರು. ಹೀಗಾಗಿ, ಧೈರ್ಯವಿದ್ದರೆ ನನ್ನನ್ನ ಜೀವಂತ ದಹನ ಮಾಡಲಿ ಅಂತ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಸವಾಲು ಹಾಕಿದ್ದಾರೆ. ಮಧ್ಯಪ್ರದೇಶದ ಬ್ಯಾವರಾ ಕ್ಷೇತ್ರಕ್ಕೆ ಪ್ರಜ್ಞಾ ಸಿಂಗ್‌ ಕಾಲಿಟ್ಟರೆ ಜೀವಂತವಾಗಿ ದಹನ ಮಾಡುತ್ತೇವೆ ಅಂತ ಕಾಂಗ್ರೆಸ್‌ ಶಾಸಕ ಇತ್ತೀಚೆಗೆ ಹೇಳಿಕೆ ನೀಡದ್ದರು.

ಘರ್ಷಣೆ ವೇಳೆ ಗನ್​ ತೋರಿಸಿದ ‘ಕೈ’ ಶಾಸಕ! ಜಾರ್ಖಂಡ್‌ನ ಪಲಮುದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ತ್ರಿಪಾಠಿ ಗನ್​ ತೆಗೆದು ತೋರಿಸಿದ ಘಟನೆಯೂ ನಡೆದಿದೆ. ಜಾರ್ಖಂಡ್​ನ 13 ಕ್ಷೇತ್ರಗಳಲ್ಲಿ ನಿನ್ನೆ ಮೊದಲ ಹಂತದ ಮತದಾನ ನಡೆದಿತ್ತು.

ಚಾಕು ತೋರಿಸಿ ಕಾಮುಕರಿಂದ ಅತ್ಯಾಚಾರ: ಗುಜರಾತ್​​ನ​ಲ್ಲಿ 8 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ನಡೆದಿದೆ. ರಾಜ್​​ಕೋಟ್​​ನಲ್ಲಿ ತಾಯಿ ಜೊತೆ ಪಾರ್ಕ್​ನಲ್ಲಿ ಮಲಗಿದ್ದ ಬಾಲಕಿಗೆ ಚಾಕು ತೋರಿಸಿ ಕಿರಾತರು ಅಪಹರಣ ಮಾಡಿದ್ದಾರೆ. ಬಳಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಇದೀಗ ಆರೋಪಿಗ ಪತ್ತೆಗೆ ಖಾಕಿ ಬಲೆ ಬೀಸಿದೆ.

ಮತ್ತೆ ಬಾಯ್ತೆರೆದ ‘ಜ್ವಾಲಾಮುಖಿ’..! ಮೆಕ್ಸಿಕೋ ರಾಜಧಾನಿ ಸಮೀಪವಿರುವ ಜ್ವಾಲಾಮುಖಿಯೊಂದು ಮತ್ತೆ ಬಾಯ್ತೆರೆದಿದೆ. ಇದರ ಪರಿಣಾಮ ಮೆಕ್ಸಿಕೋಗೆ ಬರಬೇಕಿದ್ದ ಹಾಗೂ ಮೆಕ್ಸಿಕೋದಿಂದ ತೆರಳಬೇಕಿದ್ದ ವಿಮಾನಗಳು ಹಾರಾಟ ನಿಲ್ಲಿಸಿವೆ. ಇನ್ನು ಜ್ವಾಲಾಮುಖಿ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದು, ಸ್ಥಳೀಯರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

‘ಕಿಸ್​ಮಸ್ ಟ್ರೀ’ ಅನಾವರಣ..! ಕ್ರಿಸ್​ಮಸ್ ಸಮೀಪಿಸುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬ ಎದುರಾಗಲಿದೆ. ವಿಶ್ವದಾದ್ಯಂತ ಕ್ರಿಸ್​ಮಸ್​ಗಾಗಿ ಸಂಭ್ರಮದ ತಯಾರಿ ನಡೆದಿದ್ದು, ಪೋರ್ಚ್​ಗಲ್​ನಲ್ಲಿ ಸುಮಾರು 30 ಮೀಟರ್ ಎತ್ತರದ ಕ್ರಿಸ್​ಮಸ್ ಟ್ರೀಯನ್ನು ಅನಾವರಣ ಮಾಡಲಾಗಿಯಿತು. ಇದು ಬೃಹತ್ ಕಟ್ಟಡದಷ್ಟು ಎತ್ತರವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada