ಚಿನ್ನದ ವ್ಯಾಪಾರಿಗೆ ಬೆದರಿಕೆ: ಭೀಮಾತೀರದ ನಟೋರಿಯಸ್ ಬಾಗಪ್ಪ ಹರಿಜನ ಬಂಧನ

|

Updated on: Aug 27, 2020 | 9:08 AM

ವಿಜಯಪುರ: 5 ಕೋಟಿ ನಗದು, 5 ಕೆಜಿ ಚಿನ್ನ ನೀಡುವಂತೆ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಭೀಮಾತೀರದ ನಟೋರಿಯಸ್ ಬಾಗಪ್ಪ ಹರಿಜನನನ್ನು ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊವಿಡ್ ಟೆಸ್ಟ್ ಬಳಿಕ ಬಾಗಪ್ಪ ಹರಿಜನನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತೆ. ಸದ್ಯ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಬಾಗಪ್ಪ ಹರಿಜನನನ್ನು ಇರಿಸಲಾಗಿದೆ. ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ 5 ಕೋಟಿ ಹಣ, 5 ಕೆಜಿ ಚಿನ್ನ ನೀಡುವಂತೆ ಬೆದರಿಕೆ ಹಾಕಿದ್ದರು. ಹೀಗಾಗಿ ಜುಲೈ 22ರಂದು ಡಾಂಗೆ ಚಡಚಣ ಠಾಣೆಗೆ […]

ಚಿನ್ನದ ವ್ಯಾಪಾರಿಗೆ ಬೆದರಿಕೆ: ಭೀಮಾತೀರದ ನಟೋರಿಯಸ್ ಬಾಗಪ್ಪ ಹರಿಜನ ಬಂಧನ
Follow us on

ವಿಜಯಪುರ: 5 ಕೋಟಿ ನಗದು, 5 ಕೆಜಿ ಚಿನ್ನ ನೀಡುವಂತೆ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಭೀಮಾತೀರದ ನಟೋರಿಯಸ್ ಬಾಗಪ್ಪ ಹರಿಜನನನ್ನು ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೊವಿಡ್ ಟೆಸ್ಟ್ ಬಳಿಕ ಬಾಗಪ್ಪ ಹರಿಜನನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತೆ. ಸದ್ಯ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಬಾಗಪ್ಪ ಹರಿಜನನನ್ನು ಇರಿಸಲಾಗಿದೆ. ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ 5 ಕೋಟಿ ಹಣ, 5 ಕೆಜಿ ಚಿನ್ನ ನೀಡುವಂತೆ ಬೆದರಿಕೆ ಹಾಕಿದ್ದರು. ಹೀಗಾಗಿ ಜುಲೈ 22ರಂದು ಡಾಂಗೆ ಚಡಚಣ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ಎ1 ಆರೋಪಿ ಲಕ್ಷ್ಮೀಕಾಂತಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. A3 ಮಹಾದೇವ ಭೈರಗೊಂಡನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಸದ್ಯ ಆತ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈಗ ಎ2 ಆರೋಪಿ ಬಾಗಪ್ಪ ಹರಿಜನನನ್ನು ಬಂಧಿಸಿದ್ದು, A1ಆರೋಪಿ ಲಕ್ಷ್ಮೀಕಾಂತ ಪಾಟೀಲ್ ತಲೆ ಮರೆಸಿಕೊಂಡಿದ್ದಾನೆ.

ಸಂಬಂಧಿಕರಿಂದ ದೂರ ಸರಿದಿದ್ದ ಬಾಗಪ್ಪ:
ಬಾಗಪ್ಪ ಹರಿಜನ ಭೀಮಾತೀರದ ನಟೋರಿಯಸ್, ಪೊಲೀಸ್ ಎನ್​ಕೌಂಟರ್​ಗೆ ಬಲಿಯಾದ ದಿವಂಗತ ಚಂದಪ್ಪ ಹರಿಜನ ಬಲಗೈ ಬಂಟನಾಗಿದ್ದ. ಆಸ್ತಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಕಾರಣದಿಂದ ಬಾಗಪ್ಪ, ಚಂದಪ್ಪ ಸಹೋದರರಿಂದ ಹಾಗೂ ಸಂಬಂಧಿಕರಿಂದ ದೂರ ಸರಿದಿದ್ದ.

ಬಾಗಪ್ಪ ಪ್ರತ್ಯೇಕ ಬೆಟಾಲಿಯನ್ ಕಟ್ಟಿಕೊಂಡಿದ್ದ. ಕೆರೂರಿನ ಪುತ್ರಪ್ಪ ಭೈರಗೊಂಡ ಮೇಲೆ ಗುಂಡು ಹಾರಿಸಿದ್ದ ಆರೋಪ ಈತನ ಮೇಲಿತ್ತು. ಇದರಂತೆ ಕೊಲೆ ಸುಲಿಗೆ ಪ್ರಕರಣಗಳ ಆರೋಪಿಯಾಗಿದ್ದರೂ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದ. 2018 ಆಗಸ್ಟ್ 8 ರಂದು ವಿಜಯಪುರ ‌ನ್ಯಾಯಾಲಯದ ಆವರಣದಲ್ಲಿ ಬಾಗಪ್ಪನ ಮೇಲೆ ಗುಂಡಿನ ದಾಳಿ ನಡೆದಿತ್ತು. ಮೂರು ಗುಂಡುಗಳು ಹೊಕ್ಕಿದರೂ ಬಾಗಪ್ಪ ಗುಣಮುಖನಾಗಿದ್ದ.

ದಿ. ಚಂದಪ್ಪ‌ ಹರಿಜನ ಸಹೋದರನ ಮಕ್ಕಳು ಹಾಗೂ ಸಂಬಂಧಿಕರು ಸುಫಾರಿ ನೀಡಿ ಬಾಗಪ್ಪ ಹತ್ಯೆಗೆ ಪ್ಲ್ಯಾನ್ ಮಾಡಿದ್ದರು. ಬಾಗಪ್ಪನಿಗೆ‌ ಗುಂಡು ಹಾರಿಸಿ ಪೀರಪ್ಪ ಹಡಪದ ಅಂದರ್ ಆಗಿದ್ದ. ಜಾಮೀನಿನ‌ ಮೇಲೆ ಹೊರಗಿರುವ ಪೀರಪ್ಪ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ನಾಮದೇವ ಡಾಂಗೆ ಮಾಡಿರುವ ಬೆದರಿಕೆ ಪ್ರಕರಣ ಆರೋಪ ಬಿಟ್ಟು ಬೇರೆ ಯಾವುದೇ ಪ್ರಕರಣ ಬಾಗಪ್ಪ ಮೇಲಿಲ್ಲಾ.

Published On - 7:35 am, Thu, 27 August 20