ಇಂಜೆಕ್ಷನ್ ನೀಡ್ತಿದ್ದಂತೆ ಯುವಕ ಸಾವು, ರೊಚ್ಚಿಗೆದ್ದ ಕುಟುಂಬಸ್ಥರಿಂದ ದಾಂಧಲೆ

ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ ಆರೋಪದ ಮೇಲೆ ರೊಚ್ಚಿಗೆದ್ದ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ಪೀಠೋಪಕರಣ, ವೈದ್ಯಕೀಯ ಉಪಕರಣ ನಾಶಪಡಿಸಿದ್ದಾರೆ. ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಖಾನಾಪುರದ ವರ್ದೆ ಕಾಲೋನಿಯ ಡಾ. ರಾಯಣ್ಣವರ ಆಸ್ಪತ್ರೆ ಮೇಲೆ ಈ ದಾಳಿ ನಡೆದಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷದ ಸೂರಜ್ ಗಾವಡೆ ಮೃತಪಟ್ಟ ದುರ್ದೈವಿ. ಚಿಕಿತ್ಸೆ ಫಲಿಸದೇ ಮೃತಪಟ್ಟ ಸೂರಜ್ ಗಾವಡೆಗೆ ಬೆಳಗ್ಗೆ ಇಂಜೆಕ್ಷನ್ ನೀಡುತ್ತಿದ್ದಂತೆ ಯುವಕ ಸಾವಿಗೀಡಾದ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಕುಟುಂಬಸ್ಥರು ಸೀದಾ […]

ಇಂಜೆಕ್ಷನ್ ನೀಡ್ತಿದ್ದಂತೆ ಯುವಕ ಸಾವು, ರೊಚ್ಚಿಗೆದ್ದ ಕುಟುಂಬಸ್ಥರಿಂದ ದಾಂಧಲೆ

Updated on: Oct 20, 2020 | 4:55 PM

ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ ಆರೋಪದ ಮೇಲೆ ರೊಚ್ಚಿಗೆದ್ದ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ಪೀಠೋಪಕರಣ, ವೈದ್ಯಕೀಯ ಉಪಕರಣ ನಾಶಪಡಿಸಿದ್ದಾರೆ. ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಘಟನೆ ನಡೆದಿದೆ.

ಖಾನಾಪುರದ ವರ್ದೆ ಕಾಲೋನಿಯ ಡಾ. ರಾಯಣ್ಣವರ ಆಸ್ಪತ್ರೆ ಮೇಲೆ ಈ ದಾಳಿ ನಡೆದಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷದ ಸೂರಜ್ ಗಾವಡೆ ಮೃತಪಟ್ಟ ದುರ್ದೈವಿ.

ಚಿಕಿತ್ಸೆ ಫಲಿಸದೇ ಮೃತಪಟ್ಟ ಸೂರಜ್ ಗಾವಡೆಗೆ ಬೆಳಗ್ಗೆ ಇಂಜೆಕ್ಷನ್ ನೀಡುತ್ತಿದ್ದಂತೆ ಯುವಕ ಸಾವಿಗೀಡಾದ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಕುಟುಂಬಸ್ಥರು ಸೀದಾ ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಖಾನಾಪುರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

 

Published On - 4:54 pm, Tue, 20 October 20