ರಸ್ತೆ ಬದಿ PPE Kit ಎಸೆದರೆ ಕ್ರಿಮಿನಲ್ ಕೇಸ್: BBMP ಖಡಕ್ ವಾರ್ನಿಂಗ್
ಬೆಂಗಳೂರು: ಎಲ್ಲೆಂದರಲ್ಲಿ ಪಿಪಿಇ ಕಿಟ್ ಉಪಯೊಗಿಸಿ ಎಸೆಯುವ ಬೇಜವಾಬ್ದಾರಿ ಆಸ್ಪತ್ರೆಗಳ ಮೇಲೆ ಬಿಬಿಎಂಪಿ ಗರಮ್ ಆಗಿದೆ. ಇನ್ಮುಂದೆ ಯಾರಾದ್ರೂ ಬೇಕಾಬಿಟ್ಟಿ ಪಿಪಿಇ ಕಿಟ್‌ಗಳನ್ನು ಎಸೆದ್ರೆ ಅಂಥವರ ಮೇಲೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಹೌದು ಕಳೆದ ಕೆಲ ದಿನಗಳಿಂದ ಕೆಲ ಆಸ್ಪತ್ರೆಗಳ ಸಿಬ್ಬಂದಿ ಉಪಯೋಗಿಸಿದ ಪಿಪಿಇ ಕಿಟ್‌ಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಎಸೆಯುತ್ತಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಜೆಸಿ ನಗರ, ಶಿವಾಜಿನಗರ ಬೌರಿಂಗ್ ಆಸ್ಪತ್ರೆ, ಕೋರಮಂಗಲ ಸೇರಿದಂತೆ ನಾನಾ ಕಡೆ ರಸ್ತೆ ಬದಿಯಲ್ಲಿಯೇ ಕಿಟ್‌ಗಳನ್ನ ಎಸೆಯಲಾಗುತ್ತಿದೆ. ಹೀಗಾಗಿ ಗರಮ್ […]
ಬೆಂಗಳೂರು: ಎಲ್ಲೆಂದರಲ್ಲಿ ಪಿಪಿಇ ಕಿಟ್ ಉಪಯೊಗಿಸಿ ಎಸೆಯುವ ಬೇಜವಾಬ್ದಾರಿ ಆಸ್ಪತ್ರೆಗಳ ಮೇಲೆ ಬಿಬಿಎಂಪಿ ಗರಮ್ ಆಗಿದೆ. ಇನ್ಮುಂದೆ ಯಾರಾದ್ರೂ ಬೇಕಾಬಿಟ್ಟಿ ಪಿಪಿಇ ಕಿಟ್‌ಗಳನ್ನು ಎಸೆದ್ರೆ ಅಂಥವರ ಮೇಲೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ.
ಹೌದು ಕಳೆದ ಕೆಲ ದಿನಗಳಿಂದ ಕೆಲ ಆಸ್ಪತ್ರೆಗಳ ಸಿಬ್ಬಂದಿ ಉಪಯೋಗಿಸಿದ ಪಿಪಿಇ ಕಿಟ್‌ಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಎಸೆಯುತ್ತಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಜೆಸಿ ನಗರ, ಶಿವಾಜಿನಗರ ಬೌರಿಂಗ್ ಆಸ್ಪತ್ರೆ, ಕೋರಮಂಗಲ ಸೇರಿದಂತೆ ನಾನಾ ಕಡೆ ರಸ್ತೆ ಬದಿಯಲ್ಲಿಯೇ ಕಿಟ್‌ಗಳನ್ನ ಎಸೆಯಲಾಗುತ್ತಿದೆ.
ಹೀಗಾಗಿ ಗರಮ್ ಆಗಿರುವ ಬಿಬಿಎಂಪಿ, ಪಿಪಿಇ ಕಿಟ್‌ಗಳು ವೈದ್ಯಕೀಯ ತ್ಯಾಜ್ಯಗಳು. ಅದ್ರಲ್ಲೂ ಕೊರೊನಾದಂಥ ಹೆಮ್ಮಾರಿಯ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಬಳಸಲಾಗುತ್ತಿದೆ. ಇವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದರೆ ಇಡೀ ಬೆಂಗಳೂರಿಗೆ ಕಂಟಕ. ಹೀಗಾಗಿ ಇಂಥ ಅಪಾಯಕಾರಿ ಉಪಯೋಗಿಸಿರುವ ಪಿಪಿಇ ಕಿಟ್‌ಗಳನ್ನು ಸರಿಯಾಗಿ ಡಿಸ್‌ಪೋಸ್ ಮಾಡದೇ ಎಸೆದರೆ ಅವರ ಮೇಲೆ ಎಫ್‌ಐಆರ್ ಹಾಕಿ ತಕ್ಕ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಸ್ಪತ್ರೆಗಳಿಗೆ ಎಚ್ಚರಿಸಿದೆ.