ಸಹೋದರಿ ಚಿಕಿತ್ಸೆಗಾಗಿ ಹಣಕ್ಕಾಗಿ ಅಲೆದಾಡ್ತಿದ್ದ ಮಹಿಳೆ ಮೇಲೆ 12 ಮಂದಿಯಿಂದ ಗ್ಯಾಂಗ್‌ರೇಪ್!
ಹೈದರಾಬಾದ್: ತೆಲಂಗಾಣದಲ್ಲಿ ಕಳೆದ ವರ್ಷ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಆರೋಪಿಗಳನ್ನ ಎನ್ಕೌಂಟರ್ ಮಾಡಲಾಗಿತ್ತು. ಇದಾದ ಬಳಿಕ ತೆಲಂಗಾಣದಲ್ಲಿ ಅತ್ಯಾಚಾರಗಳನ್ನ ತಡೆಯಲು ವಿಶೇಷ ಮಹಿಳಾ ಪೊಲೀಸ್ ತಂಡಗಳನ್ನ ರಚಿಸಲಾಗಿದೆ. ಇಷ್ಟಾದ್ರೂ, ಸೋಮವಾರ ರಾತ್ರಿ ನಿಜಾಮಾಬಾದ್‌ನಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಆಗಿದೆ. ಹಣ ಹೊಂದಿಸೋದಾಗಿ ನಂಬಿಸಿ ಸಾಮೂಹಿಕ ಅತ್ಯಾಚಾರ! ತೆಲಂಗಾಣದ ನಿಜಾಮಾಬಾದ್‌ನಲ್ಲಿ ವಿಲಕ್ಷಣ ಗ್ಯಾಂಗ್ ರೇಪ್ ಪ್ರಕರಣವೊಂದು ನಡೆದಿದೆ. ಅಸಹಾಯಕ ಮಹಿಳೆಗೆ ಹಣದಾಸೆ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರೋ ಆಘಾತಕಾರಿ ಘಟನೆ ನಡೆದಿದೆ. 12 ಮಂದಿಯಿಂದ ಗ್ಯಾಂಗ್‌ರೇಪ್: […]
ಹೈದರಾಬಾದ್: ತೆಲಂಗಾಣದಲ್ಲಿ ಕಳೆದ ವರ್ಷ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಆರೋಪಿಗಳನ್ನ ಎನ್ಕೌಂಟರ್ ಮಾಡಲಾಗಿತ್ತು. ಇದಾದ ಬಳಿಕ ತೆಲಂಗಾಣದಲ್ಲಿ ಅತ್ಯಾಚಾರಗಳನ್ನ ತಡೆಯಲು ವಿಶೇಷ ಮಹಿಳಾ ಪೊಲೀಸ್ ತಂಡಗಳನ್ನ ರಚಿಸಲಾಗಿದೆ. ಇಷ್ಟಾದ್ರೂ, ಸೋಮವಾರ ರಾತ್ರಿ ನಿಜಾಮಾಬಾದ್‌ನಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಆಗಿದೆ.
ಹಣ ಹೊಂದಿಸೋದಾಗಿ ನಂಬಿಸಿ ಸಾಮೂಹಿಕ ಅತ್ಯಾಚಾರ! ತೆಲಂಗಾಣದ ನಿಜಾಮಾಬಾದ್‌ನಲ್ಲಿ ವಿಲಕ್ಷಣ ಗ್ಯಾಂಗ್ ರೇಪ್ ಪ್ರಕರಣವೊಂದು ನಡೆದಿದೆ. ಅಸಹಾಯಕ ಮಹಿಳೆಗೆ ಹಣದಾಸೆ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರೋ ಆಘಾತಕಾರಿ ಘಟನೆ ನಡೆದಿದೆ.
12 ಮಂದಿಯಿಂದ ಗ್ಯಾಂಗ್‌ರೇಪ್: ನಿಜಾಮಬಾದ್ನ ಎಡಪಲ್ಲಿ ಎಂಬಲ್ಲಿ ಮಹಿಳೆಯೊಬ್ಬರಿಗೆ ಅಪಘಾತವಾಗಿತ್ತು. ಆಕೆಯನ್ನ ಆಸ್ಪತ್ರೆಗೆ ದಾಖಲಿಸಲು ಸಹೋದರಿ ಬಂದಿದ್ದರು. ಚಿಕಿತ್ಸೆಗೆ ಹೆಚ್ಚಿನ ಹಣ ಬೇಕು ಅಂತ ಆಸ್ಪತ್ರೆಯವರು ಹೇಳಿದ್ದಾರೆ. ಹೀಗಾಗಿ, ದಿಕ್ಕು ತೋಚದಂತಾದ ಮಹಿಳೆ ತನ್ನ ಸಹೋದರಿಯನ್ನ ಉಳಿಸಿಕೊಳ್ಳಲು ಹಣ ಹೊಂದಿಸಲು ನಿಜಾಮಾಬಾದ್ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದಳು.
ಈಕೆಯನ್ನ ಗಮನಿಸಿದ್ದ ವಿಕ್ಕಿ ಅನ್ನೋ ಯುವಕ ಹಣಕ್ಕೆ ನೆರವಾಗೋದಾಗಿ ಆಕೆಯನ್ನ ನಂಬಿಸಿ ಕರೆದೊಯ್ದ. ರೆವಿನ್ಯೂ ಭವನದ ಬಳಿ ಖಾಲಿ ಇದ್ದ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈತ ಅತ್ಯಾಚಾರ ಎಸಗುತ್ತಿದ್ದ ವೇಳೆಗೆ ಆತನ 11 ಸ್ನೇಹಿತರನ್ನ ಅಲ್ಲಿಗೆ ಕರೆಸಿಕೊಂಡ. ಇವರು ಸಹ ಒಬ್ಬರಾದ ನಂತರ ಒಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದೆಲ್ಲಾ ಆಗುವ ವೇಳೆಗೆ ಅಲ್ಲಿಗೆ ಪೊಲೀಸರ ಗಸ್ತು ವಾಹನ ಬಂದಿದೆ. ಯಾವಾಗ ಗಸ್ತು ವಾಹನ ಬಂತೋ, ಆರೋಪಿಗಳು ಅಲ್ಲಿಂದ ಓಡಿಹೋದ್ರು. ಆರೋಪಿಗಳು ಪರಾರಿಯಾಗುತ್ತಿದ್ದುದನ್ನ ಗಮನಿಸಿದ ಪೊಲೀಸರು, ಘಟನಾ ಸ್ಥಳಕ್ಕೆ ಬಂದ್ರು. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನ ಗಮನಿಸಿ, ಆಸ್ಪತ್ರೆಗೆ ದಾಖಲಿಸಿದ್ರು.
ಮಹಿಳೆಗೆ ಪ್ರಜ್ಞೆ ಬಂದ ಮೇಲೆ ಆಕೆ ನೀಡಿದ ದೂರಿನನ್ವಯ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ನಿಜಾಮಾಬಾದ್ ಒನ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸರು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.