Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ

| Updated By: ಸುಷ್ಮಾ ಚಕ್ರೆ

Updated on: Aug 09, 2021 | 12:41 AM

Bigg Boss Kannada 8 Winner | ಮಹಾಭಾರತ ಕಾಮಿಡಿ ಶೋ ಮೂಲಕ ಮನೆಮಾತಾಗಿದ್ದ ಮಂಜು ಪಾವಗಡ ಈಗ ಬಿಗ್ ಬಾಸ್​ ಕನ್ನಡ 8ರ ವಿನ್ನರ್ ಆಗಿದ್ದಾರೆ.

Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ
ಮಂಜು ಪಾವಗಡ
Follow us on

ಬಿಗ್ ಬಾಸ್​ ಕನ್ನಡ ರಿಯಾಲಿಟಿ ಶೋನ ಮತ್ತೊಂದು ಸೀಸನ್ ಮುಕ್ತಾಯವಾಗಿದೆ. ಬಿಗ್ ಬಾಸ್​ ಕನ್ನಡ 8ನೇ ಸೀಸನ್​ನ (Bigg Boss Kannada 8 Winner) ವಿಜೇತರಾಗಿ ಮಂಜು ಪಾವಗಡ (Manju Pavagada) ಹೊರಹೊಮ್ಮಿದ್ದಾರೆ. ಅರವಿಂದ್ ಕೆ.ಪಿ. (Aravind KP) ರನ್ನರ್ ಅಪ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್​ ವಿನ್ನರ್ ಮಂಜು ಪಾವಗಡ ಅವರಿಗೆ 45 ಲಕ್ಷಕ್ಕೂ ಹೆಚ್ಚು ಮತಗಳು ಬಂದಿವೆ. ಬಡ ಕುಟುಂಬದಲ್ಲಿ ಹುಟ್ಟಿ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡಿಕೊಂಡು ಮಹಾಭಾರತ ಕಾಮಿಡಿ ಶೋ ಮೂಲಕ ಮನೆಮಾತಾಗಿದ್ದ ಮಂಜು ಪಾವಗಡ ಈಗ ಬಿಗ್ ಬಾಸ್​ ಕನ್ನಡ 8ರ ವಿನ್ನರ್ ಆಗಿದ್ದಾರೆ. ತಮ್ಮ ಗೆಲುವನ್ನು ಮಜಾಭಾರತ ಶೋಗೆ ಮಂಜು ಪಾವಗಡ ಅರ್ಪಿಸಿದ್ದಾರೆ.

‘ನನಗೆ ಅರವಿಂದ್ ಸ್ಫೂರ್ತಿ. ಬಿಗ್ ಬಾಸ್​ಗೆ ಬಂದ ಮೊದಲ ದಿನವೇ ನನ್ನ ಪ್ರತಿಸ್ಪರ್ಧಿ ಅರವಿಂದ್ ಮತ್ತು ರಾಜೀವ್ ಎಂದು ನನಗೆ ಗೊತ್ತಾಗಿತ್ತು. ಎದುರಾಳಿ ಪ್ರಬಲರಾಗಿದ್ದಾಗ ಮಾತ್ರ ನಾವು ಚೆನ್ನಾಗಿ ಆಡಲು ಸಾಧ್ಯ. ಈ ಬಹುಮಾನದಲ್ಲಿ ಬಂದ ಹಣವನ್ನು ಏನು ಮಾಡಬೇಕೆಂದು ನಾನಿನ್ನೂ ಯೋಚನೆ ಮಾಡಿಲ್ಲ. ಇದು ನನ್ನ ಬದುಕಿಗೆ ಹೊಸ ದಾರಿಯನ್ನೇ ಮಾಡಿಕೊಟ್ಟಿದೆ’ ಎಂದು ಮಂಜು ಪಾವಗಡ ಹೇಳಿದ್ದಾರೆ.

ಇಂದಿನ ಎಪಿಸೋಡ್​ನಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳೂ ಮಂಜು ಪಾವಗಡ ಅವರೇ ಗೆಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರ ಜೊತೆಗೆ ಕರ್ನಾಟಕ ಮಾತ್ರವಲ್ಲದೆ ಭಾರತದ ಬೇರೆ ಬೇರೆ ಮೂಲೆಗಳಿಂದಲೂ 45 ಲಕ್ಷಕ್ಕೂ ಹೆಚ್ಚು ಜನರು ಮಂಜು ಪಾವಗಡ ಅವರಿಗೆ ಮತ ಹಾಕಿ ಬಿಗ್ ಬಾಸ್​ ಕನ್ನಡ 8ನೇ ಸೀಸನ್ ಗೆಲ್ಲಿಸಿದ್ದಾರೆ. ಮಂಜು ಪಾವಗಡ ಅವರಿಗೆ 53 ಲಕ್ಷ ರೂ ಹಾಗೂ ಬಿಗ್ ಬಾಸ್ ಟ್ರೋಫಿ ಸಿಕ್ಕಿದೆ. ಹಾಗೇ, ರನ್ನರ್ ಅಪ್ ಆಗಿರುವ ಅವರಿಂದ್ ಕೆಪಿ ಅವರಿಗೆ 11 ಲಕ್ಷ ರೂ. ಸಿಕ್ಕಿದೆ. ಅರವಿಂದ್ ಅವರಿಗೆ ಕಿಚ್ಚ ಸುದೀಪ್ ವೇದಿಕೆಯಲ್ಲಿ ತಮ್ಮ ಜಾಕೆಟ್ ಬಿಚ್ಚಿ ಕೊಟ್ಟಿದ್ದಾರೆ.

ಬಿಗ್ ಬಾಸ್​ ಕನ್ನಡದ ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಮಂಜು ಪಾವಗಡ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ. ಬಿಗ್ ಬಾಸ್ ಕನ್ನಡ 8ನೇ ಸೀಸನ್​ನ ಮೊದಲ ರನ್ನರ್ ಅಪ್ ಆಗಿರುವ ಅರವಿಂದ್ ಕೆ.ಪಿ.  43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ವೋಟಿಂಗ್​ನಲ್ಲಿ ಹೊಸ ದಾಖಲೆ ಬರೆದ ಬಿಗ್ ಬಾಸ್ 8; ವಿನ್ನರ್ ಪಡೆದ ಮತ ನೋಡಿ ಸುದೀಪ್​ಗೂ ಅಚ್ಚರಿ

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

(Bigg Boss Kannada 8 Winner Manju Pavagada says Runner Up Aravind KP is his Inspiration)

Published On - 12:37 am, Mon, 9 August 21