ಬೆಂಗಳೂರಿಗರೇ ಎಚ್ಚರ: ನಮ್ಮ ಮೆಟ್ರೋ ಕಾಮಗಾರಿ ಬಳಿ ಓಡಾಡುವಾಗ ಹುಷಾರು!

| Updated By: ಸಾಧು ಶ್ರೀನಾಥ್​

Updated on: Aug 20, 2020 | 12:38 PM

ಬೆಂಗಳೂರು: ಕೊರೊನಾ ಕಾಲದಲ್ಲಿ ಜೀವನವನ್ನ ಕೈಯಲ್ಲಿ ಇಟ್ಟುಕೊಂಡು ನಗರದಲ್ಲಿ ಓಡಾಡುವ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಇದೀಗ ವಾಹನ ಸವಾರರಿಗೆ BMRCL ಸಂಸ್ಥೆಯ ನಿರ್ಲಕ್ಷ್ಯ ಮತ್ತಷ್ಟು ಭೀತಿ ಹುಟ್ಟಿಸಿದೆ. ಮತ್ತೆ ಮತ್ತೆ ಯಡವಟ್ಟುಗಳನ್ನು ಮಾಡುತ್ತಾ ಬರುತ್ತಿರುವ BMRCL ಇದೀಗ ಮೆಟ್ರೋ ರೈಲಿನ ಕಾಮಗಾರಿ ಸ್ಥಳಗಳಲ್ಲೂ ನಿರ್ಲಕ್ಷ್ಯ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 5ರಂದು ಮಧ್ಯಾಹ್ನದ ವೇಳೆ ಬನ್ನೇರುಘಟ್ಟ ರಸ್ತೆಯ ಗಿರಿಯಾಸ್ ಶೋ ರೂಮ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಏಕಾಏಕಿ ನಡುರಸ್ತೆಗೆ ಹತ್ತನ್ನೆರಡು ಮೆಟ್ರೋ […]

ಬೆಂಗಳೂರಿಗರೇ ಎಚ್ಚರ: ನಮ್ಮ ಮೆಟ್ರೋ ಕಾಮಗಾರಿ ಬಳಿ ಓಡಾಡುವಾಗ ಹುಷಾರು!
Follow us on

ಬೆಂಗಳೂರು: ಕೊರೊನಾ ಕಾಲದಲ್ಲಿ ಜೀವನವನ್ನ ಕೈಯಲ್ಲಿ ಇಟ್ಟುಕೊಂಡು ನಗರದಲ್ಲಿ ಓಡಾಡುವ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಇದೀಗ ವಾಹನ ಸವಾರರಿಗೆ BMRCL ಸಂಸ್ಥೆಯ ನಿರ್ಲಕ್ಷ್ಯ ಮತ್ತಷ್ಟು ಭೀತಿ ಹುಟ್ಟಿಸಿದೆ.

ಮತ್ತೆ ಮತ್ತೆ ಯಡವಟ್ಟುಗಳನ್ನು ಮಾಡುತ್ತಾ ಬರುತ್ತಿರುವ BMRCL ಇದೀಗ ಮೆಟ್ರೋ ರೈಲಿನ ಕಾಮಗಾರಿ ಸ್ಥಳಗಳಲ್ಲೂ ನಿರ್ಲಕ್ಷ್ಯ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 5ರಂದು ಮಧ್ಯಾಹ್ನದ ವೇಳೆ ಬನ್ನೇರುಘಟ್ಟ ರಸ್ತೆಯ ಗಿರಿಯಾಸ್ ಶೋ ರೂಮ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಏಕಾಏಕಿ ನಡುರಸ್ತೆಗೆ ಹತ್ತನ್ನೆರಡು ಮೆಟ್ರೋ ಬ್ಯಾರಿಕೇಡ್​ಗಳು ಉರುಳಿ ಬಿದ್ದಿವೆ.

ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಮೆಟ್ರೊ ಬ್ಯಾರಿಕೆಡ್​ಗಳು ಅಲ್ಲೇ ಬೈಕ್​ನಲ್ಲಿ ಹೋಗ್ತಿದ್ದ ಪ್ರದೀಪ್ ಕುಮಾರ್ ಎಂಬುವವರ ಮೇಲೆ ಉರುಳಿ ಬಿದ್ದು ಆತನ ಕಾಲು ಸಂಪೂರ್ಣವಾಗಿ ಕಟ್ ಆಗಿ ಹೋಗಿದೆ. ಕೂಡಲೇ ಗಾಯಾಳು ಪ್ರದೀಪ್​ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಗರದ ಖಾಸಗಿ ಶಾಲೆಯೊಂದರಲ್ಲಿ ಉದ್ಯೋಗಿಯಾಗಿರುವ ಗಾಯಾಳು ಪ್ರದೀಪ್ ಕುಮಾರ್ ಡೈರಿ ಸರ್ಕಲ್ ಕಡೆಯಿಂದ ಬನ್ನೇರುಘಟ್ಟ ಮಾರ್ಗವಾಗಿ ತೆರಳ್ತಿದ್ದಾಗ ಈ  ಘಟನೆ ಸಂಭವಿಸಿದೆ.