AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಲ್ಲಿ ಇನ್ನೂ ಬಗೆ ಹರಿದಿಲ್ಲ ಸೋಂಕಿತ ತಾಯಿಯ ನೋವು, ಮನೆಯಲ್ಲಿ ಮಗನ ನರಳಾಟ

ಬೆಂಗಳೂರು: ನಗರದಲ್ಲಿ ಕೊರೊನಾ ಸ್ಫೋಟದ ನಡುವೆ ಅತೀವ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ವಿಕ್ಟೋರಿಯಾದಲ್ಲ್ಲಿ ಸೋಂಕಿತರ ಯಮಯಾತನೆ ಇನ್ನೂ ನಿಂತಿಲ್ಲ. ಕೊರೊನಾ ಸೋಂಕಿತರನ್ನ ಕಂಡ್ರೆ ಯಾಕಿಷ್ಟು ಆಲಕ್ಷ್ಯ.. ನಿರ್ಲಕ್ಷ್ಯ? ಅನ್ನೋದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಸೋಂಕಿತೆ ಮಹಿಳೆ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾದಲ್ಲಿ ಇರುವ ಸೋಂಕಿತ ಮಹಿಳೆ ಅಲ್ಲಿನ ವರ್ತನೆ ಬಗ್ಗೆ ತಿಳಿಸಿದ್ದಾರೆ. ಅಂಗಲಾಚಿ ಬೇಡಿಕೊಂಡ್ರೂ ಮಹಿಳೆಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆಯಂತೆ. ಸೋಂಕಿತ ಮಹಿಳೆಗೆ 7 ದಿನ ಕಳೆದ್ರೂ ಇನ್ನು ಚಿಕಿತ್ಸೆ ನೀಡಿಲ್ಲ. ವಿಕ್ಟೋರಿಯಾದ ಟ್ರಾಮಾಕೇರ್ ಸೆಂಟರ್​​ನಲ್ಲಿ […]

ಆಸ್ಪತ್ರೆಯಲ್ಲಿ ಇನ್ನೂ ಬಗೆ ಹರಿದಿಲ್ಲ ಸೋಂಕಿತ ತಾಯಿಯ ನೋವು, ಮನೆಯಲ್ಲಿ ಮಗನ ನರಳಾಟ
ಆಯೇಷಾ ಬಾನು
|

Updated on:Jul 03, 2020 | 11:22 AM

Share

ಬೆಂಗಳೂರು: ನಗರದಲ್ಲಿ ಕೊರೊನಾ ಸ್ಫೋಟದ ನಡುವೆ ಅತೀವ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ವಿಕ್ಟೋರಿಯಾದಲ್ಲ್ಲಿ ಸೋಂಕಿತರ ಯಮಯಾತನೆ ಇನ್ನೂ ನಿಂತಿಲ್ಲ. ಕೊರೊನಾ ಸೋಂಕಿತರನ್ನ ಕಂಡ್ರೆ ಯಾಕಿಷ್ಟು ಆಲಕ್ಷ್ಯ.. ನಿರ್ಲಕ್ಷ್ಯ? ಅನ್ನೋದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಸೋಂಕಿತೆ ಮಹಿಳೆ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾದಲ್ಲಿ ಇರುವ ಸೋಂಕಿತ ಮಹಿಳೆ ಅಲ್ಲಿನ ವರ್ತನೆ ಬಗ್ಗೆ ತಿಳಿಸಿದ್ದಾರೆ. ಅಂಗಲಾಚಿ ಬೇಡಿಕೊಂಡ್ರೂ ಮಹಿಳೆಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆಯಂತೆ. ಸೋಂಕಿತ ಮಹಿಳೆಗೆ 7 ದಿನ ಕಳೆದ್ರೂ ಇನ್ನು ಚಿಕಿತ್ಸೆ ನೀಡಿಲ್ಲ. ವಿಕ್ಟೋರಿಯಾದ ಟ್ರಾಮಾಕೇರ್ ಸೆಂಟರ್​​ನಲ್ಲಿ ಕೇಳೋರೆ ಇಲ್ವಂತೆ. ಪರಿ ಪರಿಯಾಗಿ ಬೇಡಿಕೊಂಡ್ರೂ ಯಾರೂ ಕೂಡ ಕೇರ್ ಮಾಡ್ತಿಲ್ಲ ಎಂಬ ಆಸ್ಪತ್ರೆಯ ಭಯಾನಕ ಸ್ಥಿತಿ ತೆರೆದಿಟ್ಟಿದ್ದಾರೆ.

ತಾಯಿಗಾಗಿ ಮಗನ ಕಣ್ಣೀರು ತಾಯಿ ಜೀವ ಹಿಂಡುವ ಪರಿಸ್ಥಿತಿ ಕಂಡು ಮಗ ಕಣ್ಣೀರು ಹಾಕುತ್ತಿದ್ದಾರೆ. ತಾಯಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಸೋಂಕಿತ ತಾಯಿಯ ಮಗ ಕಣ್ಣೀರು ಹಾಕುತ್ತಿದ್ದಾರೆ. ದಯವಿಟ್ಟು ನಮ್ಮ ತಾಯಿಯನ್ನ ಉಳಿಸಿಕೊಡಿ ಅಂತಾ ಅಳಲು ತೂಡಿಕೊಂಡಿದ್ದಾರೆ. ಹೆತ್ತಮ್ಮನನ್ನು ಉಳಿಸಿಕೊಳ್ಳಲು ನನ್ನ ಕೈಯಲ್ಲಿ ಆಗುತ್ತಿಲ್ಲವೆಂದು ಭಾವುಕರಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ರೂ ಟ್ರೀಟ್ಮೆಂಟ್ ನೀಡುತ್ತಿಲ್ಲ ವೆಂದು ಸೋಂಕಿತ ಮಹಿಳೆ ಕರುಣಾಜನಕ ಪರಿಸ್ಥಿತಿ ಕಂಡು ಮಗ ಗೋಳಾಡುತ್ತಿದ್ದಾರೆ.

Published On - 10:51 am, Fri, 3 July 20