ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ ಮಾಡಿದ್ದ. ಅದರಂತೆ ಅಕ್ಟೋಬರ್ 9ರಂದು ರಾಜೇಶ್ ಬಾಬು ಮನೆಯಲ್ಲಿದ್ದ ವಜ್ರ, ಚಿನ್ನಾಭರಣಗಳಿದ್ದ ಲಾಕರ್ ಕದ್ದೊಯ್ದಿದ್ದಾನೆ.. ಈ ಲಾಕರ್‌ನಲ್ಲಿ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಬೆಲೆಬಾಳುವ ವಜ್ರ ಮತ್ತು ಚಿನ್ನದ ಆಭರಣ ಇತ್ತು. ಈ ಕಳ್ಳತನದಿಂದ ಶಾಕ್ ಆದ ಮನೆ ಮಾಲೀಕ ರಾಜೇಶ್ ಜೆ.ಪಿ ನಗರ ಠಾಣೆಯಲ್ಲಿ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿಜಿಟಲ್ ಲಾಕರ್ ಸಮೇತ ಎಸ್ಕೇಪ್ ಆಗಿದ್ದ ಕೈಲಾಸ್‌ನನ್ನ 48 ಗಂಟೆಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .
ಮಾಲೀಕನಿಗೆ ವಂಚಿಸಿ ಆರೋಪಿ ಚಾಪೆ ಕೆಳಗೆ ನುಸುಳಿದ್ರೆ, ಬೆಂಗಳೂರು ಪೊಲೀಸರ ಚಾಣಾಕ್ಷ ತನಿಖೆ ನಡೆಸಿ ರಂಗೋಲಿ ಕೆಳೆಗೆ ನುಸುಳಿ ಕೈಲಾಸ್‌ನನ್ನ ಲಾಕ್ ಮಾಡಿದ್ದಾರೆ. ಒಟ್ನಲ್ಲಿ ಅಯ್ಯೋ ಪಾಪ ಎಂದು ಪರ ರಾಜ್ಯದವರಿಗೆ ಕೆಲಸ ನೀಡುವ ಮುಂಚೇ ಮೂರು ಸಲ ಯೋಚನೆ ಮಾಡಿ. ಇದು ಒಂದು ಉದಾಹರಣೆ.