BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಕೇಳಿದಾಗ ನಿಧಿ ಸುಬ್ಬಯ್ಯ, ಮಂಜು ನಿಮಗೆ ಮದುವೆ ಆಗಿದೆಯಾ? ಇದು ಸತ್ಯನಾ ಎಂದು ಕೇಳಿದ್ದಾರೆ. ದಿವ್ಯಾ ಸುರೇಶ್​ ಅವರಂತೂ ಒಮ್ಮೆ ಗಾಬರಿ ಆದರು.

BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!
ಮಂಜು ಪಾವಗಡ
Edited By: ಆಯೇಷಾ ಬಾನು

Updated on: Mar 15, 2021 | 8:17 AM

ಎಲ್ಲಾ ಸೀಕ್ರೆಟ್​ ಹೇಳಿಕೊಳ್ಳೋಕೆ ಮನೆಯಲ್ಲಿ ಲ್ಯಾಗ್​ ಮಂಜು ಅವರೇ ಬೇಕು! ಎಲ್ಲ ಹೆಣ್ಣುಮಕ್ಕಳು ಮಂಜುನೇ ಬೇಕು ಅಂತಾರೆ. ಹೀಗೇಕೆ? ಅವರಿಗೆ ಮದುವೆ ಆಗಿದೆ ಎನ್ನುವ ಕಾರಣಕ್ಕೆ ಎಲ್ಲರೂ ಮಂಜು ಬಳಿ ಸಿಕ್ರೇಟ್​ ಹೇಳಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ ಎಂದರು ಸುದೀಪ್​. ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು! ಆಗ ಸುದೀಪ್​ ಕೇಳಿದ್ದು ಒಂದೇ ಪ್ರಶ್ನೆ, ಮಂಜು ಅವ್ರೇ ನಿಮಗೆ ಮದುವೆ ಆಗಿದೆ ಎನ್ನುವ ವಿಚಾರ ಯಾರಿಗೂ ಗೊತ್ತಿಲ್ವಾ? ಈ ಮಾತನ್ನು ಕೇಳಿ ಮಂಜು ಅವರೇ ಒಮ್ಮೆ ಅಚ್ಚರಿಗೊಂಡರು.

ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಕೇಳಿದಾಗ ನಿಧಿ ಸುಬ್ಬಯ್ಯ, ಮಂಜು ನಿಮಗೆ ಮದುವೆ ಆಗಿದೆಯಾ? ಇದು ಸತ್ಯನಾ ಎಂದು ಕೇಳಿದ್ದಾರೆ. ದಿವ್ಯಾ ಸುರೇಶ್​ ಅವರಂತೂ ಒಮ್ಮೆ ಗಾಬರಿ ಆದರು. ಆಗ ಉತ್ತರಿಸಿದ ಮಂಜು, ಆ ದಿನ ನೀವೇ ಎಲ್ಲರೂ ಸೇರಿ ದಿವ್ಯಾ ಹಾಗೂ ನನ್ನ ಮದುವೆ ಮಾಡಿಸಿದ್ದೀರಲ್ಲ ಎಂದು ಹಳೆಯ ಘಟನೆಯನ್ನು ನೆನಪಿಸಿದರು!

ಆ ದಿನ ನಾಟಕ ನಡೆಯುತ್ತಿತ್ತು. ಬಿಗ್​ ಬಾಸ್​ ಮನೆಯಲ್ಲಿ ನಾಟಕ ಮಾಡುತ್ತಲೇ ದಿವ್ಯಾ ಅವರನ್ನು ಮದುವೆ ಆಗಿದ್ದರು ಮಂಜು! ಕತ್ತಿನಲ್ಲಿದ್ದ ಮೈಕ್​ ಬ್ಯಾಗ್​ ಅನ್ನು ಮಂಜು, ದಿವ್ಯಾ ಕತ್ತಿಗೆ ಹಾಕಿದ್ದರು. ದಿವ್ಯಾ ಅದನ್ನು ತೆಗೆದು ಮತ್ತೆ ಮಂಜುನ ಕತ್ತಿಗೆ ಹಾಕಿದ್ದಾರೆ. ಈ ಮೂಲಕ ಮನೆಯವರೆಲ್ಲರೂ ಇವರ ಮದುವೆಯೇ ಆಗಿದೆ ಎನ್ನುವ ಘೋಷಣೆ ಮಾಡಿದ್ದರು.

ಈ ಘಟನೆಯನ್ನು ಮಂಜು ನೆನಪು ಮಾಡುತ್ತಿದ್ದಂತೆ ಎಲ್ಲರೂ ದೊಡ್ಡದಾಗಿ ನಕ್ಕರು. ಆಗ ಮಾತನಾಡಿದ ಸುದೀಪ್​, ಮಂಜು ಅವರೇ ನಿಮಗೆ ಮದುವೆ ಆಗಿಲ್ಲ ಅನ್ನೋದು ನಿಜ. ಆದರೆ, ನಿಮ್ಮ ಬಗ್ಗೆ ನಮಗೆ ಎರಡು ಸೀಕ್ರೆಟ್​ ಗೊತ್ತಿದೆ. ಬೇಕಿದ್ರೆ ಅವರನ್ನು ಒಳಗೆ ಕಳುಹಿಸುತ್ತೇವೆ ಎಂದರು. ಆಗ ಮಂಜು, ಅದೊಂದು ಕೆಲಸ ಮಾಡಬೇಡಿ ಎಂದು ಕೋರಿದರು.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us