ಬೆಂಗಳೂರು ಜನತೆಗೆ BBMP ತೆರಿಗೆ Shock

ಬೆಂಗಳೂರು ಜನತೆಗೆ BBMP ತೆರಿಗೆ Shock
ಬಿಬಿಎಂಪಿ

ಬೆಂಗಳೂರು: ನಗರದ ನಿವಾಸಿಗಳಿಗೆ ತೆರಿಗೆ ಶಾಕ್​ ನೀಡಲು ಬಿಬಿಎಂಪಿ ಮುಂದಾಗಿದೆ. ಹೌದು, ಪಾಲಿಕೆಯು ಇದೀಗ ಆಸ್ತಿ ತೆರಿಗೆ, ಪ್ಲ್ಯಾನ್ ಅಪ್ರೂವಲ್ ಹಾಗೂ ಖಾತಾ ಹಂಚಿಕೆಯ ದರವನ್ನು ಏರಿಕೆ ಮಾಡುವ ಜೊತೆಗೆ ಭೂಸಾರಿಗೆ ಸೆಸ್ ಜಾರಿಗೆ ತರಲು ಸಹ BBMP ತೀರ್ಮಾನ ಕೈಗೊಂಡಿದೆ. ತನ್ನ ಆದಾಯವನ್ನ ಹೆಚ್ಚಿಸಲು ಮುಂದಾದ ಪಾಲಿಕೆ ಆಸ್ತಿ‌ ತೆರಿಗೆ ಶೇಕಡಾ 15 ರಿಂದ 30ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಿದ್ದು ಪ್ಲ್ಯಾನ್ ಅಪ್ರೂವಲ್​ ಶುಲ್ಕವನ್ನು ಶೇಕಡಾ 25ರಷ್ಟು ಹೆಚ್ಚಳ ಮಾಡಲು ರೆಡಿಯಾಗಿದೆ. ಜೊತೆಗೆ, ಆಸ್ತಿ ನೋಂದಾಯಿಸುವಾಗ […]

KUSHAL V

| Edited By: sadhu srinath

Sep 18, 2020 | 10:42 AM

ಬೆಂಗಳೂರು: ನಗರದ ನಿವಾಸಿಗಳಿಗೆ ತೆರಿಗೆ ಶಾಕ್​ ನೀಡಲು ಬಿಬಿಎಂಪಿ ಮುಂದಾಗಿದೆ. ಹೌದು, ಪಾಲಿಕೆಯು ಇದೀಗ ಆಸ್ತಿ ತೆರಿಗೆ, ಪ್ಲ್ಯಾನ್ ಅಪ್ರೂವಲ್ ಹಾಗೂ ಖಾತಾ ಹಂಚಿಕೆಯ ದರವನ್ನು ಏರಿಕೆ ಮಾಡುವ ಜೊತೆಗೆ ಭೂಸಾರಿಗೆ ಸೆಸ್ ಜಾರಿಗೆ ತರಲು ಸಹ BBMP ತೀರ್ಮಾನ ಕೈಗೊಂಡಿದೆ.

ತನ್ನ ಆದಾಯವನ್ನ ಹೆಚ್ಚಿಸಲು ಮುಂದಾದ ಪಾಲಿಕೆ ಆಸ್ತಿ‌ ತೆರಿಗೆ ಶೇಕಡಾ 15 ರಿಂದ 30ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಿದ್ದು ಪ್ಲ್ಯಾನ್ ಅಪ್ರೂವಲ್​ ಶುಲ್ಕವನ್ನು ಶೇಕಡಾ 25ರಷ್ಟು ಹೆಚ್ಚಳ ಮಾಡಲು ರೆಡಿಯಾಗಿದೆ. ಜೊತೆಗೆ, ಆಸ್ತಿ ನೋಂದಾಯಿಸುವಾಗ ಖಾತಾ ಶುಲ್ಕ ಹೆಚ್ಚಳಕ್ಕೆ ಸಹ ನಿರ್ಧಾರ ತೆಗೆದುಕೊಂಡಿದೆ.

ನೋಂದಣಿ ಶುಲ್ಕದ ಆಧಾರದ ಮೇಲೆ ಖಾತಾ ಶುಲ್ಕ ಹೆಚ್ಚಳ ಮಾಡಲಾಗುವುದು. ಇದಲ್ಲದೆ, ಗಾರ್ಬೆಜ್ ಸೆಸ್ ಕೂಡ ಹೆಚ್ಚಳ ಮಾಡುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ರೋಡ್ ಕಟಿಂಗ್ ಚಾರ್ಜ್ಸ್ ಹೆಚ್ಚಳ ಮಾಡಲು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಟಿವಿ9ಗೆ BBMP ಆಯುಕ್ತ ಮಂಜುನಾಥ ಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada