ಇನ್ಮುಂದೆ, ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್‌

|

Updated on: Jul 19, 2020 | 10:46 AM

ಬೆಂಗಳೂರು: ನಗರದಲ್ಲಿ ನಾನ್ ಕೊವಿಡ್ ಕಾರಣಗಳಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿವಿ9 ಇದರ ಮೇಲೆ ಬೆಳಕು ಚೆಲ್ಲಿತ್ತು. ಇದೀಗ, ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್ ಮಾಡಲು ನಿರ್ಧರಿಸಿದ್ದಾರೆ. ಸೋಂಕಿನ ಲಕ್ಷಣ ಅಥವಾ ಇತರೆ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಅವರಿಗೂ ಕೊವಿಡ್​ ಪರೀಕ್ಷೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ಹಾಗಾಗಿ, ಮನೆಯಲ್ಲಿ ಮೃತಪಟ್ಟವರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕುಟುಂಬದವರಿಗೆ ಸೂಚಿಸಿದೆ. ಮಾಹಿತಿ ದೊರೆತ […]

ಇನ್ಮುಂದೆ, ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್‌
Follow us on

ಬೆಂಗಳೂರು: ನಗರದಲ್ಲಿ ನಾನ್ ಕೊವಿಡ್ ಕಾರಣಗಳಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿವಿ9 ಇದರ ಮೇಲೆ ಬೆಳಕು ಚೆಲ್ಲಿತ್ತು. ಇದೀಗ, ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್ ಮಾಡಲು ನಿರ್ಧರಿಸಿದ್ದಾರೆ.

ಸೋಂಕಿನ ಲಕ್ಷಣ ಅಥವಾ ಇತರೆ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಅವರಿಗೂ ಕೊವಿಡ್​ ಪರೀಕ್ಷೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ಹಾಗಾಗಿ, ಮನೆಯಲ್ಲಿ ಮೃತಪಟ್ಟವರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕುಟುಂಬದವರಿಗೆ ಸೂಚಿಸಿದೆ.

ಮಾಹಿತಿ ದೊರೆತ ಕೂಡಲೇ ವೈದ್ಯರ ತಂಡ ಮೃತರ ಮನೆಗೆ ಬಂದು ಗಂಟಲು ದ್ರವ ಸಂಗ್ರಹಿಸಲಿದ್ದಾರೆ. ಫಲಿತಾಂಶ ಬಂದ ನಂತರ ಪಾಸಿಟಿವ್​​ ಇದ್ದರೆ ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಲಾಗುವುದು. ಆದರೆ, ಟೆಸ್ಟ್ ವರದಿ ಬರುವವರೆಗೂ ಕುಟುಂಬಸ್ಥರು ಕಾಯುವ ಅವಶ್ಯಕತೆ ಇಲ್ಲ. ಸ್ವ್ಯಾಬ್ ಪಡೆದ ತಕ್ಷಣ ಮೃತರ ಅಂತ್ಯಸಂಸ್ಕಾರ ನೆರವೇರಿಸಬಹುದು ಎಂದು ಬಿಬಿಎಂಪಿಯ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Published On - 10:42 am, Sun, 19 July 20