ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಆರೀಫ್ ಪಾಷಾಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲು ಮನೆ ಬಳಿ ಆ್ಯಂಬುಲೆನ್ಸ್ ಆಗಮಿಸಿದೆ. ಪಾದರಾಯನಪುರದ ಕಾರ್ಪೊರೇಟರ್ ನಿವಾಸಕ್ಕೆ ಆ್ಯಂಬುಲೆನ್ಸ್ನಲ್ಲಿ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗಲು ಕಾರ್ಪೊರೇಟರ್ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಕಾರ್ಪೊರೇಟರ್ ನಿವಾಸದ ಬಳಿ ದೊಡ್ಡ ಹೈಡ್ರಾಮಾ ನಡೆಯುತ್ತಿದೆ. ಸ್ವತಃ ಸ್ಥಳೀಯ ಶಾಸಕ ಜಮೀರ್ ಅಹಮದ್ ಸಹ ಕಾರ್ಪೊರೇಟರ್ ನಿವಾಸಕ್ಕೆ ಆಗಮಿಸಿದ್ದಾರೆ.
ಕೊರೊನಾ ತಗುಲಿದ್ದು ಗೊತ್ತಿದ್ದರೂ ಗಲಾಟೆಯಲ್ಲಿ ತಂದೆ ಭಾಗಿ:
ಪಾದರಾಯನಪುರದ ಕಾರ್ಪೊರೇಟರ್‌ಗೆ ಕೊರೊನಾ ತಗುಲಿರುವುದು ಗೊತ್ತಿದ್ದರೂ ನಿನ್ನೆ ಮಹಿಳೆಯರ ಗಲಾಟೆಯಲ್ಲಿ ತಂದೆ ಭಾಗಿಯಾಗಿದ್ದಾರೆ. ಗಲಾಟೆಯಲ್ಲಿ ನೂರಾರು ಮಹಿಳೆಯರು ಭಾಗಿ ಆಗಿದ್ದರು. ಸ್ಥಳಕ್ಕೆ ಹೋಗಿ ಮಹಿಳೆಯರನ್ನ ಆರೀಫ್ ಪಾಷಾ ಸಮಾಧಾನಪಡಿಸಿದ್ದರು. ಈ ವೇಳೆ ಆರೀಫ್ ಪಾಷಾ ಹಲವರನ್ನ ಮುಟ್ಟಿದ್ದರು. ನಿನ್ನೆ ಕೆಲ ರಸ್ತೆ ತೆರವುಗೊಳಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಜೊತೆ ಮಹಿಳೆಯರು ವಾಗ್ವಾದ ಸಹ ನಡೆಸಿದ್ದರು.
Published On - 11:59 am, Sat, 30 May 20