ಟ್ಯಾಬ್ ಪೂರೈಕೆ ಮಾಡಿದ ಕಂಪನಿಗೆ ಹಣ‌ ಪಾವತಿಸದಕ್ಕೆ ಕರ್ನಾಟಕದ ಇಬ್ಬರು IAS ಅಧಿಕಾರಿಗಳಿಗೆ ಬಂಧನ ವಾರಂಟ್

ಟ್ಯಾಬ್ ಪೂರೈಕೆ ಮಾಡಿದ ಕಂಪನಿಗೆ ಹಣ‌ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯವು ಇಬ್ಬರು ಐಎಎಸ್ ಅಧಿಕಾರಿಗಳಿಗೆ ಬಂಧನ ವಾರೆಂಟ್ ಜಾರಿಗೊಳಿಸಿದೆ.

ಟ್ಯಾಬ್ ಪೂರೈಕೆ ಮಾಡಿದ ಕಂಪನಿಗೆ ಹಣ‌ ಪಾವತಿಸದಕ್ಕೆ ಕರ್ನಾಟಕದ ಇಬ್ಬರು IAS ಅಧಿಕಾರಿಗಳಿಗೆ ಬಂಧನ ವಾರಂಟ್
ಡಿ.ರಂದೀಪ್ ಮತ್ತು ಟಿ.ಕೆ.ಅನಿಲ್ ಕುಮಾರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 16, 2023 | 7:20 PM

ಬೆಂಗಳೂರು: ಟ್ಯಾಬ್ ಪೂರೈಕೆ ಮಾಡಿದ ಕಂಪನಿಗೆ ಬಾಕಿ ಹಣ‌ ಪಾವತಿಸದಕ್ಕೆ ಇಬ್ಬರು ಇಬ್ಬರು ಐಎಎಸ್ ಅಧಿಕಾರಿಗಳಿಗೆ ವಾಣಿಜ್ಯ ನ್ಯಾಯಾಲಯ ಬಂಧನ ವಾರಂಟ್(arrest warrant) ಜಾರಿ ಮಾಡಿದೆ. ಐಎಎಸ್ ಅಧಿಕಾರಿಗಳಾದ ಟಿ.ಕೆ.ಅನಿಲ್ ಕುಮಾರ್ ಮತ್ತು ಡಿ.ರಂದೀಪ್​ಗೆ (D Randeep, TK Anil Kumar) ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ(Bengaluru commercial court) ಬಂಧನ ವಾರಂಟ್ ಜಾರಿಗೊಳಿಸಿದೆ.

2017ರಲ್ಲಿ ಟ್ಯಾಬ್ ಪೂರೈಸಿದ್ದ ಕಂಪನಿಗೆ 6.94 ಕೋಟಿ ರೂ. ಪಾವತಿಸದೇ ಬಾಕಿ ಉಳಿಸಿಕಳ್ಳಲಾಗಿತ್ತು. ಮಧ್ಯಸ್ಥಿಕೆದಾರರ ಆದೇಶದ‌ ಹೊರತಾಗಿಯೂ ಬಾಕಿ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆದೇಶ ಜಾರಿಗೆ ತೇಜಸ್ಕೊ ಟೆಕ್ನೋಸಾಫ್ಟ್ ಅರ್ಜಿ ಸಲ್ಲಿಸಿತ್ತು‌. ಹೀಗಾಗಿ ಐಎಎಸ್ ಅಧಿಕಾರಿಗಳಾದ ಟಿ.ಕೆ.ಅನಿಲ್ ಕುಮಾರ್, ಡಿ.ರಂದೀಪ್​ಗೆ ವಾಣಿಜ್ಯ ನ್ಯಾಯಾಲಯ ಬಂಧನಕ್ಕೆ ವಾರಂಟ್ ಜಾರಿಗೊಳಿಸಿದೆ.

ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್, ಮೇಕ್ ಮೈ ಟ್ರಿಪ್‌, ಓಯೋಗೆ ದಂಡ

ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್, ಮೇಕ್ ಮೈ ಟ್ರಿಪ್‌, ಓಯೋ(MakeMy Trip, Oyo)ಗೆ ಜಿಲ್ಲಾ ಗ್ರಾಹಕರ ಆಯೋಗವು 11.38 ಲಕ್ಷ ರೂ. ದಂಡ ವಿಧಿಸಿದೆ. ಹುಬ್ಬಳ್ಳಿಯ ವಿದ್ಯಾನಗರ ಮೂಲದ ದೀಪಕ್ ರತನ್ ಹಾಗೂ ಸ್ನೇಹಿತರು ಸೇರಿ ಒಟ್ಟು 21 ಜನರು ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಮುಂಚಿತವಾಗಿ ಬುಕ್ ಮಾಡಿದರೂ ರೂಮ್ ನೀಡದೆ. 21 ಜನರ ಕುಟುಂಬವೊಂದಕ್ಕೆ ತೊಂದರೆ ನೀಡಿರುವ ಹಿನ್ನೆಲೆ, ಹೋಟೆಲ್ ಹಾಗೂ ಬುಕ್ ಮಾಡಿಕೊಂಡ ಎರಡು ಕಂಪನಿಗಳಿಗೆ ಇದೀಗ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿದೆ.