ನಿವೃತ್ತಿ ನಂತರ ಮುಂದೇನು ಅನ್ನೋ ಪ್ರಶ್ನೆ The Great Wall ದ್ರಾವಿಡ್​ಗೂ ಕಾಡಿತ್ತಂತೆ!

The Great Wall ರಾಹುಲ್ ದ್ರಾವಿಡ್​ಗೂ ನಿವೃತ್ತಿಯ ನಂತರ ಮುಂದೇನು ಅನ್ನೋ ಆತಂಕದ ಪ್ರಶ್ನೆ ಕಾಡಿತ್ತಂತೆ. ಈ ವಿಚಾರವನ್ನ ಈಗ ರಾಹುಲ್ ದ್ರಾವಿಡ್ ಬಾಯ್ಬಿಟ್ಟಿದ್ದಾರೆ. ಭಾರತ-A ತಂಡ ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಕೋಚಿಂಗ್ ಜವಾಬ್ದಾರಿಯನ್ನ ವಹಿಸಿಕೊಳ್ಳುವ ಮುನ್ನ ನಿವೃತ್ತಿಯ ನಂತರ ಮುಂದೇನು ಮಾಡಬೇಕು ಎಂಬುದಕ್ಕೆ ಅವರ ಸ್ಪಷ್ಟ ಉತ್ತರ ಇರಲಿಲ್ಲ. ಈ ಅವಧಿಯಲ್ಲಿ IPL​ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್​ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ನನ್ನ ಅದೃಷ್ಟ ಎಂದು ದ್ರಾವಿಡ್ ಹೇಳಿದ್ದಾರೆ. […]

ನಿವೃತ್ತಿ ನಂತರ ಮುಂದೇನು ಅನ್ನೋ ಪ್ರಶ್ನೆ The Great Wall ದ್ರಾವಿಡ್​ಗೂ ಕಾಡಿತ್ತಂತೆ!
Follow us
KUSHAL V
|

Updated on: Jul 19, 2020 | 11:19 AM

The Great Wall ರಾಹುಲ್ ದ್ರಾವಿಡ್​ಗೂ ನಿವೃತ್ತಿಯ ನಂತರ ಮುಂದೇನು ಅನ್ನೋ ಆತಂಕದ ಪ್ರಶ್ನೆ ಕಾಡಿತ್ತಂತೆ. ಈ ವಿಚಾರವನ್ನ ಈಗ ರಾಹುಲ್ ದ್ರಾವಿಡ್ ಬಾಯ್ಬಿಟ್ಟಿದ್ದಾರೆ. ಭಾರತ-A ತಂಡ ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಕೋಚಿಂಗ್ ಜವಾಬ್ದಾರಿಯನ್ನ ವಹಿಸಿಕೊಳ್ಳುವ ಮುನ್ನ ನಿವೃತ್ತಿಯ ನಂತರ ಮುಂದೇನು ಮಾಡಬೇಕು ಎಂಬುದಕ್ಕೆ ಅವರ ಸ್ಪಷ್ಟ ಉತ್ತರ ಇರಲಿಲ್ಲ. ಈ ಅವಧಿಯಲ್ಲಿ IPL​ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್​ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ನನ್ನ ಅದೃಷ್ಟ ಎಂದು ದ್ರಾವಿಡ್ ಹೇಳಿದ್ದಾರೆ.

ನಾನು ಆಟ ಮುಗಿಸಿದ ನಂತರ ನನ್ನ ಮುಂದೆ ಕೆಲವು ಆಯ್ಕೆಗಳಿದ್ದವು. ಆದ್ರೆ ಏನನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದ್ರ ಬಗ್ಗೆ ಖಚಿತ ನಿಲುವಿರಲಿಲ್ಲ. ಆದ್ರೆ ನನ್ನ ವೃತ್ತಿಜೀವನದ ಅಂತ್ಯಕ್ಕೆ ಬರುವಾಗ ಕಪಿಲ್ ದೇವ್ ನನಗೆ ಈ ಸಲಹೆಯನ್ನು ನೀಡಿದ್ದರು ಎಂದು ದ್ರಾವಿಡ್ ಹಂಚಿಕೊಂಡಿದ್ದಾರೆ.

ಕಪಿಲ್​ ದೇವ್​ ನೀಡಿದ ಸಲಹೆ ಏನೆಂದರೆ, ರಾಹುಲ್ ಯಾವುದೇ ಕೆಲಸಕ್ಕೆ ಮೊದಲು ನೇರವಾಗಿ ಧುಮುಕಬೇಡಿ. ಒಂದಷ್ಟು ವರ್ಷ ಬೇರೆ ಬೇರೆ ವಿಭಾಗಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ. ಆ ನಂತರ ನಿಮಗೇನು ಇಷ್ಟವಾಗುತ್ತೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕಪಿಲ್ ದೇವ್ ಸಲಹೆ ನೀಡಿದ್ರು. ನಿಜಕ್ಕೂ ಕಪಿಲ್ ಪಾಜಿ ನೀಡಿದ ಸಲಹೆ ಒಳ್ಳೆಯದಾಗಿತ್ತು ಎಂದಿದ್ದಾರೆ Jammy.

ನನಗೆ ಹೆಚ್ಚು ತೃಪ್ತಿಯನ್ನು ನೀಡಿದ ವಿಷಯವೆಂದರೆ ನಿಜವಾಗಿಯೂ ನಾನು ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುವುದು. ಆಟಗಾರರೊಂದಿಗೆ ಸಂಪರ್ಕದಲ್ಲಿರೋದು. ನಾನು ಕೋಚಿಂಗ್ ವಿಭಾಗವನ್ನ ನಿಜವಾಗಿಯೂ ಇಷ್ಟಪಟ್ಟೆ. ಹೀಗಾಗಿ, ಭಾರತ A ಮತ್ತು ಅಂಡರ್ 19 ತಂಡಕ್ಕೆ ಕೋಚ್ ಆಗೋ ಅವಕಾಶ ಬಂದಾಗ ಖುಷಿಯಿಂದ ಅದನ್ನ ಒಪ್ಪಿಕೊಂಡೆ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ