ಕಾಂಗ್ರೆಸ್ ಅಹೋರಾತ್ರಿ ಧರಣಿ: ಸದನದಲ್ಲೇ ರಾತ್ರಿ ಕಳೆದ ‘ಕೈ’ ನಾಯಕರು, ಈಶ್ವರಪ್ಪ ರಾಜೀನಾಮೆ ಬೇಕಾಗಿಲ್ಲ ವಜಾ ಮಾಡಬೇಕು ಎಂದ ಡಿಕೆಶಿ

ನಮ್ಮ ಧರಣಿ ಮುಂದುವರಿಯುತ್ತದೆ. ನಾನು ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೇಳುತ್ತಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನಮಗೆ ಬೇಕಾಗಿಲ್ಲ. ಸಿಎಂ, ಗವರ್ನರ್‌ ಈಶ್ವರಪ್ಪರನ್ನು ವಜಾ ಮಾಡಬೇಕು. ರಾಜೀನಾಮೆ ಎಂಬುದು ಬಹಳ ಗೌರವಯುತವಾದ ಪದ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ರು.

ಕಾಂಗ್ರೆಸ್ ಅಹೋರಾತ್ರಿ ಧರಣಿ: ಸದನದಲ್ಲೇ ರಾತ್ರಿ ಕಳೆದ ‘ಕೈ’ ನಾಯಕರು, ಈಶ್ವರಪ್ಪ ರಾಜೀನಾಮೆ ಬೇಕಾಗಿಲ್ಲ ವಜಾ ಮಾಡಬೇಕು ಎಂದ ಡಿಕೆಶಿ
ಸದನದಲ್ಲೇ ರಾತ್ರಿ ಕಳೆದ ಕಾಂಗ್ರೆಸ್ ನಾಯಕರು
Follow us
TV9 Web
| Updated By: ಆಯೇಷಾ ಬಾನು

Updated on:Feb 18, 2022 | 10:17 AM

ಬೆಂಗಳೂರು: ಕೆ.ಎಸ್. ಈಶ್ವರಪ್ಪ(KS Eshwarappa) ಕೊಟ್ಟ ಕೇಸರಿ ಧ್ವಜ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್,(Congress) ರಾಜೀನಾಮೆಗೆ ಪಟ್ಟು ಹಿಡಿದಿದೆ. ಈಶ್ವರಪ್ಪರನ್ನ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಅಹೋರಾತ್ರಿ ಹೋರಾಟ ನಡೆಸಿದೆ. ‘ಕೈ’ ಶಾಸಕರು, ಎಂಎಲ್‌ಸಿಗಳು ಸದನದಲ್ಲೇ ರಾತ್ರಿ ಕಳೆದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai), ಬಿ.ಎಸ್‌.ಯಡಿಯೂರಪ್ಪ(BS Yediyurappa), ಸಚಿವ ಆರ್‌.ಅಶೋಕ್ ಮನವಿಗೂ ಬಗ್ಗದ ‘ಕೈ’ ನಾಯಕರು ಸದನದಲ್ಲೇ ಹಾಸಿಗೆ, ದಿಂಬು ಹಾಸಿ ಮಲಗಿದ್ರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಎನ್.ಎ.ಹ್ಯಾರಿಸ್, ಅಜಯ್ ಸಿಂಗ್, ರಮೇಶ್ ಕುಮಾರ್, ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ರೂಪಾ ಶಶಿಧರ್, ಕುಸುಮಾ ಶಿವಳ್ಳಿ ಸೇರಿದಂತೆ ಸದನದಲ್ಲೇ ಹಲವು ಕಾಂಗ್ರೆಸ್ ನಾಯಕರು ರಾತ್ರಿ ಕಳೆದಿದ್ದಾರೆ. ಹಿಜಾಬ್ ಕೇಸರಿ ದಂಗಲ್ನಲ್ಲಿ ಈಶ್ವರಪ್ಪ ತಲೆದಂಡ ಮಾಡಲೇಬೇಕೆಂದು ಪಣ ತೊಟ್ಟಿರೋ ಕಾಂಗ್ರೆಸ್ ನಾಯಕರು, ಸದನದಲ್ಲಿ ನಿನ್ನೆ ಹಗಲಿಡೀ ಅಬ್ಬರಿಸಿದ್ರು. ನಿನ್ನೆ ಮಧ್ಯಾಹ್ನದ ವರೆಗೂ ನಡೆದ ಕಲಾಪದಲ್ಲಿ ಈಶ್ವರಪ್ಪ ರಾಜೀನಾಮೆಯನ್ನೂ ಕೊಡ್ಲಿಲ್ಲ. ಕ್ಷಮೆಯನ್ನೂ ಯಾಚಿಸಲಿಲ್ಲ. ಇದ್ರಿಂದ ಕೆರಳಿದ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ರು.

ನಮ್ಮ ಧರಣಿ ಮುಂದುವರಿಯುತ್ತದೆ -ಡಿ.ಕೆ.ಶಿವಕುಮಾರ್ ನಮ್ಮ ಧರಣಿ ಮುಂದುವರಿಯುತ್ತದೆ. ನಾನು ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೇಳುತ್ತಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನಮಗೆ ಬೇಕಾಗಿಲ್ಲ. ಸಿಎಂ, ಗವರ್ನರ್‌ ಈಶ್ವರಪ್ಪರನ್ನು ವಜಾ ಮಾಡಬೇಕು. ರಾಜೀನಾಮೆ ಎಂಬುದು ಬಹಳ ಗೌರವಯುತವಾದ ಪದ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ರು. ದೊಡ್ಡ ಆಸ್ತಿವಂತ ಎಂದು ಬಿಜೆಪಿ ಈಶ್ವರಪ್ಪರನ್ನ ಸ್ವೀಕರಿಸುತ್ತಿದೆ. ಬಿಜೆಪಿಯವರಿಗೆ ರಾಷ್ಟ್ರಧ್ವಜ ಎಂದರೇನೇ ಗೊತ್ತಿಲ್ಲ. ಅವರು ನಮ್ಮ ತಂದೆ, ತಾಯಿ ಎಂದೆಲ್ಲ ಮಾತನಾಡುತ್ತಾರಲ್ಲ ನಾವು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಸಿಎಂ ಆಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದೆ. ರಾಷ್ಟ್ರದ್ರೋಹಿ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ಸೋಮವಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ಕೊಡುತ್ತೇನೆ. ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸುವಂತೆ ಸಂದೇಶ ಕೊಡುತ್ತೇನೆ ಎಂದರು.

ಕಾಂಗ್ರೆಸ್ ಶಾಸಕರಿಗೆ ಸಚಿವಾಲಯದಿಂದಲೇ ಡಿನ್ನರ್ ಸದನದಲ್ಲಿ ಅಹೋರಾತ್ರಿ ಧರಣಿ ಮಾಡ್ತಿದ್ದ ಕಾಂಗ್ರೆಸ್ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಧಾನಸಭೆ ಮತ್ತು ಪರಿಷತ್ ಸದಸ್ಯರಿಗೆ ಭರ್ಜರಿ ಭೋಜನ ಕಾದಿತ್ತು. ಚಪಾತಿ, ಮುದ್ದೆ, ಅನ್ನ, ಸಾಂಬರ್, ಫ್ರೂಟ್ ಸಲಾಡ್, ರಸಂ, ಪಲ್ಯ, ಕೋಸಂಬರಿ, ಪಲಾವ್, ಡ್ರೈ ಜಾಮೂನ್ ಸೇರಿ ಹದಿನೈದಕ್ಕೂ ಹೆಚ್ಚು ಐಟಂಗಳಿದ್ದವು.‌ ಸ್ಪೀಕರ್ ಕಾಗೇರಿ ಸೂಚನೆಯ ಮೇರೆಗೆ, ವಿಧಾನಸಭೆ ಸಚಿವಾಲಯದಿಂದ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಕಾಂಗ್ರೆಸ್ ನಾಯಕರು ಕೆಲ ಕಾಲ ಮುಂದಿನ ತಂತ್ರಗಾರಿಕೆ ಚರ್ಚೆ ಮಾಡಿದ್ರು. ಬಳಿಕ ಡಾ.ಅಜಯ್ ಸಿಂಗ್ ಅಮಿತಾಬ್ ಬಚ್ಚನ್ರ ತಂದೆ ಹರಿವಂಶ್ ರಾಯ್ರ ಪ್ರಯತ್ನ ಪಡುವವರು ಎಂದೂ ಸೋಲಲ್ಲ ಅನ್ನೋ ಶಾಯರಿ ಹೇಳಿ ಗಮನ ಸೆಳೆದ್ರು. ಇತ್ತ ಸೌಮ್ಯ ರೆಡ್ಡಿ ಕೂಡ ಭಗವಂತ ಬಾಯ್ಕೊಟ್ಟ ಅಂತಾ ಹಾಡಿ ರಂಜಿಸಿದ್ರು.

ಧರಣಿ ನಿರತ ‘ಕೈ’ ನಾಯಕರಿಗೆ ಹೆಲ್ತ್ ಚೆಕಪ್ ಸದನದಲ್ಲಿ ಕಾಂಗ್ರೆಸ್ ಶಾಸಕರು ಅಹೋರಾತ್ರಿ ನಡೆಸ್ತಿದ್ದರಿಂದ ಮುನ್ನೆಚ್ಚರಿಕೆಯಿಂದಾಗಿ, ಎಲ್ಲಾ ನಾಯಕರ ಆರೋಗ್ಯ ತಪಾಸಣೆ ಮಾಡಲಾಯ್ತು. ಸಚಿವಾಲಯದ ವೈದ್ಯರಿಂದ ನಾಯಕರಿಗೆ ಜನರಲ್ ಚೆಕಪ್ ನಡೆಸಿದ್ರು. ರಾತ್ರಿ ಇಡೀ ಧರಣಿ ನಡೆಸಿದ್ದ ಕಾಂಗ್ರೆಸ್ ನಾಯಕರು ಬೆಳಗ್ಗಿನ ಜಾವ ಒಬ್ಬೊಬ್ಬರಾಗಿ ವಾಕಿಂಗ್, ವ್ಯಾಯಾಮ, ಯೋಗ ಮಾಡುದ್ರು. ಈ ವೇಳೆ ಸಭಾಪತಿ ಹೊರಟ್ಟಿ, ವಾಕಿಂಗ್ ಬಂದಿದ್ದ ನಾಯಕರಿಗೆ ವ್ಯವಸ್ಥೆ ಹೇಗಿದೆ, ಕಾಫಿ ಕುಡಿದ್ರಾ ಎಂದು ವಿಚಾರಿಸಿದರು.

ಇವತ್ತು ಕೂಡಾ ಅಹೋ ರಾತ್ರಿ ಧರಣಿ ಮಾಡ್ತೀವಿ ಇನ್ನು ಈ ಬಗ್ಗೆ ಮಾತನಾಡಿರುವ ಯು.ಟಿ. ಖಾದರ್, ಇವತ್ತು ಕೂಡಾ ಅಹೋ ರಾತ್ರಿ ಧರಣಿ ನಡೆಸಲು ಸಿಎಲ್ಪಿ ಅಧ್ಯಕ್ಷರು ನಿರ್ಧಾರ ಮಾಡಿದ್ದಾರೆ. ಎರಡು ದಿವಸಗಳ ಕಾಲ ಅವಕಾಶ ಕೊಟ್ಟಿದ್ದೆವು. ಈ ಸರ್ಕಾರ ಭಾರತ ಧ್ವಜಕ್ಕೆ ಮಾಡಿರುವ ಅವನಮಾನ ಇದು. ಈ ರೀತಿ ಮಾಡಿದ್ರೂ ಸರ್ಕಾರ ಭಾರತ ಜನಕ್ಕೆ ಕ್ಷಮೆ ಕೂಡ ಕೇಳಲಿಲ್ಲ ಎಂದರು.

ಸಚಿವ ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಹೋರಾಟ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನಮ್ಮ ಹೋರಾಟ ಮುಂದುವರಿಯುತ್ತದೆ. ಸದನದ ಹೊರಗೂ ನಮ್ಮ ಹೋರಾಟ ನಡೆಯಲಿದೆ. ಅವರಿಗೆ ರಾಷ್ಟ್ರ, ರಾಷ್ಟ್ರಧ್ವಜ, ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾದವರಲ್ಲ. RSSನವರು ಮೊದಲೂ ಸಂವಿಧಾನವನ್ನು ವಿರೋಧಿಸಿದ್ದರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ರು.

ಬಿಜೆಪಿಯವರಿಗೆ ಒಂದು ರೀತಿಯ ಹಠ. ಏನೇ ಮಾಡಿದ್ರೂ ಜನರು ಒಪ್ಪಿಕೊಳ್ಳುತ್ತಾರೆಂಬ ಭಾವನೆ. ನಾವು ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಕೈಬಿಡಲ್ಲ ಎಂದು ವಿಧಾನಸೌಧದಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ರು.

ಸೋಮವಾರ ವಿಧಾನಮಂಡಲ ಜಂಟಿ ಅಧಿವೇಶನ ಅಂತ್ಯ? ಇಂದು ಕೂಡಾ ಎರಡೂ ಸದನಗಳಲ್ಲಿ ಧರಣಿ ಮುಂದುವರಿಯಲಿದೆ. ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವ ತನಕ ಧರಣಿ ವಾಪಸ್ ಇಲ್ಲ ಎಂದು ಸಿಎಂ, ಸ್ಪೀಕರ್ ಮತ್ತು ಸಂಸದೀಯ ಸಚಿವರಿಗೆ ಸಂದೇಶ ರವಾನೆ ಮಾಡಲಾಗಿದೆ. ಇಂದು‌ ಧರಣಿ ಜೋರಾದರೆ ಸೋಮವಾರಕ್ಕೆ ಕಲಾಪ ಮುಂದೂಡುವ ಸಾಧ್ಯತೆ ಇದೆ. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಪ್ರಸ್ತಾವಕ್ಕೆ ಸೋಮವಾರ ಅಂಗೀಕಾರ ಪಡೆದುಕೊಳ್ಳಲು ಸರ್ಕಾರದ ಲೆಕ್ಕಾಚಾರ ಹಾಕಿದೆ. ಸೋಮವಾರ ಸಂಜೆ ವಿಧಾನ ಪರಿಷತ್​ನಲ್ಲಿ ಬಾಕಿ ಇರುವ ವಿಧೇಯಕಗಳ ಅಂಗೀಕಾರ ಆಗುವ ಸಾಧ್ಯತೆ ಇದೆ. ಸೋಮವಾರ ಸಂಜೆ ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಸಾಧ್ಯತೆ ಇದೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಎಂ ಬಸವರಾಜ ಬೊಮ್ಮಾಯಿ: ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ನಿರ್ಧಾರ

Published On - 8:18 am, Fri, 18 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ