Legislative council chairman ಸಭಾಪತಿ ಪೀಠ ಅಲಂಕರಿಸಿದ JDS ಹಿರಿಯ ಸದಸ್ಯ ಬಸವರಾಜ ಹೊರಟ್ಟಿ
Legislative council chairman ಖಾಲಿಯಿದ್ದ ಸಭಾಪತಿ ಸ್ಥಾನಕ್ಕೆ ಬಿಜೆಪಿ ಬೆಂಬಲದೊಂದಿಗೆ ಬಸವರಾಜ ಹೊರಟ್ಟಿ ಇಂದು (ಫೆಬ್ರವರಿ 9) ಆಯ್ಕೆಯಾಗಿದ್ದಾರೆ. ಈ ವೇಳೆ ಪತ್ನಿ ಹೇಮಲತಾ, ಇಬ್ಬರು ಪುತ್ರರು ಹಾಗೂ ಪುತ್ರಿ ಉಪಸ್ಥಿತರಾಗಿದ್ದರು.
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿಯಾಗಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಆಯ್ಕೆಯಾಗಿರುವುದಾಗಿ, ಉಪಸಭಾಪತಿ ಎಂ.ಕೆ. ಪ್ರಾಣೇಶ್ ಘೋಷಿಸಿದ್ದಾರೆ. ಪರಿಷತ್ ಸಭಾಪತಿ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹಮ್ಮದ್ ಹೆಸರು ಘೋಷಣೆಯಾಗಿತ್ತು. ಆದರೆ ನಜೀರ್ ಅಹಮ್ಮದ್ ಸೇರಿದಂತೆ ಯಾವುದೇ ಕಾಂಗ್ರೆಸ್ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ. ಕಾಂಗ್ರೆಸ್ ಸದಸ್ಯರ ಗೋಜುಗದ್ದಲದ ನಡುವೆ ಮತದಾನ ನಡೆಯದೇ ಚುನಾವಣೆ ಪೂರ್ಣವಾಗಿದ್ದು, ಬಿಜೆಪಿ ಬೆಂಬಲದೊಂದಿಗೆ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ.
75 ಸದಸ್ಯರ ಬಲದಲ್ಲಿರುವ ವಿಧಾನ ಪರಿಷತ್ನಲ್ಲಿ ಬಿಜೆಪಿ 31 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ 28, ಜೆಡಿಎಸ್ 13 ಸದಸ್ಯರನ್ನು ಹಾಗೂ ಒಂದು ಪಕ್ಷೇತರ ಸದಸ್ಯರಿದ್ದಾರೆ. ಆದರೆ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಿದ ಕಾರಣ ಆ ಸ್ಥಾನ ಖಾಲಿಯಿತ್ತು.
ಖಾಲಿಯಿದ್ದ ಸಭಾಪತಿ ಸ್ಥಾನಕ್ಕೆ ಬಿಜೆಪಿ ಬೆಂಬಲದೊಂದಿಗೆ ಬಸವರಾಜ ಹೊರಟ್ಟಿ ಇಂದು (ಫೆಬ್ರವರಿ 9) ಆಯ್ಕೆಯಾಗಿದ್ದಾರೆ. ಈ ವೇಳೆ ಪತ್ನಿ ಹೇಮಲತಾ, ಇಬ್ಬರು ಪುತ್ರರು ಹಾಗೂ ಪುತ್ರಿ ಉಪಸ್ಥಿತರಿದ್ದರು. ನೂತನ ಸಭಾಪತಿ ಹೊರಟ್ಟಿ ಅವರಿಗೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬಸವರಾಜ ಬೊಮ್ಮಾಯಿ ಆಭಿನಂದನೆ ಸಲ್ಲಿಸಿದರು.
74 ವರ್ಷದ ಹೊರಟ್ಟಿ 1980 ರಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಳ್ಳುತ್ತಾ ಬಂದಿದ್ದಾರೆ. 2018 ರಲ್ಲಿ ಆರು ತಿಂಗಳ ಅವಧಿಗೆ ವಿಧಾನ ಪರಿಷತ್ ಸಭಾಪತಿಯಾಗಿದ್ದರು.