ರಾಷ್ಟ್ರೀಯ ವಿಚಾರಕ್ಕೆ ಮನ್ನಣೆ ನೀಡುವ ಭದ್ರಾವತಿ ಜನ ಈ ಬಾರಿಯೂ ಬಿಜೆಪಿ ಆಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು ಈಶ್ವರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 19, 2022 | 9:59 PM

ಅಟಲ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಭಾರಿ ಪ್ರಮಾಣದಲ್ಲಿ ಪ್ರಭಾವಿತರಾಗಿರುವ ಭದ್ರಾವತಿ ಜನ ಕಳೆದ ಬಾರಿಯ ಚುನಾವನೆಯಲ್ಲಿ ಎರಡು ಗೂಳಿಗಳನ್ನು ಹಿಮ್ಮೆಟ್ಟಿಸಿ ಬಿಜೆಪಿ ಆಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದರು ಎಂದು ಈಶ್ವರಪ್ಪ ಹೇಳಿದರು.

ದೆಹಲಿಯ ಕೆಂಪು ಕೋಟೆಯ ಮೇಲೆ ಭಗವಾ ಧ್ವಜ (saffron flag) ಹಾರಿಸುತ್ತೇವೆ ಅಂತ ವಿವಾದಾತ್ಮಕ ಹೇಳಿಕೆ ನೀಡಿ ರಾಜ್ಯಾದಂತ ತೀವ್ರ ಸ್ವರೂಪದ ಖಂಡನೆಗೆ ಗುರಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರು (KS Eshwarppa) ಶನಿವಾರ ಪೇಪರ್ ಟೌನ್ ಭದ್ರಾವತಿಯಲ್ಲಿ (Paper Town Bhadravati) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದರು. ಮುಂದಿನ ವಿಧಾನಸಭಾ ಚುನಾಣೆಯಲ್ಲಿ ಯಾರು ಭದ್ರಾವತಿಯಿಂದ ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆ ಈ ಕಾರ್ಯಕ್ರಮದಲ್ಲಿ ಯಾಕೆ ಪ್ರಸ್ತಾಪಿಸಲ್ಪಟ್ಟಿತೋ ಅಂತ ನಮಗೆ ಗೊತ್ತಿಲ್ಲ. ಆದರೆ ಈಶ್ವರಪ್ಪ ನಿಮ್ಮಂಥ ಬೃಹತ್ ಕಾರ್ಯಕರ್ತರ ಪಡೆ ಇರಬೇಕಾದರೆ ಬೇರೆ ಯಾವನು ತಾನೆ ಗೆಲ್ಲಲು ಸಾಧ್ಯ ಅಂತ ಹೇಳಿ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸುತ್ತಾರೆ. ರಾಷ್ಟ್ರೀಯ ವಿಚಾರ ಬಂದಾಗ ಭದ್ರಾವತಿ ಯಾವತ್ತೂ ಹಿಂದೆ ಬಿದ್ದಿಲ್ಲ, ಅದು ಗಣಪತಿ ಉತ್ಸವ ಆಗಿರಬಹುದು ಇಲ್ಲವೇ ಬೇರೆ ಯಾವುದಾದರೂ ಕಾರ್ಯಕ್ರಮವಾಗಿರಬಹುದು, ಭದ್ರಾವತಿ ಇಡೀ ಶಿವಮೊಗ್ಗ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ ಎಂದು ಸಚಿವರು ಹೇಳಿದರು.

ಅಟಲ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಭಾರಿ ಪ್ರಮಾಣದಲ್ಲಿ ಪ್ರಭಾವಿತರಾಗಿರುವ ಭದ್ರಾವತಿ ಜನ ಕಳೆದ ಬಾರಿಯ ಚುನಾವನೆಯಲ್ಲಿ ಎರಡು ಗೂಳಿಗಳನ್ನು ಹಿಮ್ಮೆಟ್ಟಿಸಿ ಬಿಜೆಪಿ ಆಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದರು ಎಂದು ಈಶ್ವರಪ್ಪ ಹೇಳಿದರು.

ಸದಾ ರಾಷ್ಟ್ರೀಯ ವಿಚಾರಕ್ಕೆ ಮಹತ್ವ ನೀಡುವ ಭದ್ರಾವತಿ ಜನ ಈ ಬಾರಿಯೂ ಬಿಜೆಪಿಗೆ ವೋಟು ನೀಡಲಿದ್ದಾರೆ ಅಂತ ಹೇಳಿದ ಈಶ್ವರಪ್ಪ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ ಸದಸ್ಯರನ್ನು ಸ್ವಾಗತಿಸಿದರು.

ಇದನ್ನೂ ಓದಿ:   ಕಾಂಗ್ರೆಸ್ ಅಹೋರಾತ್ರಿ ಧರಣಿ: ಸದನದಲ್ಲೇ ರಾತ್ರಿ ಕಳೆದ ‘ಕೈ’ ನಾಯಕರು, ಈಶ್ವರಪ್ಪ ರಾಜೀನಾಮೆ ಬೇಕಾಗಿಲ್ಲ ವಜಾ ಮಾಡಬೇಕು ಎಂದ ಡಿಕೆಶಿ