ಬೆಂಗಳೂರು: ಕೊರೊನಾ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳ ಎಡವಟ್ಟುಗಳು ಹೆಚ್ಚಾಗಿವೆ. ಈಗ ಬಿಬಿಎಂಪಿ ಮಹಾ ಎಡವಟ್ಟು ಮಾಡಿದೆ. ಕೊರೊನಾ ಕಾಣಿಸಿಕೊಂಡ ಮನೆ ಬಾಗಿಲಿಗೆ ಕಬ್ಬಿಣದ ಶೀಟ್ ಹಾಕಿ ಸೀಲ್ಡೌನ್ ಮಾಡಿದ್ದ ಘಟನೆ ನಡೆದಿದೆ.
ಬಿಬಿಎಂಪಿ ಸಿಬ್ಬಂದಿ ಕೊರೊನಾ ಕಾಣಿಸಿಕೊಂಡ ಏರಿಯಾ ಸೀಲ್ಡೌನ್ ಮಾಡುವ ಬದಲಾಗಿ ಮನೆಯವರು ಹೊರಬರದಂತೆ ಮನೆ ಸೀಲ್ ಮಾಡಿದ್ದಾರೆ. ಎರಡೂ ಮನೆಯ ಬಾಗಿಲಿಗೆ ಸೀಲ್ ಮಾಡಿ ಬಿಬಿಎಂಪಿ ಎಡವಟ್ಟು ಮಾಡಿದ್ದಾರೆ. ಮನೆಯವರು ಎಷ್ಟೇ ಬೇಡಿಕೊಂಡ್ರೂ ಕೇಳದೆ ಮನೆ ಸೀಲ್ಡೌನ್ ಮಾಡಿದ್ದಾರೆ. ಇದರಿಂದ ಮನೆಯವರು ಬಾರಲಾಗದೆ ಪರದಾಡಿದ್ದಾರೆ.
ಸೀಲ್ ಮಾಡಿರುವ ಮನೆಯಲ್ಲಿ ಒಬ್ಬ ಮಹಿಳೆ ಇಬ್ಬರು ಮಕ್ಕಳಿದ್ದಾರೆ. ಇನ್ನೊಂದು ಮನೆಯಲ್ಲಿ ವೃದ್ಧ ದಂಪತಿಗಳು ವಾಸವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪುಲ್ ವೈರಲ್ ಆದ ನಂತರ ಎಚ್ಚೆತ್ತುಗೊಂಡ ಬಿಬಿಎಂಪಿ ತಗಡಿನ ಸೀಟ್ ತೆರವು ಮಾಡಿದೆ. ಪಾಲಿಕೆಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
Published On - 8:26 am, Fri, 24 July 20