ಶಾಂತವಾಗದ ವರುಣನ ಪ್ರತಾಪ, ಸೊಗಲ ಸೋಮೇಶ್ವರನಿಗೆ ವರುಣನ ದಿಗ್ಬಂಧನ

| Updated By: ಸಾಧು ಶ್ರೀನಾಥ್​

Updated on: Oct 15, 2020 | 10:37 AM

ಬೆಳಗಾವಿ: ವರುಣನ ರೌದ್ರಾವತಾರಕ್ಕೆ ಕರುನಾಡು ಕಂಗಾಲಾಗಿದೆ. ಕ್ಷಣ ಕ್ಷಣಕ್ಕೂ ವರುಣನ ಅವಾಂತರ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸೊಗಲ ಸೋಮೇಶ್ವರ ದೇವಸ್ಥಾನ ಮುಳುಗಿದೆ. ಭಾರಿ ಮಳೆಯಿಂದಾಗಿ ನಿನ್ನೆ ಸಂಜೆ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸೋಮೇಶ್ವರನ ಮೂರ್ತಿ ಕೂಡ ಭಾಗಶಃ ಜಲಾವೃತಗೊಂಡಿದೆ. ದೇವಸ್ಥಾನದ ಹೊರ ಭಾಗದಲ್ಲಿ ಮಳೆ ನೀರು ಝರಿಯಂತೆ ಉಕ್ಕಿ ಹರಿಯುತ್ತಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಶಾಂತವಾಗದ ವರುಣನ ಪ್ರತಾಪ, ಸೊಗಲ ಸೋಮೇಶ್ವರನಿಗೆ ವರುಣನ ದಿಗ್ಬಂಧನ
Follow us on

ಬೆಳಗಾವಿ: ವರುಣನ ರೌದ್ರಾವತಾರಕ್ಕೆ ಕರುನಾಡು ಕಂಗಾಲಾಗಿದೆ. ಕ್ಷಣ ಕ್ಷಣಕ್ಕೂ ವರುಣನ ಅವಾಂತರ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸೊಗಲ ಸೋಮೇಶ್ವರ ದೇವಸ್ಥಾನ ಮುಳುಗಿದೆ.

ಭಾರಿ ಮಳೆಯಿಂದಾಗಿ ನಿನ್ನೆ ಸಂಜೆ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸೋಮೇಶ್ವರನ ಮೂರ್ತಿ ಕೂಡ ಭಾಗಶಃ ಜಲಾವೃತಗೊಂಡಿದೆ. ದೇವಸ್ಥಾನದ ಹೊರ ಭಾಗದಲ್ಲಿ ಮಳೆ ನೀರು ಝರಿಯಂತೆ ಉಕ್ಕಿ ಹರಿಯುತ್ತಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

Published On - 9:29 am, Thu, 15 October 20