
ಬೆಳಗಾವಿ: ಮಚ್ಛೆ ಗ್ರಾಮದಲ್ಲಿ ವಿವಾಹಿತ ಮಹಿಳೆಯರಿಬ್ಬರ ಜೋಡಿ ಕೊಲೆ ಪ್ರಕರಣ ಸಂಬಂಧ ಮಹಿಳೆ ಸೇರಿ ಐವರು ಆರೋಪಿಗಳನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಡಿಸಿಪಿ ವಿಕ್ರಂ ಆಮಟೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸೆಪ್ಟೆಂಬರ್ 26ರ ಸಂಜೆ 4 ಗಂಟೆಗೆ ವಾಕಿಂಗ್‌ಗೆ ಹೋಗಿದ್ದ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರನ್ನುಆರೋಪಿಗಳು ಕೊಲೆ ಮಾಡಿದ್ದರು. ರೋಹಿಣಿ ಹುಲಮನಿ(23), ರಾಜಶ್ರೀ ಬನ್ನೂರ್(21) ಮೃತರು. ಈ ಪ್ರಕರಣ ಸಂಬಂಧ ಕಾಳೇನಟ್ಟಿ ಗ್ರಾಮದ ಕಲ್ಪನಾ ಬಸರಿಮರದ(35), ಮಹಾರಾಷ್ಟ್ರ ಮೂಲದ ಮಹೇಶ್ ನಾಯಿಕ್, ಬೆಳಗುಂದಿ ಗ್ರಾಮದ ರಾಹುಲ್ ಪಾಟೀಲ್, ಗಣೇಶಪುರದ ರೋಹಿತ್ ವಡ್ಡರ್, ಕಾಳೇನಟ್ಟಿ ಗ್ರಾಮದ ಶಾನೂರ್ ಬನ್ನಾರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೆ ಅಂತ ಕೊಲೆ ಮಾಡಿಸಿದಳು:
ಅಕ್ರಮ ಸಂಬಂಧಕ್ಕೆ ರೋಹಿಣಿ ಅಡ್ಡಿಯಾಗಿದ್ದಳೆಂದು ಸಂಚು ರೂಪಿಸಿ ತನ್ನ ಸಂಬಂಧಿ ಮಹೇಶ ನಾಯಕ್‌ಗೆ ಹೇಳಿಸಿ ಕಲ್ಪನಾಳ ಹತ್ಯೆ ಮಾಡಿಸಿದ್ದಾಳೆ. ಆರೋಪಿಗಳು ರೋಹಿಣಿ ಜೊತೆ ವಾಕಿಂಗ್‌ಗೆ ಹೋಗಿದ್ದ ಜಯಶ್ರೀಯನ್ನು ಹತ್ಯೆಗೈದು ಪರಾರಿಯಾಗಿದ್ರು. ಸದ್ಯ ಈಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.