ಸಿದ್ದರಾಮಯ್ಯ ಕಚೇರಿ ಎದುರು ರೊಚ್ಚಿಗೆದ್ದ ಪ್ರವಾಹ ಸಂತ್ರಸ್ತೆ

ಬಾಗಲಕೋಟೆ: ತಾವು ಪ್ರತಿನಿಧಿಸುವ  ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು. ತಮಗೊಂದು ಸೂರಿಗಾಗಿ ಸಿದ್ದರಾಮಯ್ಯ ಕಚೇರಿಗೆ ಅರ್ಜಿ ಸಲ್ಲಿಸಲು ಬಾದಾಮಿ ತಾಲೂಕಿನ ನೆಲವಿಗಿ ಗ್ರಾಮದ ಯಲ್ಲವ್ವ ಹನಮಂತಪ್ಪ ಗಾರವಾಡ ಬಂದಿದ್ದರು. ಆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದರು. ಇದ್ದವರು ಸರ್ಕಾರದಿಂದ ಎರಡೆರಡು ಮನೆ ಹಾಕಿಸಿಕೊಂಡಾರ. ನನಗೆ ಮನೆ ಇಲ್ಲ. ಅರ್ಜಿ […]

ಸಿದ್ದರಾಮಯ್ಯ ಕಚೇರಿ ಎದುರು ರೊಚ್ಚಿಗೆದ್ದ ಪ್ರವಾಹ ಸಂತ್ರಸ್ತೆ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 20, 2020 | 3:03 PM

ಬಾಗಲಕೋಟೆ: ತಾವು ಪ್ರತಿನಿಧಿಸುವ  ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು. ತಮಗೊಂದು ಸೂರಿಗಾಗಿ ಸಿದ್ದರಾಮಯ್ಯ ಕಚೇರಿಗೆ ಅರ್ಜಿ ಸಲ್ಲಿಸಲು ಬಾದಾಮಿ ತಾಲೂಕಿನ ನೆಲವಿಗಿ ಗ್ರಾಮದ ಯಲ್ಲವ್ವ ಹನಮಂತಪ್ಪ ಗಾರವಾಡ ಬಂದಿದ್ದರು. ಆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದರು.

ಇದ್ದವರು ಸರ್ಕಾರದಿಂದ ಎರಡೆರಡು ಮನೆ ಹಾಕಿಸಿಕೊಂಡಾರ. ನನಗೆ ಮನೆ ಇಲ್ಲ. ಅರ್ಜಿ ಕೊಟ್ಟೂ ಕೊಟ್ಟು ಸಾಕಾಗಿದೆ. ಮಲಪ್ರಭಾ ನದಿಯಲ್ಲಿ ಪ್ರವಾಹ ಬಂದಾಗ ಇದ್ದ ಚಪ್ಪರ (ಗುಡಿಸಲು) ಹೋಗೈತಿ. ಮಗಳ ತಗೊಂಡು ಹೊಳೆಯಾಗ ಈಜಿಕೊಂಡು ಬಂದಿದ್ದೇನೆ.

ಒಂದು ವರ್ಷದಿಂದ ದೇವಸ್ಥಾನದಲ್ಲಿ ಇದ್ದೇನೆ. ಸಾಹೇಬ್ರು ಮನೆ ಹಾಕಿಕೊಡ್ತೀನಿ ಅಂತಾ ಹೇಳಿ ಹೋದ್ರು. ಆದರೆ, ದಾದ್ ಮಾಡಿಲ್ಲ ಅವರು ಎಂದು ತಮ್ಮ ನೋವು ತೋಡಿಕೊಂಡರು. ಯಾಕ್ರೀ ನಮ್ಮ ಜಾತಿ (ಸಿದ್ದರಾಮಯ್ಯ), ನಾವ್ ಆರಿಸಿ ತಂದು, ನಮ್ಮನ್ನ ಕೇಳಲ್ಲ ಅಂದ್ರ ನೀವ್ಯಾಕ? ಎಂದು ಯಲ್ಲವ್ವ ಹನಮಂತಪ್ಪ ಗಾರವಾಡ ಸಿದ್ದರಾಮಯ್ಯಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ಜೊತೆಗೆ, ನಿಮ್ಮಂಥ ಲೀಡರು ಎಣ್ಣಿ ಹಾಕಿ ಸಾಯಿ ಹೊಡೀರಿ ನಮ್ಮಂಥವರನ್ನ ಎಂದು ಸ್ಥಳೀಯ ನಾಯಕರ ವಿರುದ್ಧವೂ ನೆರೆ ಸಂತ್ರಸ್ತೆ ಆಕ್ರೋಶ ಹೊರಹಾಕಿದಳು. ಜೊತೆಗೆ, ಶಂಕ್ರಮ್ಮನ ಮೇಲೆ ಆಣೆ ಮಾಡಿ ಹೇಳ್ತೇನಿ. ನನಗಾ ಮನೆ ಇಲ್ಲ. ಗುಡ್ಯಾಗ ಅದೇನಿ ಎಂಬ ತಮ್ಮ ಅಸಹಾಯಕತೆ ಹಂಚಿಕೊಂಡರು.

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ