ಡಿಕೆ ಶಿವಕುಮಾರ್ ಮೀರ್ ಸಾದಿಕ್ ಅಂತೆ.. ಸಹೋದರ ಡಿ.ಕೆ. ಸುರೇಶ್ ಏನಂದ್ರು?
ಬೆಂಗಳೂರು: ಇಷ್ಟು ದಿನ ಡಿಸಿಎಂ ಎಂದು ಗೌರವ ಕೊಟ್ಟು ನಾನು ಸುಮ್ನಿದ್ದೆ. ಅವನು ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದು ಡಿ.ಕೆ.ಶಿವಕುಮಾರ್‌ರನ್ನ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಮೀರ್ ಸಾದಿಕ್‌ಗೆ ಹೋಲಿಕೆ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷರ ಸಹೋದರ ಸಂಸದ ಡಿ.ಕೆ.ಸುರೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯಾರೇ ಆದ್ರೂ ಬೈಎಲೆಕ್ಷನ್ ವಿಚಾರದ ಬಗ್ಗೆ ಮಾತಾಡಬೇಕು. ಮೀರ್ ಸಾದಿಕ್ ಯಾರೆಂದು ಬಿಜೆಪಿಯ ಎಲ್ಲರಿಗೂ ಗೊತ್ತಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧ ಡಿ.ಕೆ.ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸ್ಥಾನದಿಂದ ಬಿಎಸ್ವೈನ […]
ಬೆಂಗಳೂರು: ಇಷ್ಟು ದಿನ ಡಿಸಿಎಂ ಎಂದು ಗೌರವ ಕೊಟ್ಟು ನಾನು ಸುಮ್ನಿದ್ದೆ. ಅವನು ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದು ಡಿ.ಕೆ.ಶಿವಕುಮಾರ್‌ರನ್ನ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಮೀರ್ ಸಾದಿಕ್‌ಗೆ ಹೋಲಿಕೆ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷರ ಸಹೋದರ ಸಂಸದ ಡಿ.ಕೆ.ಸುರೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಯಾರೇ ಆದ್ರೂ ಬೈಎಲೆಕ್ಷನ್ ವಿಚಾರದ ಬಗ್ಗೆ ಮಾತಾಡಬೇಕು. ಮೀರ್ ಸಾದಿಕ್ ಯಾರೆಂದು ಬಿಜೆಪಿಯ ಎಲ್ಲರಿಗೂ ಗೊತ್ತಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧ ಡಿ.ಕೆ.ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸ್ಥಾನದಿಂದ ಬಿಎಸ್ವೈನ ಇಳಿಸಲು ಹಿಂಬಾಗಿಲಿಂದ ಯತ್ನ ನಡೆಸಲಾಗುತ್ತಿದೆ. ಯಾರು ಯಾರ ಮನೆ ಬಾಗಿಲು ತಟ್ಟುತ್ತಿದ್ದಾರೆಂದು ಗೊತ್ತಿದೆ. ಹಾಗಾಗಿ, ಮೀರ್ ಸಾದಿಕ್ ಯಾರೆಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಸುರೇಶ್ ತಿರುಗೇಟು ನೀಡಿದ್ದಾರೆ.
‘ಮಿತ್ರ ಮಂಡಳಿ’ ಜನ ಏನೆಲ್ಲ ಲೂಟಿ ಮಾಡಿದ್ದಾರೆಂದು ಗೊತ್ತು ‘ಮಿತ್ರ ಮಂಡಳಿ’ ಜನ ಏನೆಲ್ಲ ಲೂಟಿ ಮಾಡಿದ್ದಾರೆಂದು ಗೊತ್ತು. ಅಷ್ಟ ದಿಕ್ಪಾಲಕರು, ಪಾಂಡವರಿಂದ ಕೋಟಿ ಕೋಟಿ ಲೂಟಿ ಆಗಿದೆ. 2 ಸಾವಿರ ಕೋಟಿ ಲೂಟಿ ಹೊಡೆದಿರುವ ಬಗ್ಗೆ ಮೊದಲು ಉತ್ತರ ಕೊಡಲಿ. ಇದು ಲೂಟಿಕೋರರ ಸರ್ಕಾರವೇ ಹೊರತು ಬೇರೆ ಏನಿಲ್ಲ ಎಂದು ಖಾರವಾಗಿ ಮಾತನಾಡಿದರು.
ಮೀರ್ ಸಾದಿಕ್ತನದ ನಾಯಕತ್ವ ವಹಿಸಿರುವವನೇ ಇವನು. ನಾನು ಅವನ ಹೆಸರು ಹೇಳುವುದಿಲ್ಲವೆಂದು ಎಂದು ಸುರೇಶ್ ನೇರವಾಗಿ ವಾಗ್ದಾಳಿ ನಡೆಸಿದರು. ಅದೇನೋ ಆಡಿಯೋ ಅಂತೆ, ನಾಳೆಯೇ ಬಿಡುಗಡೆ ಮಾಡಲಿ. ಇವನಿಗೆ ಡಿಕೆಶಿ ಬಳಿ ಪ್ರಮಾಣ ಮಾಡಿಸುವ ಯೋಗ್ಯತೆ ಏನಿದೆ. ಚಿಕ್ಕವಯಸ್ಸಿಗೆ ಬಿಜೆಪಿಯವರು ಏನೋ ಅವಕಾಶ ನೀಡಿದ್ದಾರೆ ಎಂದು ಸುರೇಶ್ಗೆ ಡಿಸಿಎಂಗೆ ಏಕವಚನದಲ್ಲೇ ಉದ್ದೇಶಿಸಿದ್ದಾರೆ.
ಮೀರ್ ಸಾದಿಕ್ತನ ಬಿಜೆಪಿಯವರಿಗೆ ಸಂಬಂಧಿಸಿರುವುದು. ಸಿಎಂ ಬಿಎಸ್ವೈರನ್ನು ಇಳಿಸಲು ಮೀರ್ ಸಾದಿಕ್ತನ ಮಾಡಿ ಮೀಡಿಯಾ ಮುಂದೆ ಪ್ರಾಮಾಣಿಕನಂತೆ ಪೋಸ್ ಕೊಡೋದು ಅವನು. ಬೆಂಗಳೂರಿನ ಅಭಿವೃದ್ಧಿ ಮೀಸಲಿಟ್ಟ ಹಣ ಲೂಟಿ ಮಾಡಿದ್ದಾರೆ.
ಕೊರೊನಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಬೇಕಿದ್ರೆ ನಿಮ್ಮ ಜೀವ ನೀವೇ ಉಳಿಸಿಕೊಳ್ಳಿರೆಂದು ಹೇಳುತ್ತಾರೆ. ಇವರಿಗೆ ಕೇಂದ್ರದಿಂದ ಪರಿಹಾರ ತರುವ ಯೋಗ್ಯತೆಯೇ ಇಲ್ಲ. ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯುವುದೇ ಕಾಯಕ. ಇದೊಂದು ಲೂಟಿಕೋರರ ಸರ್ಕಾರವೆಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಜವಾದ ಮೀರ್ ಸಾದಿಕ್ ಇದ್ರೆ ಅದು ಡಿ.ಕೆ. ಶಿವಕುಮಾರ್ -DCM ಅಶ್ವತ್ಥ್ ನಾರಾಯಣ್
Published On - 4:16 pm, Tue, 20 October 20