ಕೊರೊನಾ ಒಮ್ಮೆ ಬಂದು ಹೋದರೆ ಮತ್ತೆ ಎಂಟ್ರಿ ಕೊಡೋದಿಲ್ವ! ತಜ್ಞರ ಅಧ್ಯಯನ ಬಹಿರಂಗ

ಕೊರೊನಾ ಒಮ್ಮೆ ಬಂದು ಹೋದರೆ ಮತ್ತೆ ಎಂಟ್ರಿ ಕೊಡೋದಿಲ್ವ! ತಜ್ಞರ ಅಧ್ಯಯನ ಬಹಿರಂಗ

ದೆಹಲಿ: ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಅಟ್ಯಾಕ್ ಆಗಿದೆ. ಆದ್ರೆ ಡೆಡ್ಲಿ ವೈರಸ್ ಬಂದುಹೋದ ಮೇಲೆ ಮತ್ತೆ ಕೊರೊನಾ ತಗುಲುತ್ತಾ ಅನ್ನೋ ಚರ್ಚೆ ನಡೀತಿದೆ. ಈ ಬಗ್ಗೆ ಭಾರತ, ಬ್ರಿಟನ್, ಆಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಅಧ್ಯಯನ ನಡೆಯುತ್ತಿವೆ. ಅಧ್ಯಯನದ ಬಳಿಕ ತಜ್ಞರು ಹೇಳಿದ್ದೇನು ಗೊತ್ತಾ? ಉತ್ತರ ಪ್ರದೇಶದ ವೈದ್ಯರೊಬ್ಬರಿಗೆ ‘ಕೊರೊನಾ’ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಅವರು ಡಿಸ್ಚಾರ್ಜ್ ಕೂಡ ಆಗಿದ್ದರು. ಬಳಿಕ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೆ, ನೋಯ್ಡಾದ […]

Ayesha Banu

|

Jul 24, 2020 | 7:37 AM

ದೆಹಲಿ: ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಅಟ್ಯಾಕ್ ಆಗಿದೆ. ಆದ್ರೆ ಡೆಡ್ಲಿ ವೈರಸ್ ಬಂದುಹೋದ ಮೇಲೆ ಮತ್ತೆ ಕೊರೊನಾ ತಗುಲುತ್ತಾ ಅನ್ನೋ ಚರ್ಚೆ ನಡೀತಿದೆ. ಈ ಬಗ್ಗೆ ಭಾರತ, ಬ್ರಿಟನ್, ಆಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಅಧ್ಯಯನ ನಡೆಯುತ್ತಿವೆ. ಅಧ್ಯಯನದ ಬಳಿಕ ತಜ್ಞರು ಹೇಳಿದ್ದೇನು ಗೊತ್ತಾ?

ಉತ್ತರ ಪ್ರದೇಶದ ವೈದ್ಯರೊಬ್ಬರಿಗೆ ‘ಕೊರೊನಾ’ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಅವರು ಡಿಸ್ಚಾರ್ಜ್ ಕೂಡ ಆಗಿದ್ದರು. ಬಳಿಕ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೆ, ನೋಯ್ಡಾದ ಆ ವೈದ್ಯರಿಗೆ ಕೆಲ ದಿನಗಳ ಬಳಿಕ ಮತ್ತೆ ಶಾಕ್ ಕಾದಿತ್ತು. ಅದೇನಂದ್ರೆ ಕೊರೊನಾದಿಂದ ಗುಣಮುಖರಾಗಿದ್ದ ವೈದ್ಯರಿಗೆ ಮತ್ತೆ ವೈರಸ್ ಅಟ್ಯಾಕ್ ಆಗಿತ್ತು. ಕೊರೊನಾ ಸ್ಯಾಂಪಲ್ ಪರೀಕ್ಷೆಯಲ್ಲಿ ಇನ್ನೊಮ್ಮೆ ಪಾಸಿಟಿವ್ ಬಂದುಬಿಟ್ಟಿತ್ತು.

‘ಕೊರೊನಾ’ ಬಂದು ಹೋದರೆ ಮತ್ತೆ ಎಂಟ್ರಿ ಕೊಡೋದಿಲ್ಲ! ಹೌದು ಉತ್ತರಪ್ರದೇಶದ ವೈದ್ಯನಿಗೆ ಸೆಕೆಂಡ್ ಟೈಂ ಡೆಡ್ಲಿ ಕೊರೊನಾ ಅಟ್ಯಾಕ್ ಆಗಿರೋದನ್ನ ಕೇಳಿ ಎಲ್ಲರಿಗೂ ಶಾಕ್ ಆಗಿತ್ತು. ‘ಕೊರೊನಾ’ ಒಮ್ಮೆ ಬಂದುಹೋದ ನಂತರ ಮತ್ತೆ ವೈದ್ಯರ ದೇಹ ಹೊಕ್ಕಿತ್ತು. ಭಾರತ ಮಾತ್ರವಲ್ಲದೇ, ದಕ್ಷಿಣ ಕೊರಿಯಾ ಚೀನಾದಲ್ಲೂ ಕೆಲವರಲ್ಲಿ ಕೊರೊನಾ ಬಂದುಹೋದ ನಂತರವೂ ಸೆಕೆಂಡ್ ಟೈಂ ಎಂಟ್ರಿಯಾಗಿತ್ತು. ಅಂದಹಾಗೆ ಲಂಡನ್​ನ ಕಿಂಗ್ಸ್ ಕಾಲೇಜು ನಡೆಸಿರುವ ಅಧ್ಯಯನದ ಪ್ರಕಾರ, ದೇಹಕ್ಕೆ ವೈರಸ್ ಎಂಟ್ರಿಯಾದ ಬಳಿಕ 3 ವಾರದಲ್ಲಿ ವೈರಸ್ ಕೊಲ್ಲುವ ಪ್ರತಿಕಾಯಗಳು ತುತ್ತುತುದಿಗೆ ತಲುಪಿ ವೈರಸ್ ಸಾಯಿಸುತ್ತವೆ.

ಬಳಿಕ ಪ್ರತಿಕಾಯದ ಕುಸಿತ ಆರಂಭವಾಗುತ್ತೆ. ಆದ್ರೆ ಆರ್‌ಟಿ, ಪಿಸಿಆರ್ ಟೆಸ್ಟ್ ನಡೆಸಿದಾಗ ಸತ್ತ ವೈರಸ್‌ ಇದ್ದರೂ ಪಾಸಿಟಿವ್ ಬರುತ್ತಂತೆ. ಹೀಗೆ ವೈರಸ್ ಅಟ್ಯಾಕ್ ಆದಾಗ ವೈರಸ್ ವಿರುದ್ಧ ‘ಟಿ-ಸೆಲ್‌’ಗಳ ಬೆಳವಣಿಗೆ ಆಗುತ್ತದೆ. ಬಳಿಕ ವೈರಸ್ ಕೊಲ್ಲುವ ಪ್ರತಿಕಾಯಗಳು ಸಕ್ರಿಯವಾಗ್ತವೆ. ಈ ಟಿ-ಸೆಲ್ಸ್ 2 ವರ್ಷದವರೆಗೆ ಇರುತ್ತವೆ. ಈ ಹಿನ್ನೆಲೆಯಲ್ಲಿ ಹೇಳಬಹುದಾದರೆ ಕೊರೊನಾ ಒಮ್ಮೆ ಬಂದು ಹೋದ ನಂತರ ಮತ್ತೆ ಎಂಟ್ರಿ ಕೊಡಲು ಅವಕಾಶವೇ ಇಲ್ಲ ಅಂತಾ ತಜ್ಞರು ಹೇಳ್ತಿದ್ದಾರೆ.

ಭಾರತದಲ್ಲಿ ಇರೋ ಪರಿಸ್ಥಿತಿಯೇ ಬೇರೆ! ನಿಮಗೆ ಈ ವಿಚಾರ ಅಚ್ಚರಿ ಮೂಡಿಸಬಹುದು. ಯಾಕಂದ್ರೆ ಭಾರತದಲ್ಲಿ ಪಾಶ್ಚಿಮಾತ್ಯರಿಗಿಂತಲೂ ಡಿಫರೆಂಟ್ ವಾತಾವರಣ ಇದೆ. ಭಾರತದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಜನರಿಗಿಂತ ಭಾರತದ ಜನರಿಗೆ ಹೆಚ್ಚಿನ ರಕ್ಷಣೆ ದೇಹದಲ್ಲೇ ಇದೆ. ಇದನ್ನ ಸಿಂಗಾಪುರದಲ್ಲಿ ನಡೆದಿದ್ದ ಅಧ್ಯಯನ ಕೂಡ ಕನ್ಫರ್ಮ್ ಮಾಡಿದೆ.

ಹಾಗೇ ಅನೇಕ ವೈರಸ್‌ಗಳ ವಿರುದ್ಧ ಹೋರಾಡಲು ದಕ್ಷಿಣ ಏಷ್ಯಾದ ಜನರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂಬುದು ಈ ಹಿಂದೆಯೇ ಸಾಬೀತಾಗಿತ್ತು. ಇದು ಸದ್ಯ ಡೆಡ್ಲಿ ಕೊರೊನಾ ವಿಚಾರದಲ್ಲೂ ರಿಪೀಟ್ ಆಗಿದೆ. ಈ ಮೂಲಕ ಕೊರೊನಾ ವಿಷವ್ಯೂಹದಿಂದ ಬಚಾವ್ ಆಗೋದು ಒಂದಷ್ಟು ಸುಲಭವಾಗಿದೆ.

ಒಟ್ನಲ್ಲಿ ಎಲ್ಲೆಲ್ಲೂ ಕೊರೊನಾ ವೈರಸ್ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಸಂದರ್ಭದಲ್ಲಿ ಒಂದಷ್ಟು ನೆಮ್ಮದಿಯ ಸಂಗತಿಗಳು ರಿವೀಲ್ ಆಗ್ತಿವೆ. ಅದ್ರಲ್ಲೂ ಭಾರತೀಯರಲ್ಲಿ ಕೊರೊನಾ ವಿರುದ್ಧ ನೈಸರ್ಗಿಕ ಶಕ್ತಿ ಇರೋದು ಮತ್ತೊಮ್ಮೆ ಸಾಬೀತಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಕೊರೊನಾ ಮಾಯವಾದರೂ ಅಚ್ಚರಿ ಇಲ್ಲ.

Follow us on

Related Stories

Most Read Stories

Click on your DTH Provider to Add TV9 Kannada