ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಕರುನಾಡನ್ನ ಆವರಿಕೊಂಡಿದೆ. ದಿನೇ ದಿನೆ ದೈತ್ಯಾಕಾರದಲ್ಲಿ ಬೆಳೆಯುತ್ತಿದೆ. ಇದರ ಪರಿಣಾಮ ಶಿವಾಜಿನಗರದ ಚಾಂದನಿ ಚೌಕ್ ಸೀಲ್‌ಡೌನ್ ಆಗಿದೆ. ಏಕೆಂದ್ರೆ, ಇಂದು ಬೆಳಗ್ಗೆ ರಿಲೀಸ್ ಆದ ಹೆಲ್ತ್ ಬುಲೆಟಿನ್ನಲ್ಲಿ ಶಿವಾಜಿನಗರದ ಚಾಂದನಿ ಚೌಕ್ನಲ್ಲಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಚಾಂದನಿ ಚೌಕ್ ಸೀಲ್‌ಡೌನ್ದೆ ಆಗಿದೆ. 34 ವರ್ಷದ P-653 ಆಗಿರುವ ಈ ಸೋಂಕಿತ ಶಿವಾಜಿನಗರದ ಹೋಟೆಲ್ನಲ್ಲಿ ಹೌಸ್ ಕಿಪಿಂಗ್ ಕೆಲಸ ಮಾಡುತ್ತಿದ್ದ. ಶಿವಾಜಿನಗರದಲ್ಲಿ ಜನಸಂದಣಿ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಹೋಟೆಲ್ ಸೇರಿದಂತೆ ಆತ ವಾಸವಿದ್ದ ಜಾಗದಿಂದ 100 ಮೀಟರ್ ಸೀಲ್ ಡೌನ್ ಮಾಡಲಾಗಿದೆ.
Published On - 2:49 pm, Tue, 5 May 20