ಮಳೆ ಅವಾಂತರ: ಮೀನಾಕ್ಷಿ ಕಲ್ಯಾಣ ಮಂಟಪ ಜಲಾವೃತ, ಹಲವೆಡೆ ಧರೆಗುರುಳಿದ ಮರಗಳು

ಬೆಂಗಳೂರು: ನಗರದ ಹಲವೆಡೆ ರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಆರ್.ಆರ್.ನಗರದ ಮೀನಾಕ್ಷಿ ಕಲ್ಯಾಣ ಮಂಟಪ ಜಲಾವೃತಗೊಂಡಿದೆ. ನೀರು ಹೊರಹಾಕಲು ಕಲ್ಯಾಣ ಮಂಟಪ ಸಿಬ್ಬಂದಿ ಪರದಾಡುತ್ತಿದ್ದಾರೆ. ಇನ್ನು ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ನಿನ್ನೆ ನಡೆಯಬೇಕಿದ್ದ ರಿಸೆಪ್ಷನ್ ರದ್ದಾಗಿತ್ತು. ಆದರೆ ಇಂದೂ ಕೂಡ ಇದೇ ಪರಿಸ್ಥಿತಿ ಇದ್ದು, ಡೈನಿಂಗ್ ಹಾಲ್​ನಲ್ಲಿ ನಿಂತಿರುವ ನೀರನ್ನು ಸಿಬ್ಬಂದಿ ಹೊರ ಹಾಕುವ ಪ್ರಯತ್ನದಲ್ಲಿರುವ ದೃಶ್ಯ ಕಂಡು ಬಂದಿದೆ. ಬೈಕ್ ಸವಾರ ಅಪಾಯದಿಂದ ಪಾರು: ಜಯನಗರ, ಜೆ.ಪಿ.ನಗರ, ಶಾಂತಿನಗರದ ಕರ್ಲಿ ಸ್ಟ್ರೀಟ್, […]

ಮಳೆ ಅವಾಂತರ: ಮೀನಾಕ್ಷಿ ಕಲ್ಯಾಣ ಮಂಟಪ ಜಲಾವೃತ, ಹಲವೆಡೆ ಧರೆಗುರುಳಿದ ಮರಗಳು

Updated on: Oct 21, 2020 | 7:32 AM

ಬೆಂಗಳೂರು: ನಗರದ ಹಲವೆಡೆ ರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಆರ್.ಆರ್.ನಗರದ ಮೀನಾಕ್ಷಿ ಕಲ್ಯಾಣ ಮಂಟಪ ಜಲಾವೃತಗೊಂಡಿದೆ. ನೀರು ಹೊರಹಾಕಲು ಕಲ್ಯಾಣ ಮಂಟಪ ಸಿಬ್ಬಂದಿ ಪರದಾಡುತ್ತಿದ್ದಾರೆ. ಇನ್ನು ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ನಿನ್ನೆ ನಡೆಯಬೇಕಿದ್ದ ರಿಸೆಪ್ಷನ್ ರದ್ದಾಗಿತ್ತು. ಆದರೆ ಇಂದೂ ಕೂಡ ಇದೇ ಪರಿಸ್ಥಿತಿ ಇದ್ದು, ಡೈನಿಂಗ್ ಹಾಲ್​ನಲ್ಲಿ ನಿಂತಿರುವ ನೀರನ್ನು ಸಿಬ್ಬಂದಿ ಹೊರ ಹಾಕುವ ಪ್ರಯತ್ನದಲ್ಲಿರುವ ದೃಶ್ಯ ಕಂಡು ಬಂದಿದೆ.

ಬೈಕ್ ಸವಾರ ಅಪಾಯದಿಂದ ಪಾರು:
ಜಯನಗರ, ಜೆ.ಪಿ.ನಗರ, ಶಾಂತಿನಗರದ ಕರ್ಲಿ ಸ್ಟ್ರೀಟ್, ಬನಶಂಕರಿ 3ನೇ ಹಂತದಲ್ಲಿ ಮರಗಳು ನೆಲಕ್ಕುರುಳಿವೆ. ಬನಶಂಕರಿ 3ನೇ ಹಂತದಲ್ಲಿ ಸವಾರನ ಮೇಲೆ ಕೊಂಬೆ ಬಿದ್ದಿದೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾನೆ. ಇನ್ನು ಶಾಂತಿನಗರದ ಕರ್ಲಿ ಸ್ಟ್ರೀಟ್‌ನಲ್ಲಿ ಬೃಹತ್ ಮರ ಬಿದ್ದು 2 ವಿದ್ಯುತ್ ಕಂಬಗಳು ತುಂಡಾಗಿವೆ. ಮಳೆಗೆ ಕೋರಮಂಗಲದ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ.