ಬಿಯರ್ ಸಾಗಿಸ್ತಿದ್ದ ಲಾರಿಗೆ ಸಣ್ಣ ಅಪಘಾತ.. ಸ್ಥಳೀಯರು ಕತ್ತಲಲ್ಲೇ ಬಿಯರ್ ಬಾಕ್ಸ್ ಹೊತ್ತೊಯ್ದರು!
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನ ಕೋಟೆ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಅಪಘಾತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಬಾಕ್ಸ್ ಬಾಕ್ಸ್ ಬಿಯರ್ ಹೊತ್ತೊಯ್ದ ಸ್ವಾರಸ್ಯಕರ ಘಟನೆ ಕಳೆದ ರಾತ್ರಿ ನಡೆದಿದೆ. ಹಾಸನದಿಂದ ವುಡ್ಪಿಕರ್ನಿಂದ 900 ಬಾಕ್ಸ್ ಬಿಯರ್ ತುಂಬಿಕೊಂಡು ತೆರಳುತ್ತಿದ್ದ ಲಾರಿ ಕೇರಳದ ಪೆರಿನ್ ತಾಲಮನ್ನಾಗೆ ಹೊರಟಿತ್ತು. ಇದೇ ವೇಳೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸಿಲುಕಿದ ಲಾರಿ ಕೊಂಚ ವಾಲಿಕೊಂಡಿತು. ಇದೇ ಅವಕಾಶವನ್ನು ಬಳಸಿಕೊಂಡ ಕೆಲವರು ಕತ್ತಲಲ್ಲಿ ಲಾರಿಯಲ್ಲಿದ್ದ 10ಕ್ಕೂ ಹೆಚ್ಚು ಬಿಯರ್ ಬಾಕ್ಸ್ಗಳನ್ನು ಹೊತ್ತೊಯ್ದಿದ್ದಾರೆ […]
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನ ಕೋಟೆ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಅಪಘಾತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಬಾಕ್ಸ್ ಬಾಕ್ಸ್ ಬಿಯರ್ ಹೊತ್ತೊಯ್ದ ಸ್ವಾರಸ್ಯಕರ ಘಟನೆ ಕಳೆದ ರಾತ್ರಿ ನಡೆದಿದೆ.
ಹಾಸನದಿಂದ ವುಡ್ಪಿಕರ್ನಿಂದ 900 ಬಾಕ್ಸ್ ಬಿಯರ್ ತುಂಬಿಕೊಂಡು ತೆರಳುತ್ತಿದ್ದ ಲಾರಿ ಕೇರಳದ ಪೆರಿನ್ ತಾಲಮನ್ನಾಗೆ ಹೊರಟಿತ್ತು. ಇದೇ ವೇಳೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸಿಲುಕಿದ ಲಾರಿ ಕೊಂಚ ವಾಲಿಕೊಂಡಿತು.
ಇದೇ ಅವಕಾಶವನ್ನು ಬಳಸಿಕೊಂಡ ಕೆಲವರು ಕತ್ತಲಲ್ಲಿ ಲಾರಿಯಲ್ಲಿದ್ದ 10ಕ್ಕೂ ಹೆಚ್ಚು ಬಿಯರ್ ಬಾಕ್ಸ್ಗಳನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಾರನೇ ದಿನ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಅಬಕಾರಿ ನಿರೀಕ್ಷಕ ಶಂಕರಪ್ಪ ತಮ್ಮ ಸಮ್ಮುಖದಲ್ಲಿ ಮತ್ತೊಂದು ಲಾರಿಗೆ ಬಿಯರ್ ಬಾಕ್ಸ್ಗಳನ್ನು ತುಂಬಿಸಿ ಕೇರಳಕ್ಕೆ ಕಳುಹಿಸಿದರು.