ದೊಡ್ಡ ಗ್ಯಾಪ್​ ನಂತರ ಮತ್ತೆ ಕಿರುತೆರೆಗೆ ಮರಳಲು ಸಜ್ಜಾದ ಅಮೃತ ವರ್ಷಿಣಿ ರಜಿನಿ!

|

Updated on: Feb 27, 2021 | 5:21 PM

ಅಮೃತ ವರ್ಷಿಣಿ ಧಾರಾವಾಹಿ ಪೂರ್ಣಗೊಂಡ ನಂತರ ಕಿರುತೆರೆಯಿಂದ ರಜಿನಿ ದೂರವೇ ಉಳಿದಿದ್ದರು. ಈಗ, ಅವರು ಮತ್ತೆ ಕಿರುತೆರೆಗೆ ಬರೋಕೆ ಸಜ್ಜಾಗಿದ್ದಾರೆ.

ದೊಡ್ಡ ಗ್ಯಾಪ್​ ನಂತರ ಮತ್ತೆ ಕಿರುತೆರೆಗೆ ಮರಳಲು ಸಜ್ಜಾದ ಅಮೃತ ವರ್ಷಿಣಿ ರಜಿನಿ!
ರಜಿನಿ
Follow us on

ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದ ಅಮೃತ ವರ್ಷಿಣಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ದೂಳಿಬ್ಬಿಸಿತ್ತು. ಕರ್ನಾಟಕದ ಪ್ರತಿ ಮನೆಯಲ್ಲೂ ಈ ಧಾರಾವಾಹಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು ರಜಿನಿ. ಈ ಧಾರಾವಾಹಿ ಹಿಟ್​ ಆಗಲು ಅವರು ಕೂಡ ಕಾರಣರಾಗಿದ್ದರು. ಈ ಧಾರಾವಾಹಿ ಪೂರ್ಣಗೊಂಡ ನಂತರ ಕಿರುತೆರೆಯಿಂದ ಅವರು ದೂರವೇ ಉಳಿದಿದ್ದರು. ಈಗ, ಅವರು ಮತ್ತೆ ಕಿರುತೆರೆಗೆ ಬರೋಕೆ ಸಜ್ಜಾಗಿದ್ದಾರೆ.

ರಜಿನಿ ಈಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ! ಅಷ್ಟಕ್ಕೂ ಯಾವುದು ಆ ಧಾರಾವಾಹಿ ಎನ್ನುವ ಪ್ರಶ್ನೆ ನಿಮ್ಮದೇ ಅದಕ್ಕೆ ಇಲ್ಲಿದೆ ಉತ್ತರ. ಅಂದಹಾಗೆ, ರಜಿನಿ ಈ ಬಾರಿ ನಟಿಸುತ್ತಿರುವುದು ಧಾರಾವಾಹಿಯಲ್ಲಲ್ಲ. ಮೂಲಗಳ ಪ್ರಕಾರ ಕನ್ನಡ ಬಿಗ್​ ಬಾಸ್​ ಸೀಸನ್​​ 8ರಲ್ಲಿ ರಜಿನಿ ಸ್ಪರ್ಧಿಯಾಗಿ ಮನೆಯೊಳಗೆ ತೆರಳುತ್ತಿದ್ದಾರಂತೆ.

ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ ಪ್ರಾರಂಭ ಆಗುತ್ತಿದೆ. ನಿತ್ಯ 9:30ಕ್ಕೆ ಬಿಗ್​ ಬಾಸ್​ ಶೋ ಪ್ರಸಾರವಾಗಲಿದೆ. ಈ ಬಾರಿಯದ್ದು ಸೆಲೆಬ್ರಿಟಿ ಸೀಸನ್​. ಹೀಗಾಗಿ, ಜನಸಾಮಾನ್ಯರು ಮನೆ ಒಳಗೆ ಹೋಗುತ್ತಿಲ್ಲ. ಹೀಗಾಗಿ ಅಮೃತ ಅವರನ್ನು ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವ ಮಾತಿದೆ.

ರಜಿನಿ ಅವರಿಗೆ ಬಿಗ್ ಬಾಸ್​ ಮನೆ ಒಳಗೆ ಬರಲು ಕಲರ್ಸ್​ ಕನ್ನಡದವರು ಆಫರ್​ ನೀಡಿದ್ದರು. ಇದನ್ನು ರಜಿನಿ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಜಿನಿ ಹೋಟೆಲ್​ ಒಂದರಲ್ಲಿ ಕ್ವಾರಂಟೈನ್​ ಆಗಿದ್ದು, ನಾಳೆ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Bigg Boss Kannada 8: ಕನ್ನಡ ಬಿಗ್​ ಬಾಸ್​​ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!

Bigg Boss Kannada 8: ಬಿಗ್​ ಬಾಸ್​ ಸೀಸನ್​ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ